ಸಿಡ್ನಿ: ಪಾಕಿಸ್ತಾನ ವಿರುದ್ಧದ ಟಿ20 ವಿಶ್ವ ಕಪ್ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಭಾರತ ತಂಡದ ಗೆಲುವಿಗೆ ಕಾರಣರಾದ ವಿರಾಟ್ ಕೊಹ್ಲಿ (Virat Kohli) ಯನ್ನು ಸಾಮಾಜಿಕ ಜಾಲತಾಣದಲ್ಲಿ ಸರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಎಲ್ಲಡೆ ಬಿಂಬಿಸಲಾಗುತ್ತಿದೆ. ಆದರೆ ವಿರಾಟ್ ಕೊಹ್ಲಿ ಈ ಪಟ್ಟವನ್ನು ತಿರಸ್ಕರಿಸಿದ್ದಾರೆ.
ವಿರಾಟ್ ಕೊಹ್ಲಿ ‘ಸಾರ್ವಕಾಲಿಕ ಶ್ರೇಷ್ಠ’ ಆಟಗಾರರಲ್ಲಿ ಒಬ್ಬರು ಎಂದು ಕೆಲವು ಹಿರಿಯ ಕ್ರಿಕೆಟಿಗರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಚರ್ಚೆ ನಿರಂತರವಾಗಿದೆ. ಆದರೆ ಈಮಾತನ್ನು ಒಪ್ಪಲು ಸ್ವತಃ ಕೊಹ್ಲಿ ನಿರಾಕರಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರೂ ಆಗಿರುವ ಕೊಹ್ಲಿ, ಕ್ರಿಕೆಟ್ ಇತಿಹಾಸದಲ್ಲಿ ಇಬ್ಬರು ಮಾತ್ರವೇ ‘ಸಾರ್ವಕಾಲಿಕ ಶ್ರೇಷ್ಠ’ ಎನಿಸಿಕೊಳ್ಳುವ ಸಾಧನೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಕುರಿತು ‘ಸ್ಟಾರ್‌ಸ್ಪೋರ್ಟ್ಸ್’ ಕಾರ್ಯಕ್ರಮದಲ್ಲಿ ಮಾತನಾಡಿರುವ ಕೊಹ್ಲಿ, ‘ನನ್ನನ್ನು ನಾನು ಕ್ರಿಕೆಟ್‌ನ ‘ಸಾರ್ವಕಾಲಿಕ ಶ್ರೇಷ್ಠ’ ಎಂದು ಪರಿಗಣಿಸುವುದಿಲ್ಲ’ ನನ್ನ ಪ್ರಕಾರ ಕ್ರಿಕೆಟ್ನಲ್ಲಿ ಇಬ್ಬರು ಮಾತ್ರವೇ ಹಾಗೆ ಕರೆಸಿಕೊಳ್ಳುವ ಅರ್ಹತೆ ಹೊಂದಿದ್ದಾರೆ. ಅವರು ಸಚಿನ್ ತೆಂಡೂಲ್ಕರ್ ಮತ್ತು ವಿವಿಯನ್ ರಿಚರ್ಡ್ಸ್’ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ | T20 World Cup | ಭಾರತ-ನೆದರ್ಲೆಂಡ್ಸ್ ಪಂದ್ಯದ ವೇಳೆ ಯುವಕನ ಪ್ರೇಮ ನಿವೇದನೆ, ಒಪ್ಪಿದಳಾ ಯುವತಿ?