Site icon Vistara News

Virat Kohli | ಪ್ರಶಸ್ತಿ ಪಡೆದುಕೊಂಡು ಮಗುವಿನಂತೆ ಓಡಿದ ವಿರಾಟ್‌ ಕೊಹ್ಲಿ, ನಗೆಯುಕ್ಕಿಸಿದ ಸ್ಟಾರ್ ಬ್ಯಾಟರ್‌

virat kohli

ಹೈದರಾಬಾದ್‌ : ಭಾರತ ತಂಡದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ (Virat Kohli) ಮೈದಾನದಲ್ಲಿ ಆಕ್ರಮಣಕಾರಿ ವರ್ತನೆ ತೋರುತ್ತಾರೆ ಎಂಬ ಆರೋಪವನ್ನು ಹೊತ್ತುಕೊಂಡಿದ್ದಾರೆ. ಆದರೆ, ಅವರು ಎಷ್ಟು ಆಕ್ರಮಣಕಾರಿಯಾಗಿರುತ್ತಾರೋ ಅಷ್ಟೇ ವಿನೋದವನ್ನೂ ಮಾಡುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಅಂಥದ್ದೇ ಒಂದು ಪ್ರಸಂಗ ಭಾನುವಾರ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ ಬಳಿಕವೂ ನಡೆದಿದೆ. ಅದರ ವಿಡಿಯೊ ಸೋಮವಾರ ವೈರಲ್‌ ಆಗಿದ್ದು, ಕೊಹ್ಲಿಯ ಅಭಿಮಾನಿಗಳು ಈ ವಿಡಿಯೊಗೆ ನಾನಾ ಶೀರ್ಷಿಕೆಗಳನ್ನು ಕೊಟ್ಟಿದ್ದಾರೆ.

ಭಾನುವಾರದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ೬೩ ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಹೀಗಾಗಿ ಅವರಿಗೆ ಪಂದ್ಯದ ಎನರ್ಜೆಟಿಕ್‌ ಪ್ಲೇಯರ್‌ ಪ್ರಶಸ್ತಿ ಬಂದಿತ್ತು. ಅದನ್ನು ಪಡೆದುಕೊಂಡು ಅವರು ಸಣ್ಣ ಮಕ್ಕಳಂತೆ ಓಡಿಕೊಂಡು ವಾಪಸ್‌ ಬಂದಿದ್ದಾರೆ. ಅದನ್ನು ನೋಡಿದ ಉಳಿದ ಆಟಗಾರರು ಜೋರಾಗಿ ನಗಾಡಿದ್ದಾರೆ. ಪ್ರಶಸ್ತಿ ವಿತರಣೆ ಮಾಡಿದ ಗಣ್ಯರೂ ಮುಗುಳ್ನಗೆ ಬೀರಿದ್ದಾರೆ. ಕೆಲವರು ಇದಕ್ಕೆ ಸ್ಕೂಲ್‌ ಮಕ್ಕಳು ಮಾರ್ಕ್‌ ಕಾರ್ಡ್‌ ಪಡೆದುಕೊಂಡು ಹೋಗುವ ರೀತಿ ಎಂಬುದಾಗಿ ಹೇಳಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡ ಏಳು ವಿಕೆಟ್‌ ನಷ್ಟಕ್ಕೆ 186 ರನ್‌ ಬಾರಿಸಿತ್ತು. ಭಾರತ ತಂಡ ೧೯.೫ ಓವರ್‌ಗಳಲ್ಲಿ ೪ ವಿಕೆಟ್‌ ಕಳೆದುಕೊಂಡು ೧೮೭ ರನ್ ಬಾರಿಸಿ ಗೆಲುವು ಸಾಧಿಸಿತು. ವಿರಾಟ್‌ ಕೊಹ್ಲಿ ೬೩ ರನ್‌ ಬಾರಿಸಿದ್ದರೆ ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ೬೫ ರನ್‌ ಗಳಿಸಿದ್ದರು.

ಇದನ್ನೂ ಓದಿ | IND vs PAK | ಕೊಹ್ಲಿಯನ್ನು ನೋಡಿ ಕಲಿಯಿರಿ ಎಂದು ಸೂರ್ಯಕುಮಾರ್‌ ಮತ್ತು ಪಂತ್‌ಗೆ ಪಾಠ ಹೇಳಿದ ಗಂಭೀರ್‌

Exit mobile version