ಮುಂಬಯಿ: ಮೂರು ವರ್ಷಗಳ ಟೆಸ್ಟ್ ಶತಕದ ಬರ ನೀಗಿಸಿಕೊಂಡಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅವರು ಬಾರಿಸಿರುವ 186 ರನ್ ಆಸ್ಟ್ರೇಲಿಯಾ ವಿರುದ್ಧದ ಗರಿಷ್ಠ ರನ್ ಕೂಡ ಹೌದು. ಇದೀಗ ಸರಣಿಯ ಮುಕ್ತಾಯಗೊಂಡಿದ್ದು ಭಾರತ ತಂಡ 2-1 ಅಂತರದಿಂದ ಬಾರ್ಡರ್- ಗವಾಸ್ಕರ್ ಟ್ರೋಫಿ ಗೆದ್ದಿದೆ. ಏಕ ದಿನ ಸರಣಿಯ ತನಕ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿರುತ್ತಾರೆ. ಏತನ್ಮಧ್ಯೆ ಅವರು ನಾರ್ವೆಯ ಡಾನ್ಸ್ ಗ್ರೂಪ್ ಜತೆ ಹೆಜ್ಜೆ ಹಾಕಿರುವ ವಿಡಿಯೊ ನಿಟ್ಟಿಗರ ಅಭಿಮಾನಕ್ಕೆ ಕಾರಣವಾಗಿದೆ.
ಕ್ವಿಕ್ ಸ್ಟೈಲ್ ಪೋಸ್ಟ್ ಮಾಡಿದ ಇನ್ಸ್ಟಾಗ್ರಾಮ್ ವಿಡಿಯೊ ಇಲ್ಲಿದೆ
ನಾರ್ವೆಯ ಡಾನ್ಸ್ ಗ್ರೂಪ್ ಕ್ವಿಕ್ ಸ್ಟೈಲ್ (Quick Style) ವಿರಾಟ್ ಕೊಹ್ಲಿ ತಮ್ಮೊಂದಿಗೆ ಬ್ಯಾಟ್ ಹಿಡಿದು ಡಾನ್ಸ್ ಮಾಡುವ ವಿಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದೆ. ಅದೇ ರೀತಿ ವಿರಾಟ್ ಕೊಹ್ಲಿಯೂ ಇನ್ಸ್ಟಾಗ್ರಾಮ್ನಲ್ಲಿ ಪೋಟೋ ಒಂದನ್ನು ಶೇರ್ ಮಾಡಿದ್ದು, ನಾನು ಯಾರನ್ನು ಭೇಟಿ ಮಾಡಿದೆ ನೋಡಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : IND VS AUS: ಉಸ್ಮಾನ್ ಖವಾಜಾ, ಅಲೆಕ್ಸ್ ಕ್ಯಾರಿಗೆ ವಿಶೇಷ ಉಡುಗೊರೆ ನೀಡಿದ ವಿರಾಟ್ ಕೊಹ್ಲಿ; ವಿಡಿಯೊ ವೈರಲ್
ವಿಡಿಯೊದಲ್ಲಿ ಕ್ವಿಕ್ ಸ್ಟೈನ್ ಗ್ರೂಪ್ನ ಸದಸ್ಯರೊಬ್ಬರು ಬ್ಯಾಟ್ ಕೆಗತ್ತಿಕೊಂಡು ಮೊದಲು ಪರಿಶೀಲನೆ ಮಾಡುತ್ತಾರೆ. ತಕ್ಷಣ ಕೊಹ್ಲಿ ಅಲ್ಲಿಗೆ ಬಂದು ಬ್ಯಾಟ್ ಕೈಗೆತ್ತಿಕೊಳ್ಳುತ್ತಾರೆ. ಬಳಿಕ ಉಳಿದ ಸದಸ್ಯರು ಜತೆ ಸೇರುತ್ತಾರೆ. ಬಳಿಕ ಎಲ್ಲರೂ ಡಾನ್ಸ್ ಮಾಡುತ್ತಾರೆ.
ವಿಡಿಯೊವನ್ನು ಶೇರ್ ಮಾಡಿದ ಒಂದು ಗಂಟೆಯೊಳಗೆ 36 ಲಕ್ಷ ಮಂದಿ ಅದನ್ನು ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ವಿರಾಟ್ ಕೊಹ್ಲಿಯ ಡಾನ್ಸ್ ಕುರಿತು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ವಿರಾಟ್ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ಕೂಡ ಈ ವಿಡಿಯೊಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವಾಹ್ ಎಂದು ಹೇಳಿದ್ದಾರೆ.