ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ, ದಾಖಲೆಗಳ ಸರದಾರ, ರನ್ ಮೆಷಿನ್ ವಿರಾಟ್ ಕೊಹ್ಲಿ(Virat Kohli) ನೀಡಿದ ಹೇಳಿಕೆಯೊಂದು ಅವರ ಅಭಿಮಾನಿಗಳಿಗೆ ಭಾರೀ ಆತಂಕ ಉಂಟುಮಾಡುವಂತೆ ಮಾಡಿದೆ. ಹೌದು, ಕೊಹ್ಲಿ ತಮ್ಮ ನಿವೃತ್ತಿ(Virat Kohli restaurant) ವಿಚಾರದ ಬಗ್ಗೆ ಮಾತನಾಡಿದ್ದು, ಒಬ್ಬ ಕ್ರೀಡಾಪಟುವಾದ ಮೇಲೆ ಇಂದಲ್ಲ ನಾಳೆ, ತಮ್ಮ ವೃತ್ತಿಜೀವನದ ಅಂತಿಮ ದಿನಾಂಕವನ್ನು ನೋಡಲೇಬೇಕಿದೆ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಕೊಹ್ಲಿಗೆ ಸಕ್ಸಸ್ ಹಿಂದೆ ಯಾಕಿಷ್ಟು ಹಸಿವಿನಿಂದ ಓಡುತ್ತಿದ್ದೀರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಒಬ್ಬ ಕ್ರೀಡಾಪಟು ಇಂದಲ್ಲ ನಾಳೆ ತಮ್ಮ ವೃತ್ತಿಜೀವನದ ಅಂತಿಮ ದಿನಾಂಕವನ್ನು ನೋಡಲೇಬೇಕಿದೆ. ಆದ್ದರಿಂದಲೇ ನಾನು ಈ ರೀತಿ ಹೆಚ್ಚು ಶ್ರಮವಹಿಸಿ, ಮಿತಿಮೀರಿ ಕೆಲಸ ಮಾಡುತ್ತಿದ್ದೇನೆ. ನೀವೃತ್ತಿಯ ಬಳಿಕ ನಾನು ಸಾಧನೆ ಮಾಡದರ ಕುರಿತು ಚಿಂತಿಸ ಬಾರದು. ಅಂತಹ ಪರಿಸ್ಥಿತಿ ನನಗೆ ಬರಬಾರದು ಎಂದರೆ, ಇಂದು ಅದ್ಭುತ ಆಟ ಆಡಲೇಬೇಕಿದೆ’ ಎಂದು ಹೇಳಿದರು.
‘ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ನನಗೆ ಯಾವುದೇ ವಿಷಾದ ಇರಬಾರದು. ಖಂಡಿತವಾಗಿ ಆ ರೀತಿ ನಾನು ಮಾಡಿಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಒಮ್ಮೆ ನಾನು ಕ್ರಿಕೆಟ್ನಿಂದ ದೂರ ಸರಿದರೆ ಖಂಡಿತ ಮತ್ತೆ ನೀವು ನನ್ನನ್ನು ನೋಡೋದಿಲ್ಲ. ನಾನು ಆಡುವ ಕೊನೆವರೆಗೂ ನನ್ನಲ್ಲಿರುವ ಬೆಸ್ಟ್ ಅನ್ನು ನೀಡಲು ಬಯಸುತ್ತೇನೆ. ಅದೊಂದೇ ನನ್ನನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ’ ಎಂದು ಹೇಳುವ ಮೂಲಕ ತಮ್ಮ ನಿವೃತ್ತಿಯ ಬಗೆಗಿನ ಸ್ಪಷ್ಟತೆಯನ್ನು ತಿಳಿಸಿದರು. ಕೊಹ್ಲಿಯ ಈ ಹೇಳಿಕೆ ಕಂಡು ಅವರ ಅಭಿಮಾನಿಗಳು ಆತಂಕಕ್ಕೆ ಒಳಪಟ್ಟಿದ್ದು, ಶೀಘ್ರದಲ್ಲೇ ಕೊಹ್ಲಿ ನಿವೃತ್ತಿ ಹೇಳಲಿದ್ದಾರಾ? ಎಂದು ಚಿಂತೆ ಪಡುವಂತೆ ಮಾಡಿದೆ.
ಇದನ್ನೂ ಓದಿ Virat kohli: ಅಂಪೈರ್ಗಳ ಜತೆ ಮತ್ತೆ ಜಗಳವಾಡಿದ ವಿರಾಟ್ ಕೊಹ್ಲಿ; ಇಲ್ಲಿದೆ ವಿಡಿಯೊ
ವಿರಾಟ್ ಕೊಹ್ಲಿ(Virat Kohli) ಅವರು ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿ ವೇಳೆ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದ್ದರು. ಎರಡು ತಿಂಗಳ ಬಿಡುವಿನ ವೇಳೆಯಲ್ಲಿ ಕುಟುಂಬದ ಜತೆ ಅಮೂಲ್ಯ ಸಮಯ ಕಳೆದಿದ್ದರು. ಇದೇ ವಿಚಾರವಾಗಿ ಮಾತನಾಡಿದ್ದ ಕೊಹ್ಲಿ, ‘ಜನರು ನಮ್ಮನ್ನು ಗುರುತಿಸಲು ಸಾಧ್ಯವಾಗದ ಪ್ರದೇಶದಲ್ಲಿ ನಾವಿದ್ದೆವು. ಈ ಎರಡು ತಿಂಗಳ ಕಾಲ ಕುಟುಂಬದೊಂದಿಗೆ ಅತ್ಯಮೂಲ್ಯ ಸಮಯವನ್ನು ಕಳೆದಿದ್ದೇನೆ. ರಸ್ತೆಯಲ್ಲಿ ಓಡಾಡುವಾಗ ಎಲ್ಲರಂತೆ ನಾನೂ ಕೂಡ ಸಾಮಾನ್ಯ ವ್ಯಕ್ತಿಯಾಗಿ ಓಡಾಡಿದ್ದು ನಿಜಕ್ಕೂ ಅದ್ಭುತ ಅನುಭವ. ಇದಕ್ಕಾಗಿ ದೇವರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ಹಾಗೂ ಕುಟುಂಬಕ್ಕೆ ಇದು ಅದ್ಭುತ ಅನುಭವವಾಗಿತ್ತು” ಎಂದು ಹೇಳಿದ್ದರು. ಕುಟುಂಬಕ್ಕೆ ಹೆಚ್ಚಿನ ಒತ್ತು ನೀಡುವ ಕೊಹ್ಲಿ ತಮ್ಮ ನಿವೃತ್ತಿ ಬಳಿಕ ಕುಟುಂಬದ ಜತೆಯೇ ಹೆಚ್ಚಿನ ಕಾಲ ಕಳೆಯಲು ನಿರ್ಧರಿಸಿದಂತಿದೆ. ಇದೇ ಕಾರಣಕ್ಕೆ ಅವರು ನಿಂದ ದೂರ ಸರಿದರೆ ಖಂಡಿತ ಮತ್ತೆ ನೀವು ನನ್ನನ್ನು ನೋಡೋದಿಲ್ಲ ಎಂದು ಹೇಳಿದಂತಿದೆ.