Site icon Vistara News

ಸಿಕ್ಸರ್​ ತಡೆದು ಪಂದ್ಯದ ಚಿತ್ರಣವೇ ಬದಲಿಸಿದ ಕೊಹ್ಲಿಗೆ ಒಲಿಯಿತು ಚಿನ್ನದ ಪದಕ

Kohli Wins Best Fielder of the Series Medal

ಬೆಂಗಳೂರು: ಅಫಘಾನಿಸ್ತಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಗೆಲುವಿಗೆ ವಿರಾಟ್​ ಕೊಹ್ಲಿ ಮಾಡಿದ ಫೀಲ್ಡಿಂಗ್(virat kohli fielding)​ ಕೂಡ ಒಂದು ಪ್ರಮುಖ ಕಾರಣ. 17ನೇ ಓವರ್‌ನ ಅಂತಿಮ ಎಸೆತದಲ್ಲಿ ಕರೀಮ್ ಜನ್ನತ್ ಬಾರಿಸಿದ ಚೆಂಡನ್ನು ಬೌಂಡರಿ ಲೈನ್​ನಲ್ಲಿ ಕೊಹ್ಲಿ ಯಾರು ಊಹಿಸದ ರೀತಿಯಲ್ಲಿ ಮೇಲೆಕ್ಕೆ ಜಿಗಿದು ಸಿಕ್ಸರ್​ ತಡೆದರು. ಅವರು ಈ ಸಿಕ್ಸರ್​ ತಡೆಯದೇ ಹೋಗಿದ್ದರೆ ಭಾರತ ಸೋಲು ಕಾಣುತ್ತಿತ್ತು.

ಪಂದ್ಯದಲ್ಲಿ ಅಮೋಘ ಫೀಲ್ಡಿಂಗ್​ ನಡೆಸಿ ಹಲವು ರನ್​ ಸೇವ್​ ಮಾಡಿದ ವಿರಾಟ್​ ಕೊಹ್ಲಿ ಅವರು ‘ಫೀಲ್ಡರ್​ ಆಫ್​ದಿ ಸೀರಿಸ್’​(ಸರಣಿಯ ಅತ್ಯುತ್ತಮ ಕ್ಷೇತ್ರರಕ್ಷಕ) ಪ್ರಶಸ್ತಿ ಪಡೆದಿದ್ದಾರೆ. ಟೀಮ್​ ಇಂಡಿಯಾ ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್ ಚಿನ್ನದ ಪದಕ ನೀಡುವ ಮೂಲಕ ಕೊಹ್ಲಿಯನ್ನು ಗೌರವಿಸಿದರು. ಕೊಹ್ಲಿ ಸಿಕ್ಸರ್​ ತಡೆದ ಕಾರಣ 5 ರನ್​ಗಳು ಸೇವ್​ ಆಗಿತ್ತು. ಒಂದೊಮ್ಮೆ ಇದು ಸಿಕ್ಸರ್​ ದಾಖಲಾಗುತ್ತಿದ್ದರೆ ಪಂದ್ಯ ಸೂಪರ್​ ಓವರ್​ ಕಾಣದೆ ಭಾರತ ಸೋಲಿಗೆ ತುತ್ತಾಗುತ್ತಿತ್ತು. 

​ಇದನ್ನೂ ಓದಿ ಆರಂಭದಲ್ಲಿ ‘ಮೊಯೇ ಮೊಯೇ’ ಹಾಡಿಗೆ​ ಸ್ಟೆಪ್ಸ್​, ಬಳಿಕ ಸ್ಕೇಟಿಂಗ್​ ಶೈಲಿಯ ನಡಿಗೆ; ಕೊಹ್ಲಿ ಅವತಾರಕ್ಕೆ ನೆಟ್ಟಿಗರು ಫಿದಾ!

ಅನಗತ್ಯ ದಾಖಲೆ ಬರೆದ ಕೊಹ್ಲಿ


ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಗೋಲ್ಡನ್​ ಟಕ್​ ಆಗುವ ಮೂಲಕ ಅನಗತ್ಯ ದಾಖೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಭಾರತದ ಪರ ಅತ್ಯಧಿಕ ಶೂನ್ಯ ಸಂಪಾದಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಹೆಸರಿನಲ್ಲಿತ್ತು. ಸಚಿನ್​ 34 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಈಗ ಕೊಹ್ಲಿ 35 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಸಚಿನ್​ ಹಿಂದಿಕ್ಕಿ ಈ ಅನಗತ್ಯ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ವಿರಾಟ್​ ಕೊಹ್ಲಿಗೆ ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಆಟ ನೋಡಲೆಂದೇ ಆರ್​ಸಿಬಿ ಅಭಿಮಾನಿಗಳು ಈ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ, ಕೊಹ್ಲಿ ಗೋಲ್ಡನ್​ ಡಕ್​ಗೆ ವಿಕೆಟ್​ ಕೈಚೆಲ್ಲಿ ಎಲ್ಲ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

ಮೊಯೇ ಮೊಯೇ ಹಾಡಿಗೆ​ ಸ್ಟೆಪ್ಸ್ ಹಾಕಿದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಕ್ರಿಕೆಟ್​ನಲ್ಲಿ ಎಷ್ಟು ಖ್ಯಾತಿ ಪಡೆದಿದ್ದಾರೋ ಅಷ್ಟೇ ಖ್ಯಾತಿಯನ್ನು ಮೈದಾನದಲ್ಲಿ ಡ್ಯಾನ್ಸ್​ ಮಾಡುವ ಮೂಲಕವೂ ಪಡೆದಿದ್ದಾರೆ. ಕೊಹ್ಲಿ ಹಲವು ಬಾರಿ ಫಿಲ್ಡಿಂಗ್​ ನಡೆಸುವ ವೇಳೆ ಡ್ಯಾನ್ಸ್​ ಮಾಡಿದ ವಿಡಿಯೊ ವೈರಲ್​ ಆಗಿತ್ತು. ಇಂತಹದ್ದೇ ಘಟನೆ ಬುಧವಾರ ಚಿನ್ನಸ್ವಾಮಿಯಲ್ಲಿ ನಡೆದ ಆಫ್ಘನ್​ ಎದುರಿನ ಟಿ20 ಪಂದ್ಯದಲ್ಲಿ ಕಂಡುಬಂತು. ಹೌದು, ಸ್ಟೇಡಿಯಂನಲ್ಲಿ ಮೊಯೇ ಮೊಯೇ ಎಂದು ಪ್ರತಿಧ್ವನಿಸಿತು. ಹಾಡನ್ನು ಪ್ಲೇ ಮಾಡುತ್ತಿದ್ದಂತೆ ಕೊಹ್ಲಿ ಕಣ್ಮುಚ್ಚಿಕೊಂಡು ಸೊಂಟ ಬಳುಕಿಸಿದರು. ಈ ವಿಡಿಯೊ ವೈರಲ್​ ಆಗಿದೆ.

Exit mobile version