Site icon Vistara News

Virat Kohli : ವಿರಾಟ್​ ಕೊಹ್ಲಿ ಶತಕ; ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳ ಸಂಭ್ರಮ

Virat kohli

ಪೋರ್ಟ್​ ಆಫ್​ ಸ್ಪೇನ್​: ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್ ಓವಲ್​​ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹಿರಿಯ ಬ್ಯಾಟರ್​​ ವಿರಾಟ್ ಕೊಹ್ಲಿ (Virat Kohli) ಸ್ಮರಣೀಯ ಪ್ರದರ್ಶನ ನೀಡಿದ್ದಾರೆ. ಬಲಗೈ ಬ್ಯಾಟ್ಸ್ಮನ್ ತಮ್ಮ 29ನೇ ಟೆಸ್ಟ್ ಶತಕ ಬಾರಿಸಿದ್ದು. ಒಟ್ಟಾರೆಯಾಗಿ ಅವರ76 ನೇ ಅಂತರರಾಷ್ಟ್ರೀಯ ಶತಕ ಅದಾಗಿದೆ. ವಿಶೇಷವೆಂದರೆ, ಕೊಹ್ಲಿ ತಮ್ಮ 500ನೇ ಅಂತಾರರಾಷ್ಟ್ರೀಯ ಪಂದ್ಯವನ್ನು ಆಡುತ್ತಿದ್ದು, ಈ ಮೂಲಕವೂ ಅವರು ಹೊಸ ದಾಖಲೆ ಬರೆದಿದ್ದಾರೆ. 500ನೇ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಅದೇ ರೀತಿ ವಿರಾಟ್​ ಈ ಹಿಂದೆ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಅವರನ್ನು ಹಿಂದಿಕ್ಕಿ ಅಂತಾರರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ರನ್​ ಬಾರಿಸಿದವರ ಪಾಲಿಗೆ ಐದನೇ ಸ್ಥಾನ ಗಳಿಸಿದ್ದಾರೆ.

ಮೊದಲ ದಿನದಾಟದಲ್ಲಿ ಕೊಹ್ಲಿ 161 ಎಸೆತಗಳಲ್ಲಿ 87 ರನ್ ಗಳಿಸಿ ಔಟಾಗದೆ ಉಳಿದಿದ್ದರು 2ನೇ ದಿನದಂದು ಬ್ಯಾಟಿಂಗ್​ಗೆ ಬಂದ ಬಲಗೈ ಬ್ಯಾಟರ್​ ಎಕ್ಸ್​ಪ್ರೆಸ್​ ವೇಗಿ ಶಾನನ್ ಗೇಬ್ರಿಯಲ್ ಅವರ ಬೌಲಿಂಗ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಬಾರಿಸಿದರು. ಅದರೂ ತಮ್ಮ ಜನಪ್ರಿಯ ಕವರ್​ ಡ್ರೈವ್ ಮೂಲಕ ಬೌಂಡರಿ ಬಾರಿಸಿ ಶತಕ ಪೂರೈಸಿದರು. ವಿರಾಟ್​ ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಅವರ ಅಭಿಮಾನಿಗಳು ಅಪಾರವಾಗಿ ಸಂಭ್ರಮಿಸಿದರು. ಹೀಗಾಗಿ ಟ್ವಿಟರ್​ನಲ್ಲಿ ವಿರಾಟ್​ ಕೊಹ್ಲಿ ಟ್ರೆಂಡ್​ ಸೃಷ್ಟಿಯಾಯಿತು.

ಇದನ್ನೂ ಓದಿ : Virat Kohli : 500ನೇ ಪಂದ್ಯದಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ ಕಿಂಗ್​ ಕೊಹ್ಲಿ; ಏನಿದು ರೆಕಾರ್ಡ್​​​?

ಮತ್ತೊಂದು ಕಡೆ ರವೀಂದ್ರ ಜಡೇಜಾ ಅರ್ಧ ಶತಕ ಬಾರಿಸಿದರು. ಜಡೇಜಾ ವಿರಾಟ್​ ಕೊಹ್ಲಿಗೆ ಉತ್ತಮ ಸಾಥ್​ ಕೊಟ್ಟರು. ಅವರಿಬ್ಬರೂ ಜತೆಯಾಗಿ 100+ ರನ್ ಜತೆಯಾಟವಾಡಿದರು. ಏತನ್ಮಧ್ಯೆ, ಟೀಮ್ ಇಂಡಿಯಾ ಮುನ್ನಡೆ 300 ರನ್​ಗಳ ಗಡಿಯನ್ನು ದಾಟಿದೆ. ಏಕೆಂದರೆ ಪ್ರವಾಸಿ ಭಾಋತ ತಂಡ ಎರಡನೇ ದಿನದಂದು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದೆ.

ಕೊಹ್ಲಿ ಶತಕದ ಬಗ್ಗೆ ಕೆಲವು ಟ್ವಿಟರ್ ಪ್ರತಿಕ್ರಿಯೆಗಳು ಇಲ್ಲಿವೆ

Exit mobile version