ಬೆಂಗಳೂರು: ಭಾನುವಾರ ಓವಲ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡಕ್ಕೆ ಮಂಡಿಯೂರಿದ ಕೆಲವು ಗಂಟೆಗಳ ನಂತರ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ರಹಸ್ಯ ಸಂದೇಶವನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯನ್ನು ಸ್ಕಾಟ್ ಬೋಲ್ಯಾಂಡ್ 49 ರನ್ ಗಳಿಗೆ ಔಟ್ ಮಾಡಿದ ಬಳಿಕ ಐದನೇ ದಿನದ ಮೊದಲ ಸೆಷನ್ನಲ್ಲಿ ಭಾರತ ತಂಡ ಏಳು ವಿಕೆಟ್ ಕಳೆದುಕೊಂಡು 209 ರನ್ ಹೀನಾಯ ಸೋಲಿಗೆ ಒಳಗಾಯಿತು. ಆ ಬಳಿಕ ವಿರಾಟ್ ಕೊಹ್ಲಿ, ಮೌನವು ಶಕ್ತಿಯ ದೊಡ್ಡ ಮೂಲ ಎಂದು ಬರೆದುಕೊಂಡಿದ್ದಾರೆ. ಅವರ ಮೆಸೇಜ್ ನೋಡಿದ ಅಭಿಮಾನಿಗಳು ಗೊಂದಲಕ್ಕೆ ಈಡಾಗಿದ್ದಾರೆ.
ದಿ ಓವಲ್ನಲ್ಲಿ ಭಾನುವಾರ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾವು ಭಾರತವನ್ನು 209 ರನ್ಗಳಿಂದ ಸೋಲಿಸಿತು. ಅದಕ್ಕಿಂತ ಮೊದಲು 444 ರನ್ಗಳ ಗುರಿ ಬೆನ್ನತ್ತಿದ ಭಾರತ 3 ವಿಕೆಟ್ ನಷ್ಟಕ್ಕೆ 164 ರನ್ ಕಲೆಹಾಕಿತು. ಆದರೆ ಐದನೇ ದಿನದಾಟದ ಅಂತ್ಯಕ್ಕೆ ಭಾರತ 24 ಓವರ್ ಗಳಲ್ಲಿ 70 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿತ್ತು. 16 ಓವರ್ಗಳಲ್ಲಿ 46 ರನ್ಗಳಿಗೆ 3 ವಿಕೆಟ್ ಕಬಳಿಸಿದ ಬೋಲ್ಯಾಂಡ್ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
ಗಿಲ್ಗೆ ಪಂದ್ಯದ ಸಂಭಾವನೆಗಿಂತ ಹೆಚ್ಚು ದಂಡ
ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ನಡುವೆ ಶುಭ್ಮನ್ ಗಿಲ್ ಅವರಿಗೆ ಥರ್ಡ್ ಅಂಪೈರ್ ನೀಡಿದ ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. ಕ್ಯಾಮೆರಾನ್ ಗ್ರೀನ್ ಹಿಡಿದ ಕ್ಯಾಚ್ ನ್ಯಾಯಯುತವಲ್ಲ ಎಂದು ಭಾರತ ತಂಡದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಹಿರಿಯ ಕ್ರಿಕೆಟಿಗರೂ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಅವರೆಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಅಧಿಕಾರವಿದೆ. ಆದರೆ, ಆಟಗಾರರಿಗೆ ಈ ರೀತಿ ಕಂಡಕಂಡಲ್ಲಿ ಟೀಕೆ ಮಾಡುವ ಅಧಿಕಾರ ಇಲ್ಲ. ಮಾಡಿದರೆ ಐಸಿಸಿ ನಿಯಮದ ಪ್ರಕಾರ ತಪ್ಪು. ಆದರೆ, ಈ ನಿಯಮಗಳನ್ನು ಗಣನೆಗೆ ತೆಗೆದುಕೊಳ್ಳದ ಶುಭ್ಮನ್ ಗಿಲ್ ಅಂಪೈರ್ ತೀರ್ಪನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದರು. ಆ ತಪ್ಪಿಗಾಗಿ ಅವರು ಇದೀಗ ಶೇಕಡಾ 115ರಷ್ಟು ದಂಡ ಕಟ್ಟಬೇಕಾಗಿದೆ.
ಇದನ್ನೂ ಓದಿ : WTC Final 2023: ಹಣಕ್ಕಾಗಿ ಅಲ್ಲ, ದೇಶಕ್ಕಾಗಿ ಆಡು; ಔಟಾದ ಬಳಿಕ ಊಟದ ಜತೆ ಬೈಗುಳ ತಿಂದ ಕೊಹ್ಲಿ
ಅಂತಾರಾಷ್ಟ್ರೀಯ ಪಂದ್ಯದ ವೇಳೆ ನಡೆದ ಘಟನೆ ಬಗ್ಗೆ ಸಾರ್ವಜನಿಕವಾಗಿ ಮಾಡಿದ ಪ್ರತಿಕ್ರಿಯೆಯ ನಿಯಮ 2.7 ಉಲ್ಲಂಘಿಸಿದ್ದಕ್ಕಾಗಿ ಶುಭ್ಮನ್ ಗಿಲ್ಗೆ ದಂಡ ವಿಧಿಸಲಾಗಿದೆ. ಪಂದ್ಯದ ನಾಲ್ಕನೇ ಇನಿಂಗ್ಸ್ ವೇಳೆ ಭಾರತ ತಂಡ 444 ರನ್ಗಳ ಚೇಸಿಂಗ್ ಮಾಡುತ್ತಿದ್ದ ವೇಳೆ ಶುಭ್ಮನ್ ಗಿಲ್ ಅವರು ಬಾರಿಸಿದ ಚೆಂಡನ್ನು ಫೀಲ್ಡರ್ ಕ್ಯಾಮೆರಾನ್ ಗ್ರೀನ್ ಅವರು ಹಿಡಿದಿದ್ದರು. ಚೆಂಡು ನೆಲಕ್ಕೆ ತಲುಗಿದಂತೆ ಕಂಡ ಹೊರತಾಗಿಯೂ ಮೂರನೇ ಅಂಪೈರ್ ಚೆಂಡಿನ ಕೆಳಗೆ ಬೆರಳುಗಳಿದ್ದವು ಎಂಬ ಅಂಶದ ಮೇಲೆ ಔಟ್ ನೀಡಿದ್ದರು.
ಅಂಪೈರ್ ತೀರ್ಪಿನಿಂದ ನಿರಾಶೆಗೊಂಡ ಭಾರತದ ಆರಂಭಿಕ ಆಟಗಾರ ಟ್ವಿಟರ್ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದರು. ಗಿಲ್ ವರ್ತನೆ ಐಸಿಸಿಯ ಪಂದ್ಯದ ನಿಯಮಗಳ ಆರ್ಟಿಕಲ್ 2.7 ಉಲ್ಲಂಘನೆಯಾಗಿರುವ ಕಾರಣ 15% ಪಂದ್ಯದ ಶುಲ್ಕದ ಜೊತೆಗೆ, ಭಾರತದ ಆರಂಭಿಕ ಆಟಗಾರನಿಗೆ 100% ಪಂದ್ಯದ ಶುಲ್ಕವನ್ನು ಸಹ ವಿಧಿಸಿತು.