ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಉತ್ತಮ ಪ್ರದರ್ಶನ ನೀಡಿದ್ದಾರೆ. ಒಟ್ಟು ಮೂರು ವಿಕೆಟ್ ಪಡೆದಿರುವ ಅವರು ಮೊದಲ ಇನಿಂಗ್ಸ್ನಲ್ಲಿ 37 ರನ್ ಬಾರಿಸಿದ್ದಾರೆ. 47 ಎಸೆತಗಳಲ್ಲಿ ಅವರು ಬಾರಿಸಿದ ಆ ಮೊತ್ತ ದಿನದ ಹೈಲೈಟ್ ಎನಿಸಿಕೊಂಡಿತು. ಏಕೆಂದರೆ ಅವರ ಬಾರಿಸಿದ ಆ ರನ್ಗಳಲ್ಲಿ ಮೂರು ಸಿಕ್ಸರ್ಗಳೂ ಸೇರಿಕೊಂಡಿದ್ದವು. ಈ ಸಿಕ್ಸರ್ಗಳ ಮೂಲಕ ಅವರು ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಸಿಕ್ಸರ್ಗಳ ದಾಖಲೆ ಮುರಿದಿದ್ದಾರೆ.
ಮೊಹಮ್ಮ್ ಶಮಿಯ ಇನಿಂಗ್ಸ್ ಮೂರು ಸಿಕ್ಸರ್ಗಳ ಮೂಲಕ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಅವರ ಒಟ್ಟು ಸಿಕ್ಸರ್ಗಳ ಸಂಖ್ಯೆ 25ಕ್ಕೆ ಏರಿತು. ಈ ಮೂಲಕ ಆಧುನಿಕ ಯುಗದ ಶ್ರೇಷ್ಠ ಟೆಸ್ಟ್ ಬ್ಯಾಟರ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿಯ 24 ಸಿಕ್ಸರ್ಗಳ ದಾಖಲೆ ಮುರಿದಿದ್ದಾರೆ. ಭಾರತ ತಂಡದ ಮಾಜಿ ಬ್ಯಾಟರ್ ಯುವರಾಜ್ ಸಿಂಗ್ 21 ಸಿಕ್ಸರ್ಗಳನ್ನು ಬಾರಿಸಿದ್ದರೆ, ಕೆ. ಎಲ್ ರಾಹುಲ್ 17 ಸಿಕ್ಸರ್ಗಳನ್ನು ಟೆಸ್ಟ್ ಮಾದರಿಯಲ್ಲಿ ಬಾರಿಸಿದ್ದಾರೆ.
ಇದನ್ನೂ ಓದಿ : Ravindra Jadeja : ಅಂಪೈರ್ಗೆ ಮಾಹಿತಿ ಕೊಡದೇ ಕೈಗೆ ಮುಲಾಮು ಹಚ್ಚಿಕೊಂಡ ಜಡೇಜಾಗೆ ಶೇ.25 ದಂಡ, ಒಂದು ಡಿಮೆರಿಟ್ ಅಂಕ
ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಹಾಗೂ 132 ರನ್ಗಳ ಅಂತರದಿಂದ ವಿಜಯ ಸಾಧಿಸಿದೆ. ಮೊದಲ ಇನಿಂಗ್ಸ್ನಲ್ಲಿ 177 ರನ್ಗಳಿಗೆ ಪ್ರವಾಸಿ ತಂಡವನ್ನು ಆಲ್ಔಟ್ ಮಾಡಿದ್ದ ಭಾರತ ತಂಡ, ಎರಡನೇ ಇನಿಂಗ್ಸ್ನಲ್ಲಿ 91 ರನ್ಗಳಿಗೆ ಆಲ್ಔಟ್ ಮಾಡಿತು. ಭಾರತ ಮೊದಲ ಇನಿಂಗ್ಸ್ನಲ್ಲಿ 400 ರನ್ ಬಾರಿಸಿತ್ತು.