Site icon Vistara News

Virat kohli : ನಾಲ್ಕು ಪದಗಳಲ್ಲಿ ಅಣ್ಣನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೊಹ್ಲಿಯ ತಂಗಿ

Bhawana Kohli

ಬೆಂಗಳೂರು: ಚೆನ್ನೈನಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ತಂಡದ ಮೊದಲ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮಿಂಚಿದ್ದರು. ಅವರು 111 ಎಸೆತಗಳಲ್ಲಿ ವಿಜಯ 85 ರನ್ ಬಾರಿಸುವ ಜತೆಗೆ ಕೆ. ಎಲ್ ರಾಹುಲ್ ಜತೆಗೂಡಿ 165 ರನ್​ಗಳ ಜತೆಯಾಟವಾಡಿದ್ದರು. ಈ ಇನಿಂಗ್ಸ್​ಗಾಗಿ ವಿರಾಟ್ ಕೊಹ್ಲಿ ಸಹೋದರಿ ಭಾವನಾ ತಮ್ಮ ಸಹೋದರನನ್ನು ಶ್ಲಾಘಿಸಿದ್ದಾರೆ. 34 ವರ್ಷದ ಬ್ಯಾಟರ್​ ಕಾಂಗರೂಗಳ ವಿರುದ್ಧ ತಮ್ಮ ಅಂತಾ ರರಾಷ್ಟ್ರೀಯ ವೃತ್ತಿಜೀವನದ ಅತ್ಯಂತ ಸ್ಮರಣೀಯ ಇನಿಂಗ್ಸ್​ಗಳಲ್ಲಿ ಒಂದನ್ನು ಆಡಿದ್ದಾರೆ.

ಭಾರತ 3 ವಿಕೆಟ್ ನಷ್ಟಕ್ಕೆ 2 ರನ್ ಗಳಿಸಿದ್ದಾಗ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಜತೆ ಸೇರಿದ್ದರು. ಭಾರತದ ಮಾಜಿ ನಾಯಕ 116 ಎಸೆತಗಳಲ್ಲಿ ಆರು ಬೌಂಡರಿಗಳು ಸೇರಿದಂತೆ 85 ರನ್ ಗಳಿಸಿದರು. ನಾಲ್ಕನೇ ವಿಕೆಟ್​ಗೆ ರಾಹುಲ್ ಜೊತೆಗೂಡಿ 165 ರನ್​ಗಳ ಅಮೋಘ ಜೊತೆಯಾಟವಾಡಿದರು. ವಿಶೇಷವೆಂದರೆ, ರಾಹುಲ್ 115 ಎಸೆತಗಳಲ್ಲಿ 97 ರನ್ ಗಳಿಸಿ ಔಟಾಗದೆ ಉಳಿದರು ಮತ್ತು ಭಾರತಕ್ಕೆ ಗೆಲುವು ಸಾಧಿಸಲು ಸಹಾಯ ಮಾಡಿದರು.

ಆಸ್ಟ್ರೇಲಿಯಾ ವಿರುದ್ಧ ತಮ್ಮ ಅಣ್ಣ ಕೊಹ್ಲಿಯ ಪ್ರದರ್ಶನದ ಬಗ್ಗೆ ಭಾವನಾ ಹೆಮ್ಮೆಪಟ್ಟಿದ್ದಾರೆ. ಅವರು ಇನ್ಸ್ಟಾಗ್ರಾಮ್​​ನಲ್ಲಿ ನಾಲ್ಕು ಪದಗಳ ಮೆಚ್ಚುಗೆಯನ್ನು ಪೋಸ್ಟ್ ಮಾಡಿದ್ದಾರೆ. “ನೀವು ಎಂದೆಂದಿಗೂ ಚಾಂಪಿಯನ್” (You are a champ) ಎಂದು ಭಾವನಾ ತನ್ನ ಪೋಸ್ಟ್​ನಲ್ಲಿ ಎಮೋಜಿಗಳನ್ನು ಹಾಕಿದ್ದಾರೆ.

ತವರು ನೆಲದಲ್ಲಿ ಎರಡನೇ ವಿಶ್ವ ಕಪ್​

ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುವುದಾದರೆ 2011 ಮತ್ತು 2015ರಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಶತಕ ಬಾರಿಸಿದ್ದರು. ಬಲಗೈ ಬ್ಯಾಟರ್​ ಆಸ್ಟ್ರೇಲಿಯಾ ವಿರುದ್ಧ ಅರ್ಹ ಶತಕವನ್ನು ಕಳೆದುಕೊಂಡಿದ್ದಾರೆ. ಒಂದು ವೇಳೆ ಬಾರಿಸಿದ್ದರೆ ಏಕದಿನ ಪಂದ್ಯಗಳಲ್ಲಿ ಅವರ 48 ನೇ ಶತಕವಾಗುತ್ತಿತ್ತು. ಅವರು ತಮ್ಮ ವಿನಾಶಕಾರಿ ಆಟದಿಂದ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದರು.

ಫೀಲ್ಡಿಂಗ್ ಮೇಲೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಟೀಮ್ ಮ್ಯಾನೇಜ್ಮೆಂಟ್ ತಮ್ಮ ಪ್ರತಿಯೊಂದು ಪಂದ್ಯದಲ್ಲೂ ಅಗ್ರ ಫೀಲ್ಡರ್​ಗೆ ಪದಕವನ್ನು ನೀಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಭಾರತದ ಆರಂಭಿಕ ಪಂದ್ಯದೊಂದಿಗೆ ಈ ಉಪಕ್ರಮವು ಪ್ರಾರಂಭವಾಯಿತು. ಈ ಮೂಲಕ ‘ಬೆಸ್ಟ್ ಫೀಲ್ಡರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಸ್ಪರ್ಧೆಗಳಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ಹಿಂದಿನ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ. ಅಕ್ಟೋಬರ್ 11 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಪಂದ್ಯಾವಳಿಯ ಭಾರತದ ಎರಡನೇ ಪಂದ್ಯದಲ್ಲಿ ಕೊಹ್ಲಿ ಆಡಲಿದ್ದಾರೆ. ಅಕ್ಟೋಬರ್ 14ರಂದು ಅಹಮದಾಬಾದ್​​ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.

Exit mobile version