ಬ್ರಿಸ್ಬೇನ್ : ಆಸ್ಟ್ರೇಲಿಯಾ ತಂಡದ ವಿರುದ್ಧದ ಅಭ್ಯಾಸ ಪಂದ್ಯಲ್ಲಿ ಭಾರತ ತಂಡ ೬ ರನ್‌ಗಳ ವಿಜಯ ಸಾಧಿಸಿದೆ. ಕೊನೇ ಓವರ್‌ನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿಗೆ ೧೦ ರನ್ ಬೇಕಾಗಿದ್ದರೂ ೩ ರನ್‌ಗಳನ್ನು ಮಾತ್ರ ನೀಡಿದ ಬೌಲರ್ ಮೊಹಮ್ಮದ್ ಶಮಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಮತ್ತೊಂದು ರನ್‌ಔಟ್. ಒಟ್ಟಾರೆ ಆಸೀಸ್ ಬಳಗ ೪ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಸಾಧನೆಯ ನಡುವೆ ದಿನದ ಹೈಲೈಟ್ ಎನಿಸಿದ್ದು ವಿರಾಟ್ ಕೊಹ್ಲಿ ಭರ್ಜರಿ ಫೀಲ್ಡಿಂಗ್. ಅವರು ಬೌಂಡರಿ ಲೈನ್‌ನಲ್ಲಿ ಹಿಡಿದ ಕ್ಯಾಚ್‌ನಿಂದಾಗಿಯೇ ಭಾರತ ತಂಡ ಜಯ ಸಾಧಿಸಿದ್ದು.
ಆಸ್ಟ್ರೇಲಿಯಾ ತಂಡ ಕೊನೇ ಓವರ್‌ನ ಮೊದಲ ಮೂರು ಎಸೆತಗಳಿಗೆ ೩ ರನ್ ಬಾರಿಸಿತ್ತು. ಶಮಿ ಎಸೆದ ನಾಲ್ಕನೇ ಎಸೆತವನ್ನು ಆಲ್‌ರೌಂಡರ್ ಪ್ಯಾಟ್ ಕಮಿನ್ಸ್ ಲಾಂಗ್ ಆನ್ ಕಡೆ ಸಿಕ್ಸರ್ ಎತ್ತಿದ್ದರು. ಕಾಮೆಂಟೇಟರ್‌ಗಳು ಸೇರಿದಂತೆ ಎಲ್ಲರೂ ಅದನ್ನು ಸಿಕ್ಸರ್ ಎಂದು ಅಂದುಕೊಂಡಿದ್ದರು. ಆದರೆ ಅಲ್ಲಿದ್ದ ಫೀಲ್ಡರ್ ವಿರಾಟ್ ಕೊಹ್ಲಿ ನೆಗೆದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿದು ಎಲ್ಲರನ್ನೂ ಅಚ್ಚರಿಗೊಳಪಡಿಸಿದರು. ಆ ಚೆಂಡು ಬೌಂಡರಿ ಗೆರೆಗಿಂತ ಆಚೆ ಬಿದ್ದಿದ್ದರೆ ಭಾರತ ಪಂದ್ಯದಲ್ಲಿ ಸೋಲುತ್ತಿತ್ತು. ಕೊಹ್ಲಿ ಹಿಡಿದು ಕ್ಯಾಚ್ ಪಂದ್ಯ ಗೆಲ್ಲಿಸಿ ಕೊಟ್ಟಿತು.
ಡೈರೆಕ್ಟ್ ಹಿಟ್ ರನ್‌ಔಟ್
ಕೊನೇ ಎರಡು ಓವರ್‌ಗಳಲ್ಲಿ ಆಸ್ಟ್ರೇಲಿಯಾಗೆ ಗೆಲ್ಲುವುದಕ್ಕೆ ೧೬ ರನ್ ಬೇಕಾಗಿತ್ತು. ೧೯ನೇ ಓವರ್ ಎಸೆದ ಹರ್ಷಲ್ ಪಟೇಲ್ ಮೊದಲ ಎಸೆತದಲ್ಲಿ ೭೬ ರನ್ ಬಾರಿಸಿದ್ದ ನಾಯಕ ಆರೋನ್ ಫಿಂಚ್ ಅವರನ್ನು ಬೌಲ್ಡ್ ಮಾಡಿದ್ದರು. ನಂತರದ ಎಸೆತದಲ್ಲಿ ಒಂದು ರನ್ ಕದಿಯಲು ಓಡುತ್ತಿದ್ದ ಟಿಮ್ ಡೇವಿಡ್ ಅವರನ್ನು ಅವರು ಡೈರೆಕ್ಟ್ ಹಿಟ್ ಮೂಲಕ ರನ್‌ಔಟ್ ಮಾಡಿದರು ವಿರಾಟ್ ಕೊಹ್ಲಿ. ಸ್ಫೋಟಕ ಬ್ಯಾಟರ್ ಡಿಮ್ ಡೇವಿಡ್ ವಿಕೆಟ್ ಕೂಡ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತು.
ಇದನ್ನೂ ಓದಿ | T20 World Cup | ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧ 6 ರನ್ ಜಯ