ಪುಣೆ : ಭಾರತ ಟಿ20 ತಂಡದಲ್ಲಿ (Indian Cricket Team ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರ ಯುಗಾಂತ್ಯಗೊಂಡಿತಾ? ಕೋಚ್ ರಾಹುಲ್ ದ್ರಾವಿಡ್ ಅವರ ಹೇಳಿಕೆ ಈ ಮಾತಿಗೆ ಪುಷ್ಟಿ ಕೊಟ್ಟಿದೆ. ಭವಿಷ್ಯದ ಭಾರತ ಟಿ20 ಬಳಗದಲ್ಲಿ ಯುವಕರೇ ತುಂಬಿಕೊಂಡಿರುತ್ತಾರೆ ಎಂಬರ್ಥದಲ್ಲಿ ದ್ರಾವಿಡ್ ಮಾತನಾಡಿದ್ದು. ಮುಂದಿನ ಟಿ20 ವಿಶ್ವ ಕಪ್ಗೆ ಯುವ ಆಟಗಾರರ ತಂಡ ರಚನೆಯಾಗುವುದು ಖಚಿತವಾಗಿದೆ.
ಪುಣೆಯಲ್ಲಿ ನಡೆದ ಎರಡನೇ ಪಂದ್ಯದ ಬಳಿಕ ಮಾತನಾಡಿದ, ಕಳೆದ ಟಿ20 ವಿಶ್ವ ಕಪ್ನಲ್ಲಿ ನಾವು ಸೆಮಿ ಫೈನಲ್ ಹಂತದಲ್ಲಿ ಹೋರಾಟ ಮುಗಿಸಿದ್ದೆವು. ಆದರೆ, ಮುಂದಿನ ಕ್ರಿಕೆಟ್ ಋತುವಿನಲ್ಲಿ ಯುವಕರ ತಂಡವನ್ನು ಕಟ್ಟಬೇಕಾಗಿದೆ. ಸದ್ಯ ಮೂವರು ಯುವ ಆಟಗಾರರು ಟಿ20 ತಂಡದಲ್ಲಿ ಆಡುತ್ತಿದ್ದಾರೆ. ಅದರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ದ್ರಾವಿಡ್ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವ ಕಪ್ನಲ್ಲಿ 30 ವರ್ಷ ದಾಟಿದ ಆಟಗಾರರೇ ಹೆಚ್ಚಿದ್ದರು. ಚುಟುಕು ಕ್ರಿಕೆಟ್ಗೆ ಅವರು ಸೂಕ್ತರಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಇದೇ ನಿಟ್ಟಿನಲ್ಲಿ ಯುವಕರಿಗೆ ಅವಕಾಶ ಕಲ್ಪಿಸಿಕೊಡಲು ಮುಂದಾಗಿದೆ. ಇದೇ ಮಾತನ್ನು ಕೋಚ್ ದ್ರಾವಿಡ್ ಕೂಡ ಪುನರುಚ್ಚರಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಯುವಕರ ತಂಡವನ್ನೇ ಕಟ್ಟುವುದು ಬಿಸಿಸಿಐ ಉದ್ದೇಶವಾಗಿದ್ದರೆ 30 ವರ್ಷ ದಾಟಿದ ವಿರಾಟ್ ಕೊಹ್ಲಿ ಹಾಗೂ ರಾಹುಲ್ ದ್ರಾವಿಡ್ ಅವಕಾಶ ವಂಚಿತರಾಗುವುದು ನಿಶ್ಚಿತ.
ಇದನ್ನೂ ಓದಿ | Ravindra Jadeja | ಶೀಘ್ರದಲ್ಲೇ ಟೀಮ್ ಇಂಡಿಯಾಕ್ಕೆ ಮರಳುವ ಸೂಚನೆ ನೀಡಿದ ರವೀಂದ್ರ ಜಡೇಜಾ!