ನವದೆಹಲಿ: ಟೀಮ್ ಇಂಡಿಯಾಕ್ಕೆ ವಿದೇಶಿ ಕೋಚ್ಗಳ ಅಗತ್ಯವಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹವಾಗ್(Virender Sehwag) ಹೇಳಿದ್ದಾರೆ. ಜತೆಗೆ ತನಗೆ ನಾಯಕ ಸ್ಥಾನ ನೀಡುವುದಾಗಿ ವಂಚಿಸಿದ ವಿಚಾರವನ್ನು ಅವರು ಹೇಳಿದ್ದಾರೆ.
ಕೆಳ ದಿನಗಳ ಹಿಂದಷ್ಟೇ ತಾನು ಭಾರತ ತಂಡದ ಕೋಚ್ ಹುದ್ದುಗೆ ಅರ್ಜಿ ಸಲ್ಲಿಸಿದ ವಿಚಾರವನ್ನು ಸೆಹವಾಗ್ ಬಹಿರಂಗ ಪಡಿಸಿದ್ದರು. ಇದೀಗ ಮತ್ತೊಂದು ಸ್ಫೋಟಕ ವಿಚಾರವನ್ನು ಹೊರಹಾಕಿದ್ದಾರೆ. ನಮ್ಮ ದೇಶದಲ್ಲಿ ಭಾರತ ತಂಡವನ್ನು ನಿರ್ವಹಿಸುವ ಉತ್ತಮ ತರಬೇತುದಾರರಿದ್ದಾರೆ. ಹೀಗಾಗಿ ಅವರಿಗೆ ಆದ್ಯತೆ ನೀಡಬೇಕು. ಇದರ ಬದಲು ವಿದೇಶಿ ಕೋಚ್ಗಳಿಗೆ ಮಣೆ ಹಾಕಬಾರದು ಎಂದು ಹೇಳಿದರು.
“ನಮಗೆ ವಿದೇಶಿ ಕೋಚ್‌ಗಳು ಅಗತ್ಯವಿಲ್ಲ. ನಾನು ಟೀಮ್ ಇಂಡಿಯಾ ಪರ ಆಡುವವಾಗಲು ಇದೇ ವಿಚಾರವನ್ನು ಬಿಸಿಸಿಐ ಮತ್ತು ಟೀಮ್ ಮ್ಯಾನೆಜ್ಮೆಂಟ್ ಹೇಳಿದ್ದೆ. ಇದಕ್ಕೆ ಅವರು ಭಾರತೀಯ ತರಬೇತುದಾರರು ಆಟಗಾರರ ಕಡೆಗೆ ಪಕ್ಷಪಾತ ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ವಿದೇಶಿ ಕೋಚ್ಗಳನ್ನು ಆಯ್ಕೆ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ ವಿದೇಶಿ ಕೋಚ್‌ಗಳು ಕೂಡ ಈ ವಿಚಾರದಲ್ಲಿ ಹೊರತಾಗಿಲ್ಲ. ಗ್ರೆಗ್ ಚಾಪೆಲ್(Greg Chappell) ಅವರು ಸಚಿನ್, ದ್ರಾವಿಡ್, ಗಂಗೂಲಿ ವಿಚಾರದಲ್ಲಿ ತಾರತಮ್ಯ ತೋರಿದ್ದಾರೆ” ಎಂದು ಸೆಹವಾಗ್ ಹೇಳಿದರು.
ಇದನ್ನೂ ಓದಿ Virat Kohli: ಕೊಹ್ಲಿಯ ಲುಂಗಿ ಡ್ಯಾನ್ಸ್ ನೋಡಿ ಫಿದಾ ಆದ ಫ್ಯಾನ್ಸ್; ವಿಡಿಯೊ ವೈರಲ್
ನಾಯಕತ್ವ ನೀಡುವುದಾಗಿ ಮೋಸ
ಸೌರವ್ ಗಂಗೂಲಿ ಅವರು ನಾಯಕತ್ವದಿಂದ ಕೆಳಗಿಳಿದ ವೇಳೆ ಟೀಮ್ ಇಂಡಿಯಾವನ್ನು ಮುನ್ನಡೆಸಬೇಕೆಂದು ಆಗಿನ ಕೋಚ್ ಗ್ರೆಗ್ ಚಾಪೆಲ್ ನನಗೆ ಭರವಸೆ ನೀಡಿದ್ದರು. ನನಗೆ ನಾಯಕತ್ವ ಮೇಲೆ ಯಾವುದೇ ಆಸೆ ಇರಲಿಲ್ಲ. ಆದರೂ ಚಾಪೆಲ್ ನನ್ನನ್ನು ಒತ್ತಾಯಿಸಿ ನೀವೆ ಕೋಚ್ ಎಂದು ನಂಬಿಸಿದ್ದರು. ಅಚ್ಚರಿ ಎಂದರೆ ಈ ಮಾತು ಹೇಳಿದ ಎರಡೇ ತಿಂಗಳಲ್ಲಿ ನನ್ನನ್ನು ತಂಡದಿಂದ ಹೊರಗಿಟ್ಟರು ಎಂದು ಸೆಹವಾಗ್ ಸ್ಫೋಟಕ ವಿಚಾರವೊಂದನ್ನು ಹೇಳಿದ್ದಾರೆ. ಗಂಗೂಲಿ ಬಳಿಕ ದ್ರಾವಿಡ್ ಅವರು ಭಾರತ ತಂಡ ಕೋಚ್ ಆಗಿ ಆಯ್ಕೆಯಾದರು. ಇದಾದ ಬಳಿಕ ಧೋನಿ ಯುವ ಆರಂಭವಾಯಿತು.