ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಐಪಿಎಲ್ನಿಂದ ಬ್ಯಾನ್ ಮಾಡಬೇಕಿತ್ತು ಎಂದು ಮಾಜಿ ಆಟಗಾರ ವಿರೇಂದ್ರ ಸೆಹವಾಗ್ ಹೇಳಿದ್ದಾರೆ. ಹಿಂದೊಮ್ಮೆ ಧೋನಿ(MS Dhoni) ಐಪಿಎಲ್ ವೇಳೆ ನೇರವಾಗಿ ಮೈದಾನಕ್ಕೆ ನುಗ್ಗಿ ಅಂಪೈರ್ ತೀರ್ಪಿನ ಬಗ್ಗೆ ವಾಗ್ವಾದ ನಡೆಸಿದ್ದರು. ಈ ಘಟನೆ ಭಾರೀ ಸದ್ದು ಮಾಡಿತ್ತು. ಇದೇ ವಿಚಾರವಾಗಿ ಸೆಹವಾಗ್(Virender Sehwag) ಧೋನಿಯನ್ನು ಅಂದು ಮೂರು ಪಂದ್ಯಗಳಿಂದ ಬ್ಯಾನ್ ಮಾಡಬೇಕಿತ್ತು(MS Dhoni banned from IPL) ಎಂದು ಹೇಳಿದ್ದಾರೆ.
2019ರಲ್ಲಿ(IPL 2019) ನಡೆದಿದ್ದ ಐಪಿಎಲ್(IPL 2024) ಪಂದ್ಯವೊಂದರಲ್ಲಿ ಧೋನಿ ಆ್ಯಂಗ್ರಿಮ್ಯಾನ್‌ಆಗಿ ಬದಲಾಗಿದ್ದರು. ಜತೆಗೆ ದಂಡದ ಶಿಕ್ಷೆಗೂ ಗುರಿಯಾಗಿದ್ದರು. 12ನೇ ಆವೃತ್ತಿಯ ಐಪಿಎಲ್ನಲ್ಲಿ ಧೋನಿ ಅವರ ಪಿತ್ತ ನೆತ್ತಿಗೇರಿದ ಘಟನೆ ಸಂಭವಿಸಿತ್ತು. ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ(RR Vs CSK) ವಿರುದ್ಧ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಎಸೆತದಲ್ಲಿ ಜಯ ಸಾಧಿಸಿ ಸಂಭ್ರಮಿಸಿತು. ಇದೇ ವೇಳೆ ಕ್ಯಾಪ್ಟನ್ ಕೂಲ್ ಭಾರೀ ಚರ್ಚೆಗೆ ಗುರಿಯಾದ್ದರು.
ಬೆನ್ ಸ್ಟೋಕ್ಸ್ ಎಸೆದ ಅಂತಿಮ ಓವರ್‌ನಲ್ಲಿ ಚೆನ್ನೈಗೆ 18 ರನ್ ಬೇಕಿತ್ತು. ಸ್ಟೋಕ್ಸ್ ಅವರ 4ನೇ ಎಸೆತ ನೋ ಬಾಲ್ ಆಗಿತ್ತು. ಪಂಪೈರ್ ಉಲ್ಲಾಸ್ ಗಾಂದೆ ನೋಬಾಲ್ ನೀಡಿದ್ದರು. ಆದರೆ ಲೆಗ್ ಅಂಪಾಯರ್ ನೋಬಾಲ್ ನೀಡಿರಲಿಲ್ಲ. ಈ ಸನ್ನಿವೇಶ ಎಲ್ಲರನ್ನೂ ಗೊಂದಲಕ್ಕೀಡು ಮಾಡಿತ್ತು. ಈ ಎಸೆತದಲ್ಲಿ ಚೆನ್ನೈಆಟಗಾರರು 2 ರನ್ ಕಸಿದಿದ್ದರು. ಜಡೇಜ ಈ ಕುರಿತು ಅಂಪಾಯರ್‌ಗಳನ್ನು ಪ್ರಶ್ನಿಸಿದ್ದರೂ ಯಾವುದೇ ಧನಾತ್ಮಕ ಉತ್ತರ ದೊರೆಯಲಿಲ್ಲ. ಆಗ ಬೌಂಡರಿ ಗೆರೆ ಬಳಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಧೋನಿ ಮೈದಾನಕ್ಕೆ ಓಡೋಡಿ ಬಂದು ಅಂಪಾಯರ್‌ಗಳ ಜತೆ ವಾಗ್ವಾದಕ್ಕಿಳಿದರು.
ಇದನ್ನೂ ಓದಿ Shakib Al Hasan: ನಿವೃತ್ತಿಯಾಗಿ ಎಂದು ಲೇವಡಿ ಮಾಡಿದ ಸೆಹವಾಗ್ಗೆ ತಕ್ಕ ತಿರುಗೇಟು ನೀಡಿದ ಬಾಂಗ್ಲಾ ನಾಯಕ
ಆದರೆ, ಧೋನಿ ಮಾತನ್ನು ಯಾರೂ ಒಪ್ಪಲಿಲ್ಲ. ಥರ್ಡ್ ಅಂಪಾಯರ್ ಕೂಡ ಮನವಿ ನಿರಾಕರಿಸಿದ್ದರು. ಧೋನಿ ಈ ಹಿಂದೆ ಒಮ್ಮೆಯೂ ಕೂಡ ಮೈದಾನದಲ್ಲಿ ಇಷ್ಟೊಂದು ತಾಳ್ಮೆ ಕಳೆದುಕೊಂಡಿದನ್ನು ಯಾರು ಕೂಡ ನೋಡಿರಲಿಲ್ಲ. ಅಂದು ಧೋನಿಯನ್ನು ಕಂಡ ಅವರ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದರು. ಧೋನಿಯ ಈ ಅತಿರೇಕದ ವರ್ತನೆಗೆ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗಿತ್ತು.
ಕ್ರಿಕ್ಬಜ್ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸೆಹ್ವಾಗ್, ಅಂದು ಧೋನಿಯ ನಡೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದರಿಂದ ಅವರು ಸುಲಭವಾಗಿ ತಪ್ಪಿಸಿಕೊಂಡರು. ನನ್ನ ಪ್ರಕಾರ ಧೋನಿಯನ್ನು ಕನಿಷ್ಠ ಎರಡು ಮೂರು ಪಂದ್ಯಗಳಿಂದ ಬ್ಯಾನ್ ಮಾಡಬೇಕಿತ್ತು. ಏಕೆಂದರೆ ಧೋನಿ ಮಾಡಿರುವುದನ್ನು, ನಾಳೆ ಇನ್ನೊಬ್ಬ ನಾಯಕನೂ ಮಾಡಬಹುದು ಎಂದು ಸೆಹವಾಗ್ ಹೇಳಿದ್ದಾರೆ.