Site icon Vistara News

ಒಡಿಶಾ ರೈಲು ದುರಂತದಲ್ಲಿ ಮಡಿದವರಿಗೆ ಮಿಡಿದ ಸೆಹ್ವಾಗ್​, ಸಂತ್ರಸ್ತರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಭರವಸೆ

Virendra Sehwag

ನವದೆಹಲಿ: ಒಡಿಶಾದಲ್ಲಿ ನಡೆದ ಭೀಕರ ರೈಲು ಅವಘಡದಲ್ಲಿ 280ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 1000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಭಾರತೀಯರೆಲ್ಲರನ್ನೂ ತಲ್ಲಣಗೊಳಿಸಿದೆ. ದೇಶವಾಸಿಗಳು ಪ್ರಾಣ ಕಳೆದುಕೊಂಡವರಿಗೆ, ಗಾಯಗೊಂಡವರಿಗೆ ಕಂಬನಿ ಮಿಡಿದಿದ್ದಾರೆ. ಸರಕಾರ, ಉದ್ಯಮಿಗಳು ಸೇರಿದಂತೆ ಹಲವರು ಸಂತ್ರಸ್ತರ ರಕ್ಷಣೆಯ ಭರವಸೆ ಕೊಟ್ಟಿದ್ದಾರೆ. ಇದೇ ರೀತಿ ಭಾರತ ತಂಡದದ ಮಾಜಿ ಸ್ಫೋಟಕ ಬ್ಯಾಟರ್​​ ವೀರೇಂದ್ರ ಸೆಹ್ವಾಗ್ ಅವರೂ ಸಂತ್ರಸ್ತರಿಗಾಗಿ ಮನಮಿಡಿದಿದ್ದಾರೆ. ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಲು ಮುಂದಾಗಿದ್ದಾರೆ.

ಜೂನ್ 2ರಂದು ಒಡಿಶಾದ ಬಾಲಸೋರ್​ನಲ್ಲಿ ಎರಡು ಎಕ್ಸ್​ಪ್ರೆಸ್​​ ಪ್ಯಾಸೆಂಜರ್ ರೈಲುಗಳು ಮತ್ತು ನಿಂತಿದ್ದ ಸರಕು ರೈಲುಗಳ ನಡುವೆ ಅಪಘಾತ ಸಂಭವಿಸಿತ್ತು. ಈ ಘಟನೆ ಕಳೆದ 20 ವರ್ಷಗಳಲ್ಲಿ ದಾಖಲಾದ ಅತ್ಯಂತ ಭೀಕರ ರೈಲು ಅಪಘಾತ ಎನಿಸಿಕೊಂಡಿದೆ. ಈ ಬಗ್ಗೆ ಮಾತನಾಡಿದ ವೀರೇಂದ್ರ ಸೆಹ್ವಾಗ್​, ಈ ದುಃಖದ ಸಮಯದಲ್ಲಿ ಅವರೆಲ್ಲರ ಜತೆಗಿರುವೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳುವುದು ನಾನು ಮಾಡಬಹುದಾದ ಕನಿಷ್ಠ ನೆರವು ಎನಿಸಿಕೊಳ್ಳಲಿದೆ. ನಾನು ದುರಂತದಲ್ಲಿ ಮಡಿದ ಮಕ್ಕಳಿಗೆ ಸೆಹ್ವಾಗ್ ಇಂಟರ್​ನ್ಯಾಷನಲ್​ ಸ್ಕೂಲ್​ನ ಬೋರ್ಡಿಂಗ್ ಸೌಲಭ್ಯದಲ್ಲಿ ಉಚಿತ ಶಿಕ್ಷಣ ನೀಡುತ್ತೇನೆ, ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : MS Dhoni : ಧೋನಿ ಮುಂದಿನ ವರ್ಷವೂ ಆಡುತ್ತಾರೆ ಎಂಬ ಸೂಚನೆ ನೀಡಿದ ಡ್ವೇನ್​ ಬ್ರಾವೊ

ರಕ್ಷಣಾ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿರುವ ಎಲ್ಲಾ ಧೈರ್ಯಶಾಲಿ ಕಾರ್ಯಕರ್ತರು ಮತ್ತು ಮಹಿಳೆಯರಿಗೆ ಮತ್ತು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುತ್ತಿರುವ ವೈದ್ಯಕೀಯ ತಂಡ ಮತ್ತು ಸ್ವಯಂಸೇವಕರಿಗೆ ವಂದನೆಗಳು. ನಾವೆಂದೂ ಒಗ್ಗಟ್ಟಾಗಿರೋಣ ಎಂದು ಹೇಳಿದ್ದಾರೆ.

Exit mobile version