ಬೆಂಗಳೂರು: ಫಿಟ್ನೆಸ್ ವಿಚಾರದಲ್ಲಿ ಸದಾ ಸಲಹೆ ನೀಡುತ್ತಿರುವ ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ(virat kohli) ಮತ್ತು ಅವರ ಪತ್ನಿ ಅನುಷ್ಕಾ ಶರ್ಮ(Anushka Sharma) ಅವರು ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಆಡಿದ್ದಾರೆ. ದಿನ ನಿತ್ಯದ ಜೀವನದಲ್ಲಿ ಕ್ರೀಡೆಯ ಮಹತ್ವ ಸಾರುವ ‘Let There Be Sport’ ಅಭಿಯಾನದ ಜಾಗೃತಿ ಸಾರುವ ಉದ್ದೇಶದಿಂದ ವಿರುಷ್ಕಾ ದಂಪತಿ(Virushka) ಬ್ಯಾಡ್ಮಿಂಟನ್ ಆಡಿದ್ದಾರೆ.
ಪ್ರತಿಯೊಬ್ಬರು ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ವಿರಾಟ್ ಹಾಗೂ ಅನುಷ್ಕಾ ಈ ರೀತಿ ವಿನೂತನ ಪ್ರಯೋಗ ನಡೆಸಿ ಗಮನ ಸೆಳೆದಿದ್ದಾರೆ. ನಗರದ ರೆಸಿಡೆನ್ಸಿಯಲ್ ಸೊಸೈಟಿಯಲ್ಲಿ ಆಯೋಜಿಸಲಾಗಿದ್ದ ಫ್ರೆಂಡ್ಲಿ ಮಿಶ್ರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜತೆಯಾಗಿ ಬ್ಯಾಡ್ಮಿಂಟನ್ ಆಡುವ ಮೂಲಕ ಗಮನ ಸೆಳೆದರು.
ಇತ್ತೀಚೆಗಷ್ಟೇ ಕೊಹ್ಲಿ, ‘Let There Be Sport’ ಅಭಿಯಾನದಲ್ಲಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಜತೆಗೂಡಿ ಕ್ರೀಡೆಯಲ್ಲಿ ಫಿಟ್ನೆಸ್ ಮಹತ್ವವನ್ನು ಸಾರಿದ್ದರು. ಇದೀಗ ಮತ್ತೆ ಇದೇ ಅಭಿಯಾನದ ಅಡಿಯಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ತಮ್ಮ ಪತ್ನಿ ಜತೆಗೂಡಿ ಬ್ಯಾಡ್ಮಿಂಟನ್ ಆಡುವ ಮೂಲಕ ಫಿಟ್ನೆಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ IPL 2023: ನಿಧಾನಗತಿ ಬೌಲಿಂಗ್: ವಿರಾಟ್ ಕೊಹ್ಲಿಗೆ 24 ಲಕ್ಷ ರೂ. ದಂಡ
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿರಾಟ್ ಕೊಹ್ಲಿ, ,” ಕ್ರೀಡೆ ಎಂಬುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ಜೀವನದ ಇತರೆ ಅಗತ್ಯತೆಗಳಂತೆ ಕ್ರೀಡೆ ಕೂಡಾ ಮಹತ್ವದ್ದು. ದೈಹಿಕವಾಗಿ ವ್ಯಾಯಾಮ ಸಿಗುವ ಯಾವುದೇ ಕ್ರೀಡೆಯಾದರು ನಾವು ನಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಒಳ್ಳೆಯದ್ದು. ಕ್ರೀಡೆಯಲ್ಲಿ ಸಿಗುವ ಆರೋಗ್ಯ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ” ಎಂದು ಹೇಳಿದರು.
ಇದನ್ನೂ ಓದಿ IPL 2023: ಮುಂದಿನ ಬಾರಿ ಈಡನ್ನಲ್ಲಿ ಕೆಕೆಆರ್ ಜೆರ್ಸಿ ರಾರಾಜಿಸಲಿದೆ; ನಿವೃತ್ತಿಯ ಸುಳಿವು ನೀಡಿದ ಧೋನಿ
“ಫಿಟ್ನೆಸ್ ಬಗ್ಗೆ ಸಂದೇಶ ಸಾರಲು ನೆರವಾದ ಪೂಮಾ ಸಂಸ್ಥೆಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಶುಭವಾಗಲಿ, ನಿಮ್ಮ ದಿನ ನಿತ್ಯದ ಜೀವನದಲ್ಲಿಯೂ ಕೆಲ ಸಮಯವನ್ನಾದರೂ ವ್ಯಾಯಾಮಕ್ಕೆ ಮೀಸಲಿಡಿ, ನಿಮ್ಮ ಜತೆ ಬೆರೆತು ಅಮ್ಯೂಲ್ಉ ಸಮಯ ಕಳೆದಿರುವುದು ಸಂತಸ ತಂದಿದೆ” ಎಂದು ಕೊಹ್ಲಿ ಹೇಳಿದರು.