Site icon Vistara News

Virat And Anushka| ಮಗಳ ಹುಟ್ಟುಹಬ್ಬಕ್ಕೆ ವಿಶೇಷ ಫೋಟೊ ಹಂಚಿಕೊಂಡ ವಿರುಷ್ಕಾ ಜೋಡಿ!

kohli and anushka

ಮುಂಬಯಿ: ಟೀಮ್​ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರ ಮುದ್ದಾದ ಮಗಳು ವಾಮಿಕಾಗೆ ಎರಡು ವರ್ಷ ತಂಬಿದೆ. ಮಗಳ ಹುಟ್ಟುಹಬ್ಬದ ದಿನ ವಿರುಷ್ಕಾ ಜೋಡಿ ಮುದ್ದಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ತನ್ನ ಮಗಳು ಎದೆಗೆ ಒರಗಿ ತಮಾಷೆ ಮಾಡುತ್ತಿರುವ ಫೋಟೊವನ್ನು ಶೇರ್ ಮಾಡುವ ಮೂಲಕ ನನ್ನ ಪ್ರೀತಿ ಹೃದಯ ಬಡಿತಕ್ಕೆ 2 ವರ್ಷ ತುಂಬಿದೆ ಎಂದು ಶೀರ್ಷಿಕೆ ಬರೆದಿದ್ದಾರೆ. ಅನುಷ್ಕಾ ತಮ್ಮ ಮಗಳೊಂದಿಗೆ ವಿವಿಧ ಸ್ಥಳಗಳಲ್ಲಿ ಕಳೆದ ಸುಂದರ ಕ್ಷಣಗಳ ಫೋಟೊವನ್ನು ಶೇರ್​ ಮಾಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಕೆಲ ನೆಟ್ಟಿಗರು ವಾಮಿಕಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸದ್ಯ ವಿರಾಟ್​ ಶ್ರೀಲಂಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯವನ್ನಾಡಲು ಕೋಲ್ಕೊತಾದಲ್ಲಿದ್ದಾರೆ. ಲಂಕಾ ಮತ್ತು ಭಾರತದ ವಿರುದ್ಧದ ದ್ವಿತೀಯ ಏಕದಿನ ಪಂದ್ಯ ಗುರುವಾರ ಈಡನ್​ ಗಾರ್ಡನ್​ನಲ್ಲಿ ನಡೆಯಲಿದೆ.

ಇದನ್ನೂ ಓದಿ | Virat kohli | ಎರಡು ಜೀವದಾನ ಪಡೆದಿದ್ದಕ್ಕೆ ದೇವರಿಗೆ ಥ್ಯಾಂಕ್ಸ್​ ಹೇಳಿದ ವಿರಾಟ್​ ಕೊಹ್ಲಿ

Exit mobile version