Site icon Vistara News

Wanindu Hasaranga: ಐಪಿಎಲ್​ನಿಂದ ಹೊರಬಿದ್ದ ಹೈದರಾಬಾದ್‌ ತಂಡದ ಹಸರಂಗ!

Wanindu Hasaranga

ಕೊಲಂಬೊ: ಶ್ರೀಲಂಕಾದ ಸ್ಪಿನ್​ ಆಲ್‌ರೌಂಡರ್‌ ವನಿಂದು ಹಸರಂಗ(Wanindu Hasaranga) ಅವರು ಸಂಪೂರ್ಣವಾಗಿ ಐಪಿಎಲ್(IPL 2024)​ ಟೂರ್ನಿಯಿಂದ ಹೊರಬೀಳಲಿದ್ದಾರೆ ಎಂದು ವರದಿಯಾಗಿದೆ. ಅವರು ಸನ್‌ರೈಸರ್ ಹೈದರಾಬಾದ್‌(Sunrisers Hyderabad) ತಂಡದ ಸದಸ್ಯನಾಗಿದ್ದಾರೆ.

ಬಾಂಗ್ಲಾದೇಶ ನಡುವಿನ ಟೆಸ್ಟ್‌ ಸರಣಿಗಾಗಿ ಹಸರಂಗ ಅವರು ಆರಂಭಿಕ ಮೂರು ಪಂದ್ಯಗಳಿಗೆ ಮಾತ್ರ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಗಾಯಗೊಂಡಿರುವ ಅವರು ಸಂಪೂರ್ಣವಾಗಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

ಎಡ ಹಿಮ್ಮಡಿಗೆ ಗಾಯಕ್ಕೆ ತುತ್ತಾಗಿರುವ ಹಸರಂಗ ಟೆಸ್ಟ್​ ಸರಣಿಯಿಂದಲೂ ಹೊರಗುಳಿದಿದ್ದರು. ಸದ್ಯ ಪುನರ್ವಸತಿಗೆ ಒಳಗಾಗಿರುವ ಅವರು ಚೇತರಿಕೆಗೆ ಇನಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಜತೆಗೆ ಲಂಕಾ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ಆಶ್ಲೇ ಡಿ ಸಿಲ್ವಾ ಅವರು ಹಸರಂಗ ಐಪಿಎಲ್​ ಆಡುವುದು ಅನುಮಾನ ಎಂದು ಹೇಳಿರುವುದಾಗಿ ಸಂಡೇ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.


“ಹಸರಂಗ ಅವರಿಗೆ ಹಿಮ್ಮಡಿಯಲ್ಲಿ ಊತವಿದೆ ಮತ್ತು ಅವರು ಚುಚ್ಚುಮದ್ದಿನೊಂದಿಗೆ ಆಡುತ್ತಿದ್ದಾರೆ. ಆದ್ದರಿಂದ ಅವರು ವಿಶ್ವಕಪ್‌ಗೆ ಮೊದಲು ಈ ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿದ್ದಾರೆ. ಐಪಿಎಲ್ ಆಡದೇ ಇರಲು ನಿರ್ಧರಿಸಿರುವುದಾಗಿ ನಮಗೆ ತಿಳಿಸಿದ್ದಾರೆ” ಎಂದು ಡಿ ಸಿಲ್ವಾ ಹೇಳಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಪರ ಆಡಿದ್ದ ವನಿಂದು ಹಸರಂಗ ಅವರನ್ನು ಎಸ್‌ಆರ್‌ಹೆಚ್ ತಂಡವು ಮೂಲ ಬೆಲೆ 1.5 ಕೋಟಿ ರೂಪಾಯಿಗೆ ಖರೀದಿಸಿತ್ತು. ಅನುಭವಿ ಸ್ಪಿನ್ನರ್​ ಇಲ್ಲದೆಯೇ ಪಂದ್ಯವನ್ನಾಡುತ್ತಿದ್ದ ಹೈದರಾಬಾದ್​ ಹಸರಂಗ ಆಗಮನಕ್ಕಾಗಿ ಬಹಳ ನಿರೀಕ್ಷೆಯಿಂದ ಕಾದು ಕುಳಿತಿತ್ತು. ಇದೀಗ ಅವರ ಅಲಭ್ಯದ ಸುದ್ದಿ ಕೇಳಿ ಮತ್ತಷ್ಟು ಚಿಂತೆಗೆ ಒಳಪಟ್ಟಿದೆ. ಇದುವರೆಗೆ 26 ಐಪಿಎಲ್​ ಪಂದ್ಯಗಳನ್ನು ಆಡಿರುವ ಹಸರಂಗ 35 ವಿಕೆಟ್​ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ​ ಅತಿ ವೇಗದ ಎಸೆತ ಎಸೆದ ಟಾಪ್​ 5 ಬೌಲರ್​ಗಳು ಯಾರು?

ಇತ್ತೀಚೆಗೆ ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಮೂರನೇ ಪಂದ್ಯದ ಸಮಯದಲ್ಲಿ, ಹಸರಂಗ ಅವರು ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ರೂಪಿಸಿರುವ ಐಸಿಸಿ ನೀತಿ ಸಂಹಿತೆಯ 2.8 ನೇ ವಿಧಿಯನ್ನು ಉಲ್ಲಂಘಿಸಿದ್ದರು. ಹೀಗಾಗಿ ನಿಷೇಧ ಹೇರಲಾಗಿದೆ. ಪಂದ್ಯದ 37 ನೇ ಓವರ್​ನಲ್ಲಿ ಹಸರಂಗ ಅಂಪೈರ್ ಒಬ್ಬರಿಂದ ಕ್ಯಾಪ್ ಕಸಿದುಕೊಂಡು ಅವರನ್ನು ಗೇಲಿ ಮಾಡಿದ್ದರು.

ಹಸರಂಗ ಅವರಿಗೆ ಪಂದ್ಯದ ಶುಲ್ಕದ ಶೇಕಡಾ ೫೦ರಷ್ಟು ದಂಡ ಕೂಡ ವಿಧಿಸಲಾಗಿದೆ. ಅವರು ತಮ್ಮ ಅಪರಾಧಕ್ಕಾಗಿ ಮೂರು ಡಿಮೆರಿಟ್ ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದು 24 ತಿಂಗಳ ಅವಧಿಯಲ್ಲಿ ಅವರ ಒಟ್ಟು ಡಿಮೆರಿಟ್ ಅಂಕಗಳನ್ನು ಎಂಟಕ್ಕೆ ಏರಿದೆ.

ಹೈದರಾಬಾದ್​ ತಂಡ 2 ಪಂದ್ಯಗಳನ್ನು ಆಡಿ ತಲಾ ಒಂದು ಗೆಲುವು ಮತ್ತು ಸೋಲು ಕಂಡಿದೆ. ಮೂರನೇ ಪಂದ್ಯವನ್ನು ಗುಜರಾತ್ ವಿರುದ್ಧ ಆಡುತ್ತಿದೆ. ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.

ಹೈದರಾಬಾದ್​ ತಂಡ:​

ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ಗ್ಲೆನ್‌ಶ್ ರೆಡ್ಡಿ, ನಿನ್‌ನಿಷ್ ರೆಡ್ಡಿ , ಉಪೇಂದ್ರ ಯಾದವ್, ರಾಹುಲ್ ತ್ರಿಪಾಠಿ, ಟಿ ನಟರಾಜನ್, ಅನ್ಮೋಲ್ಪ್ರೀತ್ ಸಿಂಗ್, ಜಾತವೇಧ್ ಸುಬ್ರಮಣ್ಯನ್, ಸನ್ವಿರ್ ಸಿಂಗ್, ಫಜಲ್ಹಕ್ ಫಾರೂಕಿ, ಮಾರ್ಕೊ ಜಾನ್ಸೆನ್, ಆಕಾಶ್ ಮಹಾರಾಜ್ ಸಿಂಗ್.

Exit mobile version