ಬೆಂಗಳೂರು: ಭಾರತ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ನಡುವೆ ಶ್ರೀಲಂಕಾ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಇತ್ತೀಚಿನ ಬೆಳವಣಿಗೆ ಪ್ರಕಾರ ಆ ತಂಡದ ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗ (Wanindu Hasaranga) ಅವರನ್ನು ಸರಣಿಯ ಉಳಿದ ಪಂದ್ಯಗಳಿಂದ ಹೊರಗಿಡಲಾಗಿದೆ. ಆಗಸ್ಟ್ 02 ರ ಶುಕ್ರವಾರ ಕೊಲಂಬೊದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಸ್ನಾಯುಸೆಳೆತದ ಗಾಯದಿಂದಾಗಿ ಹಸರಂಗ ಹೊರಗುಳಿದಿದ್ದರು. ಹೀಗಾಗಿ ಎರಡನೇ ಪಂದ್ಯದಲ್ಲಿಯೂ ಅವರು ಆಡಿಲ್ಲ. ಅವರು ಮೂರನೇ ಪಂದ್ಯಕ್ಖೂ ಲಭ್ಯರಿರುವುದಿಲ್ಲ.
Major blow : Wanindu Hasaranga ruled out of the India ODI series pic.twitter.com/XhT7XGUEit
— Azzam Ameen (@AzzamAmeen) August 3, 2024
ಲಂಕಾ ಲಯನ್ಸ್ ತಂಡವು ಈಗಾಗಲೇ ದುಷ್ಮಂತ ಚಮೀರಾ, ಮಥೀಶಾ ಪತಿರಾನಾ, ದಿಲ್ಶಾನ್ ಮಧುಶಂಕಾ ಅವರ ಬೌಲಿಂಗ್ ವಿಭಾಗದಲ್ಲಿ ಇಲ್ಲದಿರುವುದರಿಂದ ಇದು ದೊಡ್ಡ ಹಿನ್ನಡೆ ಎದುರಿಸುತ್ತಿದೆ. ಗಾಯದಿಂದಾಗಿ ಈ ಮೂವರೂ 50 ಓವರ್ಗಳ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಅತ್ಯಂತ ಅನುಭವಿ ಬೌಲರ್ ಪ್ರಮುಖ ಸರಣಿಯಿಂದ ಹೊರಹಾಕಲ್ಪಟ್ಟಿದ್ದಾರೆ.
ಆತಿಥೇಯ ತಂಡಕ್ಕೆ ಹಸರಂಗ ಬದಲಿಗೆ ಜೆಫ್ರಿ ವಾಂಡರ್ಸೆ ಸೇರಿಕೊಂಡಿದ್ದಾರೆ. ಅವರು ಎರಡನೇ ಪಂದ್ಯದಲ್ಲಿ ಭಾರತದ 6 ವಿಕೆಟ್ ಉರುಳಿಸಿದ್ದಾರೆ. . ಬೌಲಿಂಗ್ಗೆ ಸಂಬಂಧಿಸಿದಂತೆ ಹೇಳುವುದಾದರೆ ವಾಂಡರ್ಸೆ ಸ್ವತಃ ಲೆಗ್-ಸ್ಪಿನ್ನರ್ ಆಗಿರುವರ ಕಾರಣ ಹಸರಂಗ ಅವರಿಗೆ ಸೂಕ್ತ ಬದಲಿ ಆಟಗಾರರಾಗಿದ್ದಾರೆ. ಆದಾಗ್ಯೂ, ಅವರು ಬ್ಯಾಟಿಂಗ್ನಲ್ಲಿ ವಿಶ್ವಾಸಾರ್ಹ ಸೇರ್ಪಡೆಯಾಗಿಲ್ಲ.
ಮೊದಲ ಪಂದ್ಯದಲ್ಲಿ ಹಸರಂಗ ಮೂರು ನಿರ್ಣಾಯಕ ವಿಕೆಟ್ಗಳನ್ನು ಕಬಳಿಸುವ ಮೂಲಕ ಆತಿಥೇಯರ ಮೇಲೆ ಪ್ರಭಾವ ಬೀರಿದ್ದರು. ಆದಾಗ್ಯೂ, ಬ್ಯಾಟ್ಗನೊಂದಿಗೆ ಅವರ ಕೊಡುಗೆಗಳು ನಗಣ್ಯವಾಗಿದ್ದವು. ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ದ್ವೀಪ ರಾಷ್ಟ್ರವು ಸರಣಿಯ ಉಳಿದ ಭಾಗಕ್ಕೆ ಲೆಗ್-ಸ್ಪಿನ್ನರ್ ಸೇವೆಯನ್ನು ತೀವ್ರವಾಗಿ ಕಳೆದುಕೊಳ್ಳಲಿದೆ,
ಜೆಫ್ರಿ ವಾಂಡರ್ಸೆ
ಲೆಗ್ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅವರು ವನಿಂದು ಹಸರಂಗ ಬದಲಿಗೆ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷದ ಜನವರಿಯಲ್ಲಿ ಜಿಂಬಾಬ್ವೆ ವಿರುದ್ಧದ ತವರು ಏಕದಿನ ಸರಣಿಯಲ್ಲಿ ವಾಂಡರ್ಸೆ ಕೊನೆಯ ಬಾರಿಗೆ ಶ್ರೀಲಂಕಾ ಪರ ಆಡಿದ್ದರು. 22 ಏಕದಿನ ಪಂದ್ಯಗಳನ್ನಾಡಿ 27 ವಿಕೆಟ್ ಕಬಳಿಸಿದ್ದಾರೆ. 34ರ ಹರೆಯದ ವಾಂಡರ್ಸೆ 1 ಟೆಸ್ಟ್ ಹಾಗೂ 14 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಭಾರತಕ್ಕೆ ಸೋಲು
ಬೆಂಗಳೂರು : ಆತಿಥೇಯ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ (IND vs SL ODI ) ಎರಡನೇ ಪಂದ್ಯದಲ್ಲಿ ಭಾರತ ತಂಡ 32 ರನ್ಗಳ ಸೋಲಿಗೆ ಒಳಗಾಗಿದೆ. ಲಂಕಾದ ಸ್ಪಿನ್ನರ್ಗಳ ದಾಳಿಗೆ ನಲುಗಿದ ಭಾರತೀಯ ಬ್ಯಾಟರ್ಗಳು ಸುಲಭವಾಗಿ ಶರಣಾದರು. ಪ್ರಮುಖವಾಗಿ ಕಳೆದ ಎರಡು ಪಂದ್ಯಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಪ್ರದರ್ಶನದ ಬಗ್ಗೆ ಟೀಕೆಗಳು ಕೇಳಿ ಬಂದವು. ಭಾರತ ಹಾಗೂ ಲಂಕಾ ನಡುವಿನ ಮೊದಲ ಪಂದ್ಯವು ಟೈ ಆಗಿತ್ತು. ಹೀಗಾಗಿ ಈ ಗೆಲುವಿನೊಂದಿಗೆ ಲಂಕಾ ತಂಡವು ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದುಕೊಂಡಿದೆ. ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಮಾತ್ರ ಭಾರತ ತಂಡದ ಮರ್ಯಾದೆ ಉಳಿಯಬಹುದು. ಇಲ್ಲವಾದರೆ ರೋಹಿತ್ ಶರ್ಮಾ ಬಳಗ ಮುಖಭಂಗ ಅನುಭವಿಸುವ ಎಲ್ಲ ಸಾಧ್ಯತೆಗಳಿವೆ.
ಕೊಲೊಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಲಂಕಾ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ಗೆ 240 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ.. ಓವರ್ಗಳಲ್ಲಿ 42.2 ಓವರ್ಗಳಲ್ಲಿ 208 ರನ್ಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು. ಜೆಫ್ರಿ ವಂಡರ್ಸೆ 6 ವಿಕೆಟ್ ಹಾಗೂ ಚರಿತ್ ಅಸಲಂಕಾ 3 ವಿಕೆಟ್ ಉರುಳಿಸಿ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಲಂಕಾ ಸ್ಪಿನ್ನರ್ಗಳ ದಾಳಿಗೆ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ನಿರಾಸೆಗೆ ಒಳಗಾಯಿತು.