ಹೈದರಾಬಾದ್: ಲಂಕಾ(PAK vs SL) ವಿರುದ್ಧ ಬೃಹತ್ ಮೊತ್ತವನ್ನು ಚೇಸಿಂಗ್ ನಡೆಸಿ ದಾಖಲೆಯ ಗೆಲುವು ಸಾಧಿಸಿದ ಪಾಕಿಸ್ತಾನ ತಂಡದ ವಿರುದ್ಧ ಮತ್ತೆ ಬೌಂಡರಿ ಗೆರೆಯ ಕಳ್ಳಾಟದ ಆರೋಪ ಕೇಳಿ ಬಂದಿದೆ. ನೆದರ್ಲೆಂಡ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿಯೂ ಪಾಕ್ ತಂಡದ ವಿರುದ್ಧ ಈ ಆರೋಪ ಕೇಳಿ ಬಂದಿತ್ತು. ಪದೇಪದೆ ಬೌಂಡರಿ ಗೆರೆಯನ್ನು ನಿಗದಿತ ಸ್ಥಳಕ್ಕಿಂತ ದೂರು ತಳ್ಳುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಬೌಂಡರಿ ಸಿಕ್ಸರ್ಗಳ ಸುರಿಮಳೆಯನ್ನೇ ಸುರಿಸಿ ಉತ್ತಮ ಆರಂಭ ಪಡೆಯಿತು. ಲಂಕಾದ ಆಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಫೀಲ್ಡಿಂಗ್ ನಡೆಸುತ್ತಿದ್ದ ಪಾಕಿಸ್ತಾನ ಬೌಂಡರಿ ಗೆರೆಯನ್ನು ಮತ್ತಷ್ಟು ದೂರಕ್ಕೆ ತಳ್ಳಿದ್ದಾರೆ ಎಂಬ ಅನುಮಾನವೊಂದು ಮೂಡಿದೆ.
ಅಂಪೈರ್ಗಳ ಗಮನಕ್ಕೆ ಬಂದಿಲ್ಲವೇ?
ಕುಸಾಲ್ ಮೆಂಡಿಸ್ ಹೊಡೆತವನ್ನು ಬೌಂಡರಿ ಲೈನ್‌ನಲ್ಲಿ ಇಮಾಮ್ ಉಲ್ ಹಕ್ ಕ್ಯಾಚ್ ಹಿಡಿದ್ದರು. ಆದರೆ ಇಮಾಮ್ ಅವರು ನಿಗದಿತ ಬೌಂಡರಿ ಗೆರೆಯ ಮಾರ್ಕ್ಗಿಂತ ಹೊರಗಿರುವುದು ಪಂದ್ಯದ ಬಳಿಕ ಸ್ಪಷ್ಟವಾಗಿ ಗೋಚರಿಸಿದೆ. ಬೌಂಡರಿ ಲೈನ್ ಮತ್ತಷ್ಟು ಮುಂದೆ ಸರಿದಿರುವುದು ಫೋಟೊ ಮತ್ತು ವಿಡಿಯೊದಲ್ಲಿ ಗಮನಿಸಬಹುದಾಗಿದೆ. ಹೀಗಾಗಿ ಪಾಕ್ ಮೋಸದಾಟ ಆಡಿತೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಟಂಡಿದೆ. ಅಲ್ಲದೆ ಪಾಕ್ ವಿರುದ್ಧದ ಪಂದ್ಯದಲ್ಲಿ ಮಾತ್ರ ಏಕೆ ಹೀಗೆ ಸಂಭವಿಸುತ್ತದೆ ಎನ್ನುವ ಅನುಮಾನವೂ ಮೂಡಿದೆ. ಈ ಬಗ್ಗೆ ಮುಂದಿನ ಪಂದ್ಯದಲ್ಲಿ ಫೀಲ್ಡ್ ಅಂಪೈರ್ ಮತ್ತು ಔಟ್ ಫೀಲ್ಡ್ ಅಂಪೈರ್ಗಳು ನಿಗಾ ವಹಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಸರಿಯಾದ ಜಾಗದಲ್ಲಿ ಬೌಂಡರಿ ಗೆರೆ ಇದ್ದರೆ, ಕುಸಾಲ್ ಮೆಂಡಿಸ್ ಔಟಾಗುತ್ತಿರಲಿಲ್ಲ. ಶತಕ ಬಾರಿಸಿ ಮಿಂಚಿದ್ದ ಅವರು ಮತ್ತಷ್ಟು ರನ್ ಗಳಿಸಬಹುದಿತ್ತು. ಒಟ್ಟಾರೆ ಬೌಂಡರಿ ಗೆರೆಯನ್ನು ಪಾಕ್ ಆಟಗಾರರು ಉದ್ದೇಶ ಪೂರ್ವಕವಾಗಿಯೇ ದೂರ ತಳ್ಳಿದ್ದಾರೋ ಅಥವಾ ಮೈದಾನ ಸಿಬ್ಬಂದಿಗಳು ಬೌಂಡರಿ ಲೈನ್ ಹಾಕುವಾಗ ತಮಗೆ ಗೊತ್ತಿಲ್ಲದಂತೆ ದೂರವಿಟ್ಟಿದ್ದಾರಾ ಎನ್ನುವುದು ಸ್ಪಷ್ಟವಾಗಿಲ್ಲ. ಐಸಿಸಿ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ ಈ ವಿಚಾರದ ಬಗ್ಗೆ ಗಂಭೀರವಾಗಿ ಚರ್ಚೆಗಳು ನಡೆಯುತ್ತಿವೆ.
This is absolutely pathetic from the Pakistan team. They are increasing boundary size in every match. @ICC take a look.
— 𝐊𝐨𝐡𝐥𝐢𝐧𝐚𝐭!𝟎𝐧_👑🚩 (@bholination) October 10, 2023
Once a cheater always a cheater. Shame on them. pic.twitter.com/DlV6Vo0pZa
ನಿಯಮದಲ್ಲಿ ಏನಿದೆ?
ಎಂಸಿಸಿ ನಿಯಮ 19.3.2ರ ಪ್ರಕಾರ, ಫೀಲ್ಟರ್ ಒಬ್ಬ ಬೌಂಡರಿ ತಡೆಯುವ ಯತ್ನದಲ್ಲಿ ಬೌಂಡರಿ ಮಾರ್ಕ್ಗೆ ಹಾಕಿರುವ ಯಾವುದೇ ವಸ್ತು ನಿಗದಿತ ಸ್ಥಳಕ್ಕಿಂತ ದೂರ ಸರಿದರೆ ಅದನ್ನು ಶೀಘ್ರವೇ ಸರಿಯಾದ ಜಾಗಕ್ಕೆ ಜೋಡಿಸಬೇಕು. ಅಥವಾ ಮೈದಾನ ಸಿಬ್ಬಂದಿಗಳು ಇದನ್ನು ಸರಿಪಡಿಸಬೇಕು. ಒಂದು ವೇಳೆ ಬ್ಯಾಟರ್ ಹೊಡೆದ ಚೆಂಡನ್ನು ನಿಗದಿತ ಸ್ಥಳ ಮತ್ತು ಮುಂದೆ ಹೋಗಿರುವ ಮಾರ್ಕ್ನ ನಡುವೆ ಹಿಡೆದರೆ ಇದನ್ನು ಬೌಂಡರಿ ಎಂದು ಪರಿಗಣಿಸಲಾಗುತ್ತದೆ. ಎಂಸಿಸಿ ನಿಯಮ 19.3.1 ಪ್ರಕಾರ ಮೂಲ ಸ್ಥಾನದಿಂದಲೇ ಬೌಂಡರಿಯನ್ನು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ Pakistan vs Sri Lanka: ಒಂದೇ ಪಂದ್ಯದಲ್ಲಿ 4 ಶತಕ; ವಿಶ್ವಕಪ್ನಲ್ಲಿ ಇದು ವಿಶ್ವದಾಖಲೆ
ಪಂದ್ಯ ಗೆದ್ದ ಪಾಕ್
ಹೈದರಾಬಾದ್‌ನ ಬ್ಯಾಟಿಂಗ್ ಸ್ನೇಹಿ ಟ್ರ್ಯಾಕ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 9 ವಿಕೆಟಿಗೆ 344 ರನ್ ಪೇರಿಸಿತು. ಬೃಹತ್ ಮೊತ್ತವನ್ನು ದಿಟ್ಟ ರೀತಿಯಲ್ಲಿ ಚೇಸಿಂಗ್ ನಡೆಸಿ ಪಾಕಿಸ್ತಾನ 48.2 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 348 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಈ ಮೂಲಕ ಆಡಿದ ಎರಡು ಪಂದ್ಯಗಳಲ್ಲಿಯೂ ಗೆಲುವು ದಾಖಲಿಸಿ ಅಜೇಯ ಓಟವನ್ನು ಕಾಯ್ದುಕೊಂಡಿದೆ.