ಕರಾಚಿ: ವಿಶ್ವಕಪ್ನಲ್ಲಿ ಭಾರತ ತಂಡ ತೋರುತ್ತಿರುವ ಪ್ರದರ್ಶನದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ವಾಸಿಂ ಅಕ್ರಮ್(Wasim Akram) ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಹಾರ್ದಿಕ್ ಪಾಂಡ್ಯ(hardik pandya) ಅವರು ಭಾನುವಾರ ನಡೆಯುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯದಂತೆ ಸಲಹೆಯೊಂದನ್ನು ನೀಡಿದ್ದಾರೆ.
ಪಾಕಿಕ್ತಾಸದ ಕ್ರೀಡಾ ಸಂದರ್ಶನದಲ್ಲಿ ಮಾತನಾಡಿದ ವಾಸಿಂ ಅಕ್ರಮ್, “ಪಾಂಡ್ಯ ವಿಚಾರದಲ್ಲಿ ಬಿಸಿಸಿಐ ಎಚ್ಚರಿಕೆ ವಹಿಸುವುದು ಅಗತ್ಯ. ಅವರು ತಂಡದಲ್ಲಿ ಇಲ್ಲದಿದ್ದರೂ ಭಾರತ ಬಲಿಷ್ಠವಾಗಿದೆ. ಒಂದು ವೇಳೆ ಪಾಂಡ್ಯ ಫಿಟ್ ಆದರೆ ಅದು ಒಳ್ಳೆಯದೇ. ಆದರೆ ದುಡುಕಿನ ನಿರ್ಧಾರದಿಂದ ಅವರನ್ನು ಮುಂದಿನ ಪಂದ್ಯದಲ್ಲಿ ಆಡಿಸಿದರೆ ಮತ್ತೆ ಗಾಯಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಭಾರತ 5 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಸನಿಹ ಬಂದು ನಿಂತಿದೆ. ಇನ್ನೊಂದು ಪಂದ್ಯ ಗೆದ್ದರೆ ಸೆಮಿಫೈನಲ್ ಪ್ರವೇಶಿಸಲಿದೆ. ಭಾರತಕ್ಕೆ ಇನ್ನೊಂದು ಗೆಲುವು ಕಷ್ಟವಲ್ಲ. ಹೀಗಾಗಿ ಪಾಂಡ್ಯ ಅವರಿಗೆ ಕೆಲ ಪಂದ್ಯಗಳಲ್ಲಿ ವಿಶ್ರಾಂತಿ ನೀಡಿದರೆ ಒಲಿತು” ಎಂದು ಹೇಳಿದ್ದಾರೆ.
ಶಮಿಗೆ ಸ್ಥಾನ ಖಚಿತ
ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಇನ್ನು ತಂಡದಿಂದ ಕೈಬಿಡುವುದು ಕಷ್ಟ. ಏಕೆಂದರೆ ಅವರು ಕಳೆದ ಕಿವೀಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ಹೀಗಾಗಿ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಆಡುವುದು ಖಚಿತ. ಈ ಹಿಂದೆಯೇ ಶಮಿ ಅವರನ್ನು ಆಡಿಸಬೇಕಿತ್ತು. ಏಕೆಂದರೆ ಸಿರಾಜ್, ಬುಮ್ರಾ ಮತ್ತು ಶಮಿ ಮೂವರ ಬೌಲಿಂಗ್ ಕಾಂಬಿನೇಷನ್ ಎದುರು ಯಾವ ತಂಡಕ್ಕೂ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ. ಮುಂದಿನ ಪಂದ್ಯಗಳಲ್ಲಿ ಈ ಮೂವರು ಭಾರತ ತಂಡದಲ್ಲಿ ಕಾಣಿಸುವ ವಿಶ್ವಾಸವಿದೆ” ಎಂದು ವಾಸಿಂ ಅಕ್ರಮ್ ಹೇಳಿದರು.
ಪಾಕ್ ತಂಡವನ್ನು ಲೇವಡಿ ಮಾಡಿದ್ದ ವಾಸಿಂ ಅಕ್ರಮ್
ಪ್ರಸಕ್ತ ಸಾಗುತ್ತಿರುವ ಏಕದಿನ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸೋಲು ಕಂಡು ಟೂರ್ನಿಯಿಂದ ಹೊರಬೀಳುವ ಸ್ಥಿಯಲ್ಲಿರುವ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ವಾಸಿಂ ಅಕ್ರಮ್ ಆಕ್ರೋಶ ವ್ಯಕ್ತಪಡಿಸಿದ್ದರು. ಪಾಕಿಸ್ತಾನ ಸೋಮವಾರ ನಡೆದಿದ್ದ ಪಂದ್ಯದಲ್ಲಿ ದುರ್ಬಲ ಅಫಘಾನಿಸ್ತಾನ ವಿರುದ್ಧ 8 ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು. ಈ ಸೋಲಿನ ಬಳಿಕ ವಾಸಿಂ ಅಕ್ರಮ್ ಅವರು ಬಾಬರ್ ಪಡೆಗೆ ಮೊದಲು ಮಟನ್(8kg of mutton) ತಿನ್ನುವುದನ್ನು ನಿಲ್ಲಿಸಿ, ದೇಶದ ಬಗ್ಗೆ ಚಿಂತಿಸಿ ಎಂದು ಹೇಳುವ ಮೂಲಕ ತಿವಿದಿದ್ದರು.
ಇದನ್ನೂ ಓದಿ Odi Cricket History: ಏಕದಿನ ಕ್ರಿಕೆಟ್ನಲ್ಲಿ ಗೆಲುವಿನ ದಾಖಲೆ ಬರೆದ ಆಸ್ಟ್ರೇಲಿಯಾ
Wasim Akram slamming Lumber 1 Pakistan Cricket Team for their fitness level.
— The Right Wing Guy (@T_R_W_G) October 23, 2023
This is fun to watch 😂😂😂#PAKvsAFG #AfghanAtalan #Babar #CWC2023#irfanpathan #RashidKhan
Chepauk | Protein | Haris Rauf | Shaheen Shah Afridi | Gurbaz | Zimbabwe | Lumber 1 | Ajay Jadeja | Ramiz… pic.twitter.com/vOHUSJjU7E
ಪಾಕಿಸ್ತಾನದ ಕ್ರಿಕೆಟ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ವಾಸಿಂ ಅಕ್ರಮ್, ‘ಅಫ್ಘಾನಿಸ್ತಾನ ವಿರುದ್ಧ ಇದು ಕೆಟ್ಟ ಸೋಲು, ನಿಜಕ್ಕೂ ಇದು ಮುಜುಗರ ತರುವಂತದ್ದು. ಕೇವಲ ಎರಡು ವಿಕೆಟ್ ಕಳೆದುಕೊಂಡು 280 ರನ್ ಗುರಿಯನ್ನು ತಲುಪುವುದು ಸಾಮಾನ್ಯ ವಿಷಯವಲ್ಲ. ಆಟಗಾರರು ಪ್ರತಿದಿನ 8 ಕೆಜಿ ಮಟನ್ ತಿಂದರೆ ಫಿಟ್ನೆಸ್ ಹೇಗೆ ಸಾಧ್ಯ” ಎಂದು ಬಾಬರ್ ಪಡೆಯ ವಿರುದ್ಧ ಅವರು ಕಿಡಿಕಾರಿದ್ದರು.
ಇದನ್ನೂ ಓದಿ AUS vs NED: ದುಬಾರಿ ಮೊತ್ತ ನೀಡಿ ಅನಗತ್ಯ ದಾಖಲೆ ಬರೆದ ಬಾಸ್ ಡಿ ಲೀಡೆ
“ವೃತ್ತಿಪರರಾಗಿ ನೀವು ಪಡೆಯುವ ಹಣಕ್ಕೆ ತಕ್ಕ ಪ್ರದರ್ಶನ ನೀಡುವುದು ಕೂಡ ಪ್ರಮುಖವಾಗಿದೆ. ದೇಶಕ್ಕಾಗಿ ಆಡುವಾಗ ನಿಮ್ಮಲ್ಲಿ ಒಂದು ನಿರ್ದಿಷ್ಟ ಮಾನದಂಡ ಇರಬೇಕು. ಮಿಸ್ಬಾ ಉಲ್ ಹಕ್ ಅವರು ಕೋಚ್ ಆಗಿದ್ದ ವೇಳೆ ಫಿಟ್ನೆಸ್ ಮಾನದಂಡವನ್ನು ಜಾರಿಗೆ ತಂದಿದ್ದರು. ಆದರೆ ಅವರ ವಿರುದ್ಧವೇ ನೀವು ಇಲ್ಲ ಸಲ್ಲದ ಆರೋಪ ಹೊರಿಸಿ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಿದ್ದೀರಿ. ಅವರ ಕಾರ್ಯತಂತ್ರಗಳು ಕೆಲಸ ಮಾಡುತ್ತಿದ್ದವು. ಫೀಲ್ಡಿಂಗ್ ಎನ್ನುವುದು ಫಿಟ್ನೆಸ್‌ಗೆ ಸಂಬಂಧಿಸಿದ್ದು. ನಮ್ಮಲ್ಲಿ ಆ ಕೊರತೆಯಿದೆ” ಎಂದು ಹೇಳಿದ್ದರು.