Site icon Vistara News

ind vs wi : ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ವಾಸಿಂ ಜಾಫರ್ ವಿಶ್ಲೇಷಣೆ

west indies team

ನವ ದೆಹಲಿ: ವೆಸ್ಟ್ ಇಂಡೀಸ್ 2017 ರ ನಂತರ ಮೊದಲ ಬಾರಿಗೆ ಭಾರತದ ವಿರುದ್ಧ ಟಿ20 ಅಂತಾರಾಷ್ಟ್ರೀಯ ಸರಣಿಯನ್ನು ಗೆದ್ದುಕೊಂಡಿತು, ‘ಮೆನ್ ಇನ್ ಬ್ಲೂ ತಂಡವನ್ನು ವಿಂಡೀಸ್​ ಬಳಗ 3-2 ಅಂತರದಿಂದ ಸೋಲಿಸಿತು. ಫ್ಲೋರಿಡಾದ ಲಾಡರ್ ಹಿಲ್​ ನಡೆದ ಐದನೇ ಟ್ವೆಂಟಿ 20 ಪಂದ್ಯದಲ್ಲಿ ರೋವ್ಮನ್ ಪೊವೆಲ್ ಬಳಗವು ತಂಡವು ಎರಡು ಓವರ್​ಗಳು ಬಾಕಿ ಇರುವಾಗಲೇ ಎಂಟು ವಿಕೆಟ್ ಗಳಿಂದ ಜಯಗಳಿಸಿತ್ತು.

ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಮತ್ತು ನಾಯಕತ್ವವು ಕ್ರಿಕೆಟ್ ಪ್ರೇಮಿಗಳು ಆಘಾತವನ್ನುಂಟು ಮಾಡಲು ಪ್ರಾರಂಭಿಸಿದೆ. ನಾಲ್ಕು ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್ ಆಲ್​ರೌಂಡರ್​ 70 ಎಸೆತಗಳಲ್ಲಿ ಕೇವಲ 77 ರನ್ ಗಳಿಸಲು ಯಶಸ್ವಿಯಾದರು. ಹಾರ್ದಿಕ್ ಪಾಂಡ್ಯ ಅವರಂತಹ ಸ್ವಾಭಾವಿಕ ಆಕ್ರಮಣಕಾರಿ ಆಟಗಾರನಿಂದ 110 ಸ್ಟ್ರೈಕ್ ರೇಟ್ ಕಡಿಮೆ ಎನ್ನಲಾಗುತ್ತಿದೆ. ಐದನೇ ಟಿ 20 ಯಲ್ಲಿ ಭಾರತದ ಇನ್ನಿಂಗ್ಸ್ ಸಮಯದಲ್ಲಿಯೂ, 29 ವರ್ಷದ ಆಟಗಾರ ಒಂದು ಹಂತದಲ್ಲಿ 16 ಎಸೆತಗಳಲ್ಲಿ ಕೇವಲ 8 ರನ್​ ಗಳಿಸಿದ್ದರು. ಅಂತಿಮವಾಗಿ 18 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು.

ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಮ್ ಜಾಫರ್ ಅವರು ಪಾಂಡ್ಯ ಅವರ ಆಟವನ್ನು ವಿಶ್ಲೇಷಣೆ ಮಾಡಲು ಮರೆಯಲಿಲ್ಲ. ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ತುಕ್ಕು ಹಿಡಿದಂತೆ ಕಾಣುತ್ತಿದ್ದರು. ಸ್ಕೋರ್ಬೋರ್ಡ್ ಏರಿಸಲು ವಿಫಲರಾದರು. ಇದರಿಂದ ಇನ್ನೊಂದು ತುದಿಯಲ್ಲಿರುವ ಬ್ಯಾಟರ್​ ಮೇಲೆ ಒತ್ತಡ ಹೆಚ್ಚಾಯಿತು ಎಂದು ಮಾಜಿ ಬ್ಯಾಟರ್​ ಹೇಳಿದ್ದಾರೆ. ಬರೋಡಾ ಆಲ್ರೌಂಡರ್ ತಮ್ಮ ಬ್ಯಾಟಿಂಗ್​ ಬಗ್ಗೆಯೂ ಕಾಳಜಿ ವಹಿಸಬೇಕು. ಅದಕ್ಕೆ ಅನುಗುಣವಾಗಿ ಸುಧಾರಿಸಲು ಪ್ರಯತ್ನಿಸಬೇಕು ಎಂದು ಜಾಫರ್ ಒತ್ತಾಯಿಸಿದರು.

ಇದು ಕಳವಳಕಾರಿ ಅಂಶವಾಗಿದೆ. ಅವರ ಬ್ಯಾಟಿಂಗ್​ ತುಕ್ಕು ಹಿಡಿದಂತೆ ಕಾಡುತ್ತಿದೆ. ಹಾರ್ದಿಕ್ ಪಾಂಡ್ಯ ಬಂದು ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿಲ್ಲ. ಇದರರ್ಥ ಸಿಕ್ಸರ್ ಹೊಡೆಯುವುದು ಎಂದಲ್ಲ. ಉತ್ತಮ ಬ್ಯಾಟಿಂಗ್ ಮಾಡುವುದು ಎಂದು. ಸ್ಟ್ರೈಕ್​ ಬದಲಾವಣೆ ಮಾಡುವುದಾಗಿದೆ. 3 ನೇ ಏಕದಿನ ಪಂದ್ಯದಲ್ಲಿ ಅವರು ಗಳಿಸಿದ ಅರ್ಧಶತಕದ ಹೊರತಾಗಿ, ಅವರು ತುಂಬಾ ನಿಧಾನವಾಗಿ ಆಟ ಆರಂಭಿಸಿದರು. ಸ್ಲಾಗ್ ಓವರ್​ಗಳಲ್ಲಿ ನಿಧಾನಗೊಂಡರು. ಈ ಮೂಲಕ ಸ್ವಲ್ಪ ತುಕ್ಕು ಹಿಡಿದಂತೆ ಕಾಣುತ್ತಿದ್ದರು ಎಂದು ವಾಸಿಮ್ ಜಾಫರ್​ ಕ್ರಿಕ್​ ಇನ್ಫೋಗೆ ಹೇಳಿದ್ದಾರೆ.

ಇದನ್ನೂ ಓದಿ : Ind vs wi : ಸರಣಿ ಸೋಲಿನ ಮುಖಭಂಗ ತಡೆಯುವುದೇ ಹಾರ್ದಿಕ್ ಪಾಂಡ್ಯ ಬಳಗ?

ಇದು ನನಗೆ ಕಳವಳಕಾರಿ ಸಂಗತಿ. ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಹೇಗೆ ಬ್ಯಾಟಿಂಗ್ ಮಾಡಿದರು ಎಂಬುದನ್ನು ನೋಡಿದರೆ ಅದು ದೊಡ್ಡ ಕಳವಳವಾಗಿತ್ತು. ಪ್ರತಿ ಬಾರಿಯೂ ಅವನು ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಈ ಸರಣಿಯಲ್ಲಿಯೂ ನಾವು ಅದನ್ನು ನೋಡಬಹುದು. ಬಳಿಕ ವೇಗ ಕಡಿಮೆಯಾಗುತ್ತದೆ. ಸ್ಟ್ರೈಕ್ ರೇಟ್ ಕಡಿಮೆಯಾಗುತ್ತದೆ . ಇದು ಇತರ ಆಟಗಾರರು ಮತ್ತು ಡಗೌಟ್ ಮೇಲೆ ಒತ್ತಡ ಹೇರುತ್ತದೆ, “ಎಂದು ಜಾಫರ್ ಹೇಳಿದರು.

ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಆಡುವ ತಂಡದ ಭಾಗವಾಗಿಲ್ಲದ ಕಾರಣ ಹಾರ್ದಿಕ್ ತಮ್ಮ ಆಟವನ್ನು ಸುಧಾರಿಸಲು ಸಮಯ ಪಡೆದುಕೊಂಡಿದ್ದಾರೆ. ಆಗಸ್ಟ್ 30ರಿಂದ ಆರಂಭವಾಗಲಿರುವ ಅವರು ಕಣಕ್ಕೆ ಇಳಿಯಲಿದ್ದಾರೆ.

Exit mobile version