Site icon Vistara News

Team India | ಮುಂದಿನ ಆವೃತ್ತಿಯ ಐಪಿಎಲ್​ ಪಂದ್ಯಗಳನ್ನು ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಿ! ಹೇಗೆ ಸಾಧ್ಯ?

IPL2023

ಮುಂಬಯಿ : ಐಪಿಎಲ್​ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್​ ಲೀಗ್​. ಹೀಗಾಗಿ ಟಿವಿ ಹಾಗೂ ಲೈವ್​ ಸ್ಟ್ರೀಮಿಂಗ್​ ಮೂಲಕ ಕೋಟ್ಯಂತರ ವೀಕ್ಷಣೆ ಕಾಣುತ್ತದೆ. ಇದೇ ಕಾರಣಕ್ಕೆ ಕಳೆದ ವರ್ಷ ನಡೆದ ನೇರಪ್ರಸಾರದ ಹಕ್ಕುಗಳ ವಿತರಣೆಯಲ್ಲಿ ಬಿಸಿಸಿಐ 48,390 ರೂಪಾಯಿಗಳನ್ನು ಆದಾಯ ಸಂಗ್ರಹ ಮಾಡಿತ್ತು. ಏಳು ವರ್ಷಗಳ ಅವಧಿಗೆ ಟಿವಿ ಹಾಗೂ ಲೈವ್​ ಸ್ಟ್ರೀಮಿಂಗ್​ ಹಕ್ಕುಗಳನ್ನು ವಿತಣೆ ಮಾಡಿತ್ತು. ಅದರಲ್ಲಿ 23575 ಕೋಟಿ ರೂಪಾಯಿಗಳನ್ನು ರಿಲಯನ್ಸ್​ ಒಡೆತನದ ವಯಾಕಾಮ್​18 ಲೈವ್ ಸ್ಟ್ರೀಮಿಂಗ್​ ಹಕ್ಕನ್ನು ಪಡೆಯಲು ವಿನಿಯೋಗ ಮಾಡಿತ್ತು. ಭಾರತದ ಬೃಹತ್​ ಮೊಬೈಲ್​ ನೆಟ್ವರ್ಕ್​ ಸೇವಾದಾರ ಕಂಪನಿಯಾಗಿರುವ ರಿಲಯನ್ಸ್​, ಈ ಬಾರಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಐಪಿಎಲ್​ ಉಚಿತ ವೀಕ್ಷಣೆಯ ಅವಕಾಶವನ್ನು ಕಲ್ಪಿಸಲಿದೆ ಎಂದು ಹೇಳಲಾಗುತ್ತಿದೆ.

ವಯಾಕಾಮ್​ 18 ಸಂಸ್ಥೆಯು ನವೆಂಬರ್​ನಲ್ಲಿ ಕತಾರ್​ನಲ್ಲಿ ನಡೆದ ಫಿಫಾ ವಿಶ್ವ ಕಪ್​ ಅನ್ನು ಜಿಯೊ ಸಿನಿಮಾ ಆ್ಯಪ್​ ಮೂಲಕ ಭಾರತೀಯ ಗ್ರಾಹಕರಿಗೆ ಉಚಿತವಾಗಿ ನೀಡಿತ್ತು. ಈ ಸೇವೆಯ ಮೂಲಕ ಜಿಯೊ ಸಿನಿಮಾ ಸಾಕಷ್ಟು ಜನಪ್ರಿಯತೆ ಪಡೆಯಿತು. ಇದೇ ಮಾದರಿಯಲ್ಲಿ ಮುಂದಿನ ಐಪಿಎಲ್​ ಪಂದ್ಯಗಳನ್ನು ಉಚಿತವಾಗಿ ಪ್ರಸಾರ ಮಾಡಲು ವಯಾಕಾಮ್​ ಕಂಪನಿ ಮುಂದಾಗಿದೆ ಎನ್ನಲಾಗಿದೆ.

ಒಂದು ವೇಳೆ ವರದಿ ಸರಿಯಾಗಿದ್ದರೆ ಐಪಿಎಲ್​ ಪಂದ್ಯಗಳು ಮೊಟ್ಟ ಮೊದಲ ಬಾರಿಗೆ ಉಚಿತವಾಗಿ ಲೈವ್ ಸ್ಟ್ರೀಮಿಂಗ್​ ಆಗಲಿದೆ. ಈ ಮೂಲಕ ತನ್ನ ಪ್ರತಿಸ್ಪರ್ಧಿ ಹಾಗೂ ಟಿವಿ ನೇರ ಪ್ರಸಾರದ ಹಕ್ಕುಗಳನ್ನು ಪಡೆದಿರುವ ಡಿಸ್ನಿ ಹಾಟ್​ ಸ್ಟಾರ್​ಗೆ ಸೆಡ್ಡು ಹೊಡೆಯಲಿದೆ.

ಕಳೆದ ಮೂರು ವರ್ಷ ಕೊರೊನಾ ಕಾರಣಕ್ಕೆ ಐಪಿಎಲ್​ ಕಳೆಗುಂದಿತ್ತು. ಇದೀಗ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ 10 ತಂಡಗಳ ಐಪಿಎಲ್​ ಅದ್ಧೂರಿಯಾಗಿ ನಡೆಯಲಿದೆ. ಇದೇ ವೇಳೆ ಉಚಿತವಾಗಿ ಪಂದ್ಯ ವೀಕ್ಷಣೆಯ ಅವಕಾಶ ಸಿಕ್ಕರೆ ಜನಪ್ರಿಯತೆಯ ಮಟ್ಟ ಇನ್ನೂ ಹೆಚ್ಚಾಗಲಿದೆ.

ಇದನ್ನೂ ಓದಿ | Rishabh Pant | 16ನೇ ಆವೃತ್ತಿಯ ಐಪಿಎಲ್​ನಿಂದ ರಿಷಭ್​ ಪಂತ್​ ಔಟ್​; ಖಚಿತಪಡಿಸಿದ ಡೆಲ್ಲಿ ಕ್ಯಾಪಿಟಲ್ಸ್‌!

Exit mobile version