Site icon Vistara News

Indian Railway : ವಯನಾಡು ರೈಲ್ವೇ ಜಂಕ್ಷನ್​​ಗೆ ಭಾರತ ತಂಡದ ಆಟಗಾರ್ತಿ ಮಿನ್ನು ಮಣಿ ಹೆಸರು

Minnu Mani

ವಯನಾಡ್ (ಕೇರಳ) : ಭಾರತ ಮಹಿಳೆಯರ ತಂಡಕ್ಕೆ ಇತ್ತೀಚೆಗೆ ಪದಾರ್ಪಣೆ ಮಾಡಿರುವ ಕೇರಳದ ಯುವ ಕ್ರಿಕೆಟರ್​ ಮಿನ್ನು ಮಣಿ ಅವರ ಹೆಸರನ್ನು ವಯನಾಡ್ ಜಿಲ್ಲೆಯ ಮಾನಂಥವಾಡಿ ಪುರಸಭೆಯು ರೈಲ್ವೆ ಜಂಕ್ಷನ್​ಗೆ (Indian Railway) ಮರುನಾಮಕರಣ ಮಾಡಲಾಗಿದೆ. ಹೀಗಾಗಿ ಮೈಸೂರು ರೋಡ್​​ ಜಂಕ್ಷನ್ ಅನ್ನು ಇನ್ನು ಮುಂದೆ ‘ಮಿನ್ನು ಮಣಿ ಜಂಕ್ಷನ್’ ಎಂದು ಕರೆಯಲಾಗುತ್ತದೆ. ಮಾನಂತವಾಡಿಯಲ್ಲಿರುವ ತಮ್ಮ ಮನೆಗೆ ರಸ್ತೆಯೇ ಇಲ್ಲದಿದ್ದರೂ, ತನ್ನ ಊರಿನ ಜನರು ಪ್ರಮುಖ ಜಂಕ್ಷನ್​ಗೆ ಹೆಸರನ್ನು ಇಟ್ಟಿರುವುದಕ್ಕೆ 24 ವರ್ಷದ ಕ್ರಿಕೆಟರ್​ ಸಂತೋಷಪಟ್ಟಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಟಿ 20 ಐ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಮಣಿ ತಮ್ಮೂರಿನ ಜನರಿಗೆ ಋಣಿ ಎಂದು ಹೇಳಿದ್ದಾರೆ. ಇದು ಅನಿರೀಕ್ಷಿತ ಎಂದೂ ಹೇಳಿದ್ದಾರೆ. ಈ ಆಫ್-ಸ್ಪಿನ್ನರ್ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿಯನ್ನು 2-1 ರಿಂದ ಗೆಲ್ಲಲು ಭಾರತಕ್ಕೆ ಸಹಾಯ ಮಾಡಿದ್ದರು.

ಇದು ಅನಿರೀಕ್ಷಿತ ಮತ್ತು ನಾನು ತುಂಬಾ ಖುಷಿಯಲ್ಲಿದ್ದೇ ಎಂದು ಮಿನ್ನು ಮಣಿ ಒನ್​ಮನೋರಮಾಗೆ ತಿಳಿಸಿದ್ದಾರೆ.

ಕ್ರಿಕೆಟ್​ ಆಟಗಾರ್ತಿಯನ್ನು ಗೌರವಿಸಲು ನಡೆದ ಸಭೆಯಲ್ಲಿ, ಪ್ರಮುಖ ನಾಯಕರು ಮಿನ್ನುಮಣಿಯ ಮನೆಗೆ ರಸ್ತೆಯನ್ನು ನಿರ್ಮಿಸುವ ಭರವಸೆ ನೀಡಿದರು. ಪುರಸಭೆಯ ರಸ್ತೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಮಣಿ ಅವರ ಮನೆಗೆ ರಸ್ತೆ ನಿರ್ಮಿಸಲು ಚರ್ಚೆ ನಡೆಯುತ್ತಿದೆ ಎಂದು ಮನಂತವಾಡಿ ಶಾಸಕ ಒ.ಆರ್. ಕೇಲು ಹೇಳಿದ್ದಾರೆ . ಕುಟುಂಬವು ಬೇರೆ ಯಾವುದೇ ಆದಾಯದ ಮೂಲಗಳಿಲ್ಲದ ಕಾರಣ ಸ್ವಂತವಾಗಿ ರಸ್ತೆಯನ್ನು ನಿರ್ಮಿಸಲು ಸಾಧ್ಯವಿಲ್ಲ.

ಇದನ್ನೂ ಓದಿ : Baby Shower : ಭಾರತೀಯ ಸಂಪ್ರದಾಯದಂತೆ ನಡೆದ ಆಸೀಸ್​ ಕ್ರಿಕೆಟಿಗ ಗ್ಲೆನ್​ ಮ್ಯಾಕ್ಸ್​ವೆಲ್​ ಪತ್ನಿಯ ಸೀಮಂತ

ಭಾರತ ಕ್ರಿಕೆಟ್​ ಆಟಗಾರ್ತಿಯ ಮನೆಗೆ ಶೀಘ್ರದಲ್ಲೇ ರಸ್ತೆ ನಿರ್ಮಾಣವಾಗಲಿದೆ. ಜುಲೈ 14 ರಂದು ನಡೆದ ಮಾನಂತವಾಡಿ ಪುರಸಭೆಯ ಸಭೆಯಲ್ಲಿ ಪುರಸಭೆಯ ‘ಮೈಸೂರು ರಸ್ತೆ ಜಂಕ್ಷನ್’ ಅನ್ನು ‘ಮಿನ್ನು ಮಣಿ ಜಂಕ್ಷನ್’ ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಯಿತು ಎಂದು ಶಾಸಕ ಕೇಲು ಹೇಳಿದ್ದಾರೆ. ಮಾನಂತವಾಡಿ ಪುರಸಭೆಯ ಅಧ್ಯಕ್ಷ ಸಿ.ಕೆ.ರತ್ನವಲ್ಲಿ ಮಾತನಾಡಿ, ಮಿನ್ನು ಅವರನ್ನು ಗೌರವಿಸಲು ಹಲವಾರು ಆಲೋಚನೆಗಳ ನಂತರ ಪುರಸಭೆಯು ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಮಿನ್ನು ಮನ್ನಿ ಜುಲೈ 09ರಂದು ಮೀರ್​ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಅಂತಾರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಅವರು ಶಮೀಮಾ ಸುಲ್ತಾನಾ ಅವರನ್ನು ಔಟ್ ಮಾಡಿ ಟಿ 20 ಪಂದ್ಯಗಳಲ್ಲಿ ತಮ್ಮ ಮೊದಲ ವಿಕೆಟ್ ಪಡೆದಿದ್ದರು. ಉಳಿದ ಎರಡು ಪಂದ್ಯಗಳಲ್ಲಿ ಅವರು 2/9 (4 ಓವರ್​ಗಳು ) ಮತ್ತು 2/28 (4 ಓವರ್​ಗಳು) ಪಡೆದರು. ಈ ಮೂಲಕ ಸರಣಿಯ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದವರು ಎಂದು ಎನಿಸಿಕೊಂಡರು. ಆಫ್-ಸ್ಪಿನ್ನರ್ ಮೂರು ಪಂದ್ಯಗಳಲ್ಲಿ 11.60 ಸರಾಸರಿಯಲ್ಲಿ ಐದು ವಿಕೆಟ್​ಗಳನ್ನು ಉರುಳಿಸಿದ್ದಾರೆ. ಸರಣಿಯಲ್ಲಿ 5.27 ಎಕಾನಮಿ ಹೊಂದಿದ್ದರು.

Exit mobile version