ಲಂಡನ್: ನಾವೇನು ಯಂತ್ರಗಳೇ? ಒಂದಿಷ್ಟೂ ಬಿಡುವು ಕೊಡದೇ ಸರಣಿಗಳನ್ನು ಆಯೋಜಿಸಿದರೆ ಆಡುವುದಾದರೂ ಹೇಗೆ? ಹೀಗೆಂದು ಮಿತಿಮೀರಿದ ಸರಣಿಗಳ ಆಯೋಜನೆ ಬಗ್ಗೆ ಸಿಡಿದೆದ್ದವರು ಇಂಗ್ಲೆಂಡ್ (England) ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್.
ಮೂರು ದಿನಗಳ ಹಿಂದೆ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡಕ್ಕೆ ವಿದಾಯ ಹೇಳಿದ್ದರು. ಅದಕ್ಕೆ ಯಾವ ಕಾರಣವೂ ನೀಡಿರಲಿಲ್ಲ. ಆದರೆ, ಎಲ್ಲ ಮಾದರಿಯಲ್ಲೂ ಆಡುವುದು ಕಷ್ಟ ಎಂದಷ್ಟೇ ಹೇಳಿದ್ದರು. ಇದೀಗ ಅದಕ್ಕೆ ಅಸಲಿ ಕಾರಣ ಗೊತ್ತಾಗಿದೆ. ಕ್ರಿಕೆಟ್ ಮಂಡಳಿಗಳು ಮಿತಿ ಮೀರಿತ ಸರಣಿಗಳನ್ನು ಅಯೋಜಿಸುತ್ತಿರುವುದೇ ಅವರ ಅಸಮಾಧಾನಕ್ಕೆ ಕಾರಣ ಎಂಬುದಾಗಿ ಗೊತ್ತಾಗಿದೆ.
ಬೆನ್ಸ್ಟೋಕ್ಸ್ ಅವರು ಭಾರತ ತಂಡ ಇಂಗ್ಲೆಂಡ್ ಪ್ರವಾಸ ಹೋಗುವ ಮೊದಲು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಆ ಸರಣಿಯಲ್ಲಿ ಅವರು ತಂಡದ ನಾಯಕರಾಗಿದ್ದರು. ಅದು ಮುಗಿದ ತಕ್ಷಣ ಅವರು ಭಾರತ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಬಳಿಕ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದರು. ಎರಡೇ ದಿನದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಂಡಿತ್ತು. ಭಾರತ ವಿರುದ್ಧದ ಸರಣಿ ಮುಗಿದ ತಕ್ಷಣ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಬೇಕಾಗಿತ್ತು. ಆದರೆ, ಒಂದೇ ಪಂದ್ಯದಲ್ಲಿ ಅಡಿ ವಿದಾಯ ಘೋಷಿಸಿದ್ದಾರೆ. ಅದಕ್ಕೆ ವಿಶ್ರಾಂತಿಯೇ ಇಲ್ಲದಿರುವುದು ಕಾರಣ ಎಂಬುದು ಅವರ ಹೇಳಿಕೆಯಿಂದ ಗೊತ್ತಾಗಿದೆ.ೠ
ನಾವೇನು ಕಾರುಗಳೇ?
ಇಷ್ಟೊಂದು ಸರಣಿಗಳು ಹಾಗೂ ಪಂದ್ಯಗಳನ್ನು ಆಯೋಜಿಸಿದರೆ ಹೇಗೆ? ನಾವೇನು ಕಾರುಗಳೇ? ಹೀಗೆಂದು ಪ್ರಶ್ನಿಸಿದ್ದಾರೆ 31 ವರ್ಷದ ಬೆನ್ ಸ್ಟೋಕ್ಸ್.
ಒಂದು ಕಡೆ ಟೆಸ್ಟ್ ಸರಣಿ ನಡೆಯುತ್ತಿರುತ್ತದೆ. ಇನ್ನೊಂದು ಕಡೆ ಏಕ ದಿನ ಸರಣಿಯ ಪಂದ್ಯಗಳಿಗೆ ಸಿದ್ಧತೆ ನಡೆಸುತ್ತಿರುತ್ತಾರೆ. ಇದೊಂದು ಅತ್ಯಂತ ಬಾಲಿಶ ಸಂಗತಿಯಾಗಿದೆ.
ಮೂರು ಮಾದರಿಯಲ್ಲಿ ಆಡುವ ಆಟಗಾರರಿಗೆ ಇದೊಂದು ದೊಡ್ಡ ಸಮಸ್ಯೆಯಾಗುತ್ತದೆ. ಇದರಿಂದ ಒಂದೊಂದು ಮಾದರಿಗೆ ಒಗ್ಗಿಕೊಳ್ಳುವುದಕ್ಕೂ ಸಮಸ್ಯೆ ಎದುರಾಗುತ್ತದೆ ಎಂದು ಅವರು ಹೇಳಿದ್ದಾರೆ.
ನಾನು ಎಲ್ಲ ಮಾದರಿಯಲ್ಲಿ ಆಡಲು ಬಯಸುವೆ. ಅದರೆ, ತಿರುಗಿ ನೋಡಿದರೆ ಬಿಡುವೇ ಇಲ್ಲದ ಸರಣಿಗಳು ತುಂಬಿರುತ್ತವೆ. ಅದನ್ನು ಸಹಿಸಿಕೊಳ್ಳುವುದು ಕಷ್ಟ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | ODI CRICKET | ಏಕದಿನ ಮಾದರಿಗೆ ವಿದಾಯ ಹೇಳಿದ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್