ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ ಇಂಗ್ಲೆಂಡ್‌ನ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪರಸ್ಪರ sledging ಮಾಡಿದ್ದರು. ಆದರೆ, ಈ ವಿಷಯವನ್ನು ಆತಿಥೇಯ ತಂಡದ ಆಟಗಾರ “ಸಣ್ಣ ವಿಷಯವಷ್ಟೇʼ ಎಂದು ಹೇಳಿದ್ದಾರೆ.
ಮೂರನೇ ದಿನದ ಬೆಳಗಿನ ಅವಧಿಯಲ್ಲಿ ಬೈರ್‌ಸ್ಟೋವ್ ಬ್ಯಾಟಿಂಗ್ ಮಾಡಲು ತಿಣುಕಾಡಿದ್ದರು. ೬೧ ಎಸೆತಗಳಲ್ಲಿ ೧೩ ರನ್ ಮಾತ್ರ ಬಾರಿಸಿದ್ದರು ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಬೈರ್‌ಸ್ಟೋವ್ ಅವರನ್ನು ಕೆಣಕಿದ್ದರು. ಆ ಮೇಲೆ ರೊಚ್ಚಿಗೆದ್ದು ಬ್ಯಾಟ್ ಮಾಡಿದ ಜಾನಿ ೧೪೦ ಎಸೆತಗಳಲ್ಲಿ ೧೦೬ ರನ್ ಬಾರಿಸಿದ್ದರು. ಅವರ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಸ್ವಲ್ಪ ಮಟ್ಟಿನ ಪ್ರತಿರೋಧ ಒಡ್ಡಿತು.
ನಮ್ಮೊಳಗೆ ಏನೂ ಇಲ್ಲ
ಕೊಹ್ಲಿ ಕೆಣಕಿದ ಕಾರಣದಿಂದಲೇ ಜಾನಿ ಬೈರ್‌ಸ್ಟೋವ್ ಶತಕ ಬಾರಿಸಿದ್ದಾರೆ ಎಂಬುದಾಗಿ ಕ್ರಿಕೆಟ್ ಲೋಕ ಮಾತನಾಡುತ್ತಿದೆ. ಆದರೆ, ಬೈರ್‌ಸ್ಟೋವ್ ಇದೊಂದು ಸಮಸ್ಯೆಯೇ ಅಲ್ಲ ಎಂದು ಹೇಳಿದ್ದಾರೆ. “ನಾವಿಬ್ಬರು ಪರಸ್ಪರ ವಿರುದ್ಧ ತಂಡಗಳಲ್ಲಿ ಕನಿಷ್ಠ ೧೦ ವರ್ಷಗಳಿಂದ ಆಡುತ್ತಿದ್ದೇವೆ. ಅಂತೆಯೇ ನಾವು ಟೆಸ್ಟ್ ಕ್ರಿಕೆಟ್ ಆಡುತ್ತಿರುವುದರಿಂದ ಪ್ರತಿಸ್ಪರ್ಧಿಗಳೆಂದು ಭಾವಿಸುತ್ತೇವೆ. ನಾವು ನಮ್ಮ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಲು ಯತ್ನಿಸುತ್ತಿರುತ್ತೇವೆ. ತಂಡಕ್ಕಾಗಿ ಆಡುವಾಗ ನಡೆಯುವ ಎಲ್ಲ ಘಟನೆಗಳು ಆಟದ ಭಾಗವೆಂದೇ ಅಂದುಕೊಳ್ಳುತ್ತೇನೆ,ʼʼ ಎಂದು ಬೈರ್‌ಸ್ಟೋವ್ ಹೇಳಿದ್ದಾರೆ.
ಇದನ್ನೂ ಓದಿ: England Tour: ಆಂಗ್ಲರ ಮೇಲೆ ಭಾರತ ತಂಡದ ಸವಾರಿ