Site icon Vistara News

Wrestlers Protest: ಟ್ರಯಲ್ಸ್​ನಿಂದ ಯಾವುದೇ ರಿಯಾಯಿತಿ ಪಡೆದಿಲ್ಲ; ಕುಸ್ತಿಪಟುಗಳ ಸ್ಪಷ್ಟನೆ

Wrestling Representational Image

ನವದೆಹಲಿ: ಏಷ್ಯನ್​ ಗೇಮ್ಸ್(Asian Games)​ ಮತ್ತು ವಿಶ್ವ ಚಾಂಪಿಯನ್​ಶಿಪ್​ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಸಲುವಾಗಿ ಬ್ರಿಜ್​ ಭೂಷಣ್​ ವಿರುದ್ಧ ಪ್ರತಿಭಟನೆ(Wrestlers Protest) ನಡೆಸಿದ್ದ 6 ಕುಸ್ತಿಪಟುಗಳಿಗೆ ಟ್ರಯಲ್ಸ್‌ನಿಂದ ರಿಯಾಯಿತಿ ನೀಡಿರುವ ಕ್ರಮಕ್ಕೆ ಹಲವು ಕುಸ್ತಿಪಟುಗಳು ವಿರೋಧ ವ್ಯಕ್ತಪಡಿಸಿದ್ದರು. ಜತೆಗೆ ಒಲಿಂಪಿಕ್ ಸಂಸ್ಥೆಯ (ಐಒಎ) ಈ ನಿರ್ಧಾರವನ್ನು ಪಶ್ನೆ ಮಾಡಿದ್ದರು. ಈ ಎಲ್ಲ ಅನುಮಾನಗಳಿಗೆ ಕುಸ್ತಿಪಟುಗಳು ಸ್ಪಷ್ಟನೆ ನೀಡಿದ್ದು ತಾವು ಟ್ರಯಲ್ಸ್​ನಿಂದ ರಿಯಾಯಿತಿ ನೀಡಲು ಕೇಳಿದ್ದೇ ಆದರೆ ಕುಸ್ತಿಯನ್ನು ತೊರೆಯುವುದಾಗಿ ಹೇಳಿದ್ದಾರೆ.

ಟ್ರಯಲ್ಸ್​ ವಿಚಾರದಲ್ಲಿ ಮಾತನಾಡಿದ್ದ ಲಂಡನ್​ ಒಲಿಂಪಿಕ್ಸ್​ ಪದಕ ವಿಜೇತ ಯೋಗೇಶ್ವರ್ ದತ್(Yogeshwar Dutt)​ ವಿರುದ್ಧ ವಿನೇಶ್​ ಫೋಗಟ್(Vinesh Phogat)​​ ಟ್ವಿಟರ್​ನಲ್ಲಿ ದೊಡ್ಡ ಪ್ರಬಂಧವನ್ನೇ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು.​ ಯೋಗೇಶ್ವರ್​ ಅವರನ್ನು ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರ ಗುಲಾಮ ಎಂದು ಹೇಳಿದ್ದರು​. ಜತೆಗೆ ಬಜರಂಗ್​ ಪೂನಿಯಾ(Bajrang Punia) ಮತ್ತು ಸಾಕ್ಷಿ ಮಲಿಕ್​ ಕೂಡ ವಿನೇಶ್​ ಅವರ ಬೆಂಬಲಕ್ಕೆ ನಿಂತಿದ್ದರು.

ಈ ಘಟನೆಯ ವಿಚಾರದಲ್ಲಿ ನಡೆಯುತ್ತಿದ್ದ ಚರ್ಚೆಗಳಿಗೆ ಮತ್ತು ಅನುಮಾನಗಳಿಗೆ ಸಾಕ್ಷಿ ಮಲಿಕ್(Sakshi Malik)​ ಸೇರಿ 6 ಮಂದಿ ಕುಸ್ತಿ ಪಟುಗಳು ಸ್ಪಷ್ಟನೆ ನೀಡಿದ್ದು, ‘ಟ್ರಯಲ್ಸ್‌ನಿಂದ ರಿಯಾಯಿತಿ ನೀಡುವಂತೆ ನಾವೇನೂ ಕೇಳಿರಲಿಲ್ಲ. ಸಿದ್ಧತೆಗೆ ಸಮಯ ಕೇಳಿದ್ದೆವಷ್ಟೇ. ನಿಮಗೆ ಯಾವುದೇ ಅನುಮಾನಗಳಿದ್ದರೆ ಕ್ರೀಡಾ ಸಚಿವರ ಬಳಿ ಹೋಗಿ ವಿಚಾರಿಸಿ. ಇದು ಬಿಟ್ಟು ಯಾವುದೇ ಮಾಗಿಹಿ ಇಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡುವ ಮೂಲಕ ನಮ್ಮ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡಬೇಡಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ Vinesh Phogat: ಯೋಗೇಶ್ವರ್​ ದತ್‌ ಒಬ್ಬ ಗುಲಾಮ; ವಿನೇಶ್​ ಫೋಗಟ್‌ ಟೀಕೆ

“ಒಂದೊಮ್ಮೆ ನಾವು ಟ್ರಯಲ್ಸ್​ನಿಂದ ಯಾವುದೇ ರೀತಿಯ ರಿಯಾಯಿತಿ ಪಡೆದಿದ್ದರೆ ಮತ್ತು ಇದನ್ನು ಸಾಬೀತುಪಡಿಸಿದಲ್ಲಿ ಕುಸ್ತಿಯನ್ನೇ ಬಿಟ್ಟುಬಿಡುತ್ತೆವೆ’ ಎಂದಿದ್ದಾರೆ. ಬಿಜೆಪಿ ಸಂಸದ ಮತ್ತು ಡಬ್ಲ್ಯಎಫ್‌ಐ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರಿಗೆ ಶಿಕ್ಷೆಯಾಗುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ. ಆರೋಪ ಪಟ್ಟಿ ಸಲ್ಲಿಸುವುದನ್ನೇ ಕಾಯುತ್ತಿದ್ದೇವೆ ಎಂದು ವಿನೇಶ್​ ಫೋಗಟ್ ಹೇಳಿದ್ದಾರೆ. ಸದ್ಯ ಬ್ರಿಜ್​ ಭೂಷಣ್​ ವಿರುದ್ಧ ತೊಡೆ ತಟ್ಟಿ ಜಂತರ್​ ಮಂತರ್​ನಲ್ಲಿ ಹೋರಾಟ ನಡೆಸಿದ್ದ 6 ಕುಸ್ತಿಪಟುಗಳು ದೆಹಲಿಯ ಸಾಯ್​ ಕ್ರೀಡಾ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

Exit mobile version