Site icon Vistara News

INDvsBAN | ತಿರುಗೇಟು ನೀಡುವುದು ಹೇಗೆಂದು ನಮಗೆ ಗೊತ್ತು; ಬಾಂಗ್ಲಾ ಹುಲಿಗಳಿಗೆ ಎಚ್ಚರಿಕೆ ಕೊಟ್ಟ ಧವನ್‌

Indvsban

ಮೀರ್‌ಪುರ : ಆತಿಥೇಯ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ (INDvsBAN) ಮೊದಲ ಪಂದ್ಯದಲ್ಲಿ ರೋಹಿತ್‌ ಶರ್ಮ ನೇತೃತ್ವದ ಭಾರತ ತಂಡ ಸೋಲು ಕಂಡಿದೆ. ಇದರೊಂದಿಗೆ ಮೂರು ಹಣಾಹಣಿಗಳ ಸರಣಿಯಲ್ಲಿ ೦-೧ ಹಿನ್ನಡೆಗೆ ಒಳಗಾಗಿದೆ. ಹೀಗಾಗಿ ಬುಧವಾರದ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾಗಿದ್ದು, ಇಲ್ಲದಿದ್ದರೆ ಸರಣಿಯಲ್ಲಿ ಸೋಲು ಅನುಭವಿಸಬೇಕಾಗುತ್ತದೆ. ಆದರೆ, ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್‌ ಶಿಖರ್‌ ಧವರ್ ನಾಳೆಯ ಪಂದ್ಯದಲ್ಲಿ ಭಾರತವೇ ಗೆಲ್ಲುವುದು ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆತಿಥೇಯ ತಂಡಕ್ಕೆ ಪ್ರತ್ಯುತ್ತರ ಕೊಡುವುದು ಹೇಗೆ ಎಂದು ಗೊತ್ತಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಮಂಗಳವಾರದ ಅಭ್ಯಾಸ ಮುಗಿಸಿದ ಬಳಿಕ ಮಾತನಾಡಿದ ಶಿಖರ್‌ ಧವನ್‌ “ಸರಣಿಯೊಂದರ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸುತ್ತಿರುವುದು ಇದೇ ಮೊದಲು ಏನಲ್ಲ. ಹೀಗಾಗಿ ಮುಂದಿನ ಪಂದ್ಯದಲ್ಲಿ ತಿರುಗೇಟು ಹೇಗೆ ಕೊಡಬೇಕು ಎಂಬುದು ನಮಗೆ ಗೊತ್ತಿದೆ. ಅಂತೆಯೇ ಬಾಂಗ್ಲಾದೇಶ ತಂಡ ವಿರುದ್ಧವೂ ಜಯ ಸಾಧಿಸುತ್ತೇವೆ,” ಎಂದು ಹೇಳಿದ್ದಾರೆ.

“ನಾವು ಎಲ್ಲೆಲ್ಲ ಸುಧಾರಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ವಿಶ್ಲೇಷಣೆ ಮಾಡಿದ್ದೇವೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಆಡಬಲ್ಲೆವು. ನಾವು ನಮ್ಮ ಪ್ರದರ್ಶನದ ಮೇಲೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದೇವೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ,” ಎಂದು ಹೇಳಿದರು.

ಇದನ್ನೂ ಓದಿ | IND VS BAN | ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಏಕದಿನ ಪಂದ್ಯದ ಪಿಚ್​ ರಿಪೋರ್ಟ್​ ಹೇಗಿದೆ?

Exit mobile version