ಸೇಂಟ್ ಕಿಟ್ಸ್: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ೨೦ ಪಂದ್ಯದಲ್ಲಿ (IND vs WI T20) ಟಾಸ್ ಜಯಿಸಿರುವ ವೆಸ್ಟ್ ಇಂಡೀಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ರಾತ್ರಿ ೮ ಗಂಟೆಗೆ ಆರಂಭವಾಗಬೇಕಾಗಿದ್ದ ಈ ಪಂದ್ಯ ಭಾರತ ತಂಡದ ಲಗೇಜ್ ತಡವಾಗಿ ಬಂದಿರುವ ಕಾರಣ ೩ ಗಂಟೆ ವಿಳಂಬಗೊಂಡಿತು.
ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಸ್ಪಿನ್ನರ್ ರವಿ ಬಿಷ್ಣೋಯಿ ಬದಲಿಗೆ ವೇಗಿ ಆವೇಶ್ ಖಾನ್‌ಗೆ ಅವಕಾಶ ನೀಡಲಾಗಿದೆ. ಪಿಚ್ ವೇಗಿಗಳಿಗೆ ನೆರವು ನೀಡಲಿರುವ ಕಾರಣ ಈ ಬದಲಾವಣೆ ಮಾಡಲಾಗಿದೆ.
ಭಾರತ ಆಡುವ ೧೧ರ ಬಳಗ : ರೋಹಿತ್ ಶರ್ಮ (ನಾಯಕ), ರಿಷಭ್ ಪಂತ್ (ವಿಕೆಟ್‌ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಆವೇಶ್ ಖಾನ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್.
ಪಂದ್ಯದ ವಿವರ
ಪಂದ್ಯ ನಡೆಯುವ ಸ್ಥಳ : ವಾರ್ನರ್‌ಪಾರ್ಕ್ ಸ್ಟೇಡಿಯಮ್, ಸೇಂಟ್ ಕಿಟ್ಸ್
ಪಂದ್ಯ ಆರಂಭದ ಸಮಯ: ರಾತ್ರಿ ೧೧ ಗಂಟೆಗೆ (ಭಾರತೀಯ ಕಾಲಮಾನ ಪ್ರಕಾರ)
ನೇರ ಪ್ರಸಾರ ಎಲ್ಲಿ: fancode ಆಪ್‌ನಲ್ಲಿ ಪಂದ್ಯದ ಸ್ಟ್ರೀಮಿಂಗ್ ಲಭ್ಯವಿದೆ. ಡಿಡಿಯಲ್ಲೂ ನೇರ ಪ್ರಸಾರ ವೀಕ್ಷಣೆ ಮಾಡಬಹುದು.