ಕಿಂಗ್ಸ್ಟನ್: ಪ್ರವಾಸಿ ಭಾರತ ತಂಡದ (Windies Tour) ವಿರುದ್ಧದ ಏಕದಿನ ಸರಣಿಗೆ ಆತಿಥೇಯ ವೆಸ್ಟ್ ಇಂಡೀಸ್ ತಂಡ ಸೋಮವಾರ ಪ್ರಕಟಿಸಲಾಗಿದೆ. ವಿಕೆಟ್ಕೀಪರ್ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ ನಾಯಕತ್ವದಲ್ಲಿ 13 ಆಟಗಾರರು ಆಯ್ಕೆಯಾಗಿದ್ದು, ಮೂವರು ಮೀಸಲು ಆಟಗಾರರನ್ನೂ ಹೆಸರಿಸಲಾಗಿದೆ.
ಶಾಯ್ ಹೋಪ್ ಉಪನಾಯಕನ ಸ್ಥಾನ ವಹಿಸಿದ್ದು, ಅನುಭವಿ ಆಲ್ರೌಂಡರ್ ಜೇಸನ್ ಹೋಲ್ಡರ್ ಅವರು ತಂಡಕ್ಕೆ ಮರಳಿದಿದ್ದಾರೆ. ಬಾಂಗ್ಲಾದೇಶ ಪ್ರವಾಸ ಮಾಡಿದ್ದ ವೆಸ್ಟ್ ಇಂಡೀಸ್ ತಂಡ 3-0 ಅಂತರದಿಂದ ಸರಣಿಯಲ್ಲಿ ಸೋಲು ಕಂಡಿತ್ತು. ಹೀಗಾರಿ ಭಾರತದ ವಿರುದ್ಧ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಪ್ರದರ್ಶನ ವೈಫಲ್ಯ ಎದುರಿಸುತ್ತಿರುವ ಆಂಡರ್ಸನ್ ಫಿಲಿಪ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ರೋವ್ಮನ್ ಪೊವೆಲ್ಗೆ ಅವಕಾಶ ನೀಡಲಾಗಿದೆ.
ಭಾರತದಲ್ಲೂ ಹಲವರ ಅನುಪಸ್ಥಿತಿ
ಪ್ರವಾಸಿ ಭಾರತ ತಂಡದಲ್ಲೂ ಅನುಭವಿ ಆಟಗಾರರು ಇರುವುದಿಲ್ಲ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಕೊನೇ ಪಂದ್ಯ ಹೀರೊ ರಿಷಭ್ ಪಂತ್, ವೇಗಿ ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ಕಲ್ಪಿಸಲಾಗಿದೆ. ಶಿಖರ್ ಧವನ್ ಭಾರತ ತಂಡದ ನೇತೃತ್ವ ವಹಿಸಿದ್ದು, ಸರಣಿ ಗೆಲುವಿನ ಚಿಂತನೆಯಲ್ಲಿದ್ದಾರೆ.
ಯಾವಾಗ ಸರಣಿ ಆರಂಭ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಜುಲೈ 22, 24 ಹಾಗೂ 27ರಂದು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಜುಲೈ 29ರಿಂದ ಆಗಸ್ಟ್ 7ರವರೆಗೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಗೊಂಡಿದೆ.
ವೆಸ್ಟ್ ಇಂಡೀಸ್ ತಂಡ
ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಕೆಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೇಲ್ಹೊಸೈನ್, ಶಮ್ರಾ ಬ್ರೂಕ್ಸ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಕೇಶ್ ಮೋತಿ, ಕೀಮೋ ಪಾಲ್, ರೋವ್ಮನ್ ಪೊವೆಲ್ ಮತ್ತು ಜೇಡನ್ ಸೀಲ್ಸ್.
ಮೀಸಲು ಆಟಗಾರರು
ರೊಮಾರಿಯೊ ಶೆಫರ್ಡ್, ಹೇಡನ್ ವಾಲ್ಷ್ ಜೂನಿಯರ್.
ಭಾರತ ಏಕದಿನ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ (ಉಪನಾಯಕ), ಶಾರ್ದುಲ್ ಠಾಕೂರ್, ಯಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಇದನ್ನೂ ಓದಿ | ಅಭ್ಯಾಸ ಆರಂಭಿಸಿದ K L Rahul, ವಿಂಡೀಸ್ ಪ್ರವಾಸಕ್ಕೆ ಆರಂಭಿಕ ಬ್ಯಾಟರ್‌ಗಳ ಚಿಂತೆ ದೂರ