ಬಾರ್ಬಡಾಸ್: ಭಾರತ(IND vs WI t20) ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ 15 ಸದಸ್ಯರ ವೆಸ್ಟ್ ಇಂಡೀಸ್ ತಂಡ(West Indies T20 Squad) ಪ್ರಕಟಗೊಂಡಿದೆ. ಆಕ್ರಮಣಕಾರಿ ಆಟಗಾರ ನಿಕೋಲಸ್ ಪೂರನ್(Nicholas Pooran) ತಂಡಕ್ಕೆ ಮರಳಿದ್ದಾರೆ. ಇವರ ಜತೆ ಶಿಮ್ರಾನ್ ಹೆಟ್ಮೇರ್ ಕೂಡ ಸ್ಥಾನ ಪಡೆದಿದ್ದಾರೆ. 5 ಟಿ20 ಪಂದ್ಯಗಳ ಸರಣಿಯಲ್ಲಿ ಮೂರು ಪಂದ್ಯ ವಿಂಡೀಸ್ನಲ್ಲಿ ನಡೆದರೆ, ಅಂತಿಮ 2 ಪಂದ್ಯಗಳು ಅಮೆರಿಕದಲ್ಲಿ ಆಡಲಾಗುವುದು. ಮೊದಲ ಟಿ20 ಪಂದ್ಯ ಆಗಸ್ಟ್ 3ಕ್ಕೆ ನಡೆಯಲಿದೆ.
ರೋವ್ಮನ್ ಪೊವೆಲ್ ತಂಡದ ನಾಯಕನಾಗಿದ್ದು ಕೈಲ್ ಮೇಯರ್ಸ್ ಉಪನಾಯಕನಾಗಿದ್ದಾರೆ. ಏಕದಿನದಲ್ಲಿ ತಂಡ ಮುನ್ನಡೆಸಿ ಶೈಯ್ ಹೋಪ್ ಮತ್ತು ವೇಗಿ ಒಶಾನೆ ಥಾಮಸ್ ಅವರು ಬಹು ದಿನಗಳ ಬಳಿಕ ಟಿ20ಯಲ್ಲಿ ಸ್ಥಾನ ಪಡೆದಿದ್ದಾರೆ. ಮೇಜರ್ ಕ್ರಿಕೆಟ್ ಲೀಗ್ನಲ್ಲಿ ಭಾಗವಹಿಸಿದ ಕಾರಣ ಪೂರನ್ ಅವರು ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಫೈನಲ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಪೂರನ್ 55 ಎತೆತಗಳಿಂದ ಬರೋಬ್ಬರಿ 13 ಸಿಕ್ಸರ್ ಮತ್ತು 10 ಬೌಂಡರಿ ಬಾರಿಸಿ ಅಜೇಯ 137 ರನ್ ಬಾರಿಸಿ ತಂಡವನ್ನು ಚೊಚ್ಚಲ ಬಾರಿ ಚಾಂಪಿಯನ್ ಆಗಿ ಹೊರಸೊದರು. ಇದೀಗ ಭಾರತ ವಿರುದ್ಧವೂ ಇದೇ ಬ್ಯಾಟಿಂಗ್ ಪ್ರತಾಪ ಮುಂದುವರಿಸುವ ಸಾಧ್ಯತೆ ಇದೆ.
ವೆಸ್ಟ್ ಇಂಡೀಸ್ ತಂಡ
ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ಶೈಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಒಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ಒಶಾನೆ ಥಾಮಸ್.
ಇದನ್ನೂ ಓದಿ Ind vs wi : ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಪಂದ್ಯ ನಡೆಯುವ ಪಿಚ್ ಹೇಗಿದೆ?
ಭಾರತ ಟಿ20 ತಂಡ
ಇಶಾನ್ ಕಿಶನ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ಅಕ್ಷರ್ ಪಟೇಲ್, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ರವಿ ಬಿಷ್ಟೋಯಿ, ಆರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್, ಮುಖೇಶ್ ಕುಮಾರ್.
ವೇಳಾಪಟ್ಟಿ
ಮೊದಲ ಟಿ20 ಪಂದ್ಯ ಆಗಸ್ಟ್ 3, ಸ್ಥಳ: ಟ್ರಿನಿಡಾಡ್
ದ್ವಿತೀಯ ಟಿ20 ಪಂದ್ಯ ಆಗಸ್ಟ್ 6, ಸ್ಥಳ: ಗಯಾನಾ
ಮೂರನೇ ಟಿ20 ಪಂದ್ಯ ಆಗಸ್ಟ್ 8, ಸ್ಥಳ: ಗಯಾನಾ
ನಾಲ್ಕನೇ ಟಿ20 ಪಂದ್ಯ ಆಗಸ್ಟ್ 12, ಸ್ಥಳ: ಫ್ಲೋರಿಡಾ
5ನೇ ಟಿ20 ಪಂದ್ಯ ಆಗಸ್ಟ್ 13, ಸ್ಥಳ: ಫ್ಲೋರಿಡಾ