Site icon Vistara News

ಕನ್ನಡಿಗ ಕಾವೇರಪ್ಪ ಬೌಲಿಂಗ್​ ದಾಳಿಗೆ ನಲುಗಿದ ಪಶ್ಚಿಮ ವಲಯ; ಚಾಂಪಿಯನ್​ ಪಟ್ಟ ಅಲಂಕರಿಸಿದ ದಕ್ಷಿಣ ವಲಯ

South Zone avenged their loss to West Zone in the 2022-23 final

ಬೆಂಗಳೂರು: ದುಲೀಪ್ ಟ್ರೋಫಿ ಫೈನಲ್ (Duleep Trophy 2023 final) ಪಂದ್ಯದಲ್ಲಿ ದಕ್ಷಿಣ ವಲಯ ತಂಡ 75 ರನ್​ಗಳಿಂದ ಗೆಲುವು ಸಾಧಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಮೂಲಕ 14ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕನ್ನಡಿಗ, ಕೊಡಗಿನ ಕುವರ ವಿದ್ವತ್ ಕಾವೇರಪ್ಪ(Vidhwath Kaverappa) ಪಂದ್ಯಶ್ರೇಷ್ಠ ಮತ್ತು ಶರಣಿಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದರು.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium, Bangalore) ನಡೆದ ಫೈನಲ್​ ಪಂದ್ಯದಲ್ಲಿ ಗೆಲುವಿಗೆ 298 ರನ್ ಗುರಿ ಪಡೆದ ಪಶ್ವಿಮ ವಲಯ ತಂಡವು(West Zone vs South Zone) 222 ರನ್ ಗಳಿಗೆ ಆಲೌಟಾಗಿ ಸೋಲು ಕಂಡಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಐದನೇ 182 ರನ್ ಗಳಿಸಿದ್ದ ಪಶ್ಚಿಮ ವಲಯವು ಐದನೇ ದಿನದಾಟದ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡಿತು. 92 ರನ್ ಗಳಿಸಿ ಹೋರಾಟ ಜಾರಿಯಲ್ಲಿರಿಸಿದ್ದ ನಾಯಕ ಪ್ರಿಯಾಂಕ್ ಪಾಂಚಾಲ್ ಅಂತಿಮ ದಿನದಾಟದಲ್ಲಿ ಮೂರು ರನ್​ ಗಳಿಸಿದ ವೇಳೆ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ವಿದ್ವತ್ ಕಾವೇರಪ್ಪ ಪಾಲಾಯಿತು.

ಇದನ್ನೂ ಓದಿ Duleep Trophy 2023: ದುಲೀಪ್ ಟ್ರೋಫಿಗೆ ದಕ್ಷಿಣ ವಲಯ ತಂಡ ಪ್ರಕಟ; ನಾಲ್ಕು ಕನ್ನಡಿಗರಿಗೆ ಅವಕಾಶ

ಪಾಂಚಾಲ್ ಒಟ್ಟು 95 ರನ್​ ಬಾರಿಸಿ ಏಕಾಂಗಿ ಹೋರಾಟ ನಡೆಸಿದರು. ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್, ಚೇತೇಶ್ವರ್ ಪೂಜಾರ ಹೀಗೆ ಸ್ಟಾರ್​ ಆಟಗಾರರ ಪಡೆಯೇ ಇದ್ದರೂ ಕನ್ನಡಿಗ ವಿದ್ವತ್ ಕಾವೇರಪ್ಪ ಅವರ ಬೌಲಿಂಗ್​ ದಾಳಿಗೆ ಎದೆಯೊಡ್ಡಿ ನಿಲ್ಲುವಲ್ಲಿ ವಿಫಲರಾದರು. ಮೊದಲ ಇನಿಂಗ್ಸ್​ನಲ್ಲಿ ಕಾವೇರಪ್ಪ 7 ವಿಕೆಟ್​ ಉರುಳಿಸಿದರೆ, ದ್ವಿತೀಯ ಇನಿಂಗ್ಸ್​ನಲ್ಲಿ ಒಂದು ವಿಕೆಟ್​ ಪಡೆದರು. ಒಟ್ಟು 8 ವಿಕೆಟ್​ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ವಾಸುಕಿ ಕೌಶಿಕ್ ಮತ್ತು ಸಾಯಿ ಕಿಶೋರ್ ತಲಾ ನಾಲ್ಕು ವಿಕೆಟ್ ಪಡೆದರು.

ದಕ್ಷಿಣ ವಲಯ ಮೊದಲ ಇನ್ನಿಂಗ್ಸ್ ನಲ್ಲಿ 213 ರನ್ ಗಳಿಸಿದ್ದರೆ ಪಶ್ಚಿಮ ವಲಯವು 146 ರನ್​ಗೆ ಆಲೌಟ್​ ಆಯಿತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ದಕ್ಷಿಣ ವಲಯ 230 ರನ್ ಬಾರಿಸಿತು. ಮೊದಲ ಇನಿಂಗ್ಸ್​ನ ಹಿನ್ನಡೆಯೊಂದಿಗೆ ಗುರಿ ಬೆನ್ನಟ್ಟಿದ ಪಶ್ಚಿಮ ವಲಯ ದ್ವಿತೀಯ ಇನಿಂಗ್ಸ್​ನಲ್ಲಿ 222 ರನ್ ಗಳಿಸಿತು.

Exit mobile version