Site icon Vistara News

ಕುಸ್ತಿ ಫೆಡರೇಶನ್ ಅಮಾನತು ಮಾಡಿದರೂ ಹೊಸ ಕ್ಯಾತೆ ತೆಗೆದ ಸಾಕ್ಷಿ ಮಲಿಕ್

sakshi malik

ನವದೆಹಲಿ: ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಥವಾ ಅದರ ಮುಖ್ಯಸ್ಥ ಸಂಜಯ್ ಸಿಂಗ್ ಅಮಾನತುಗೊಂಡಿರುವ((WFI Suspended) ) ಬಗ್ಗೆ ಯಾವುದೇ ಲಿಖಿತ ದಾಖಲೆಯನ್ನು ನೋಡಿಲ್ಲ ಎಂದು ಮಾಜಿ ಕುಸ್ತಿಪಟು ಸಾಕ್ಷಿ ಮಲಿಕ್(Sakshi Malik) ಅವರು ಹೇಳಿದ್ದಾರೆ. ಇದೇ ವೇಳೆ ಕುಸ್ತಿಪಟುಗಳ ಹೋರಾಟ ಸರ್ಕಾರದ ಜತೆ ಅಲ್ಲ ಎಂದು ಹೇಳಿದ್ದಾರೆ.

ಅಸ್ತಿತ್ವದಲ್ಲಿರುವ ನಿಯಮ ಮತ್ತು ನಿಬಂಧನೆಗಳನ್ನು ಹೊಸದಾಗಿ ಆಯ್ಕೆಯಾದ ಕುಸ್ತಿ ಫೆಡರೇಶನ್ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಉಲ್ಲೇಖಿಸಿ ಕೇಂದ್ರ ಕ್ರೀಡಾ ಸಚಿವಾಲಯವು(Union Sports Ministry) ಇಂದು(ಡಿ. 24 ಭಾನುವಾರ) ಬೆಳಗ್ಗೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಹೊಸದಾಗಿ ಚುನಾಯಿವಾದ ಸಂಸ್ಥೆಯನ್ನು ಅಮಾನತುಗೊಳಿಸಿತ್ತು.

ಇದೇ ವಿಚಾರವಾಗಿ ಹೇಳಿಕೆ ನೀಡಿರುವ ಸಾಕ್ಷಿ ಮಲಿಕ್, ಕ್ರೀಡಾ ಸಚಿವಾಲಯ ನೂತನ ಕುಸ್ತಿ ಮಂಡಳಿಯನ್ನು ಅಮಾನತು ಮಾಡಿದೆ ಏನ್ನುವುದಕ್ಕೆ ಯಾವುದೇ ಲಿಖಿತ ದಾಖಲೆಗಳಿಲ್ಲ. ಇದು ಕೇವಲ ಬಾಯಿ ಮಾತಿನ ಹೇಳಿಕೆ ಎಂದು ಮತ್ತೆ ಆರೋಪ ಮಾಡಿದ್ದಾರೆ.

ಇದನ್ನೂ ಓದಿ ಕುಸ್ತಿ ಒಕ್ಕೂಟಕ್ಕೆ ತಾತ್ಕಾಲಿಕ ಸಮಿತಿ ರಚಿಸಲು ಒಲಿಂಪಿಕ್ ಸಂಸ್ಥೆಗೆ ಕೇಂದ್ರದ ಸೂಚನೆ

ಬ್ರಿಜ್​ ಭೂಷಣ್​ ಅವರ ಆಪ್ತರಾಗಿರುವ ಸಂಜಯ್​ ಸಿಂಗ್​ ಭಾರತೀಯ ಕುಸ್ತಿ ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ಸಾಕ್ಷಿ ಮಲಿಕ್​ ಅವರು ಸುದ್ದಿಗೋಷ್ಠಿ ನಡೆಸಿ ಕಣ್ಣೀರು ಸುರಿಸುತ್ತಲೇ ಕುಸ್ತಿಗೆ ವಿದಾಯ ಹೇಳಿದ್ದರು. ಬಜರಂಗ್​ ಪೂನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸು ನೀಡಿದ್ದರು. ಆದರೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಇದನ್ನು ನಿರಾಕರಿಸಿದ್ದರು.

ಕ್ರೀಡಾ ಸಚಿವಾಲಯದ ನಿರ್ಧಾರ ಸ್ವಾಗತಾರ್ಹ: ವಿನೇಶ್ ಫೋಗಟ್

ಬ್ರಿಜ್​ ಭೂಷಣ್​ ವಿರುದ್ಧ ಲೈಗಿಂಕ ಕಿರುಕುಳದ ಆರೋಪ ಮಾಡಿ ಮೊದಲ ಬಾರಿ ಪ್ರತಿಭಟನೆ ನಡೆಸಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ರಾಷ್ಟ್ರೀಯ ಕುಸ್ತಿ ಸಂಘದ ಮಾನ್ಯತೆ ರದ್ದತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಮಾನತಿನಿಂದ ಹೊಸ ಭರವಸೆಯ ಕಿರಣ ಮೂಡಿದೆ. ಕ್ರೀಡಾ ಸಚಿವಾಲಯದ ಈ ನಿರ್ಧಾರವು ಮಹಿಳಾ ಕುಸ್ತಿಪಟುಗಳ ಗೆಲುವು ಎಂದು ಫೋಗಟ್ ಬಣ್ಣಿಸಿದ್ದಾರೆ.

ನನಗೂ ಕುಸ್ತಿಗೂ ಯಾವುದೇ ಸಂಬಂಧವಿಲ್ಲ

ಹೊಸದಾಗಿ ಆಯ್ಕೆಯಾದ ಭಾರತೀಯ ಕುಸ್ತಿ ಅಸೋಸಿಯೇಷನ್‌(Wrestling Federation of India) ಮಂಡಳಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ್ದಕ್ಕೂ(WFI suspension) ನನಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತದ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Singh) ಹೇಳಿದ್ದಾರೆ.

ಇಂದು(ಡಿಸೆಂಬರ್ 24, ಭಾನುವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಿಜ್ ಭೂಷಣ್, ನಾನು ಯಾವುದೇ ವಿವಾದವನ್ನು ಎದುರಿಸಲು ಬಯಸುವುದಿಲ್ಲ. ಭಾರತೀಯ ಕುಸ್ತಿ ರಂಗದಲ್ಲಿ ಇತ್ತೀಚಿನ ಬೆಳವಣಿಗೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

”12 ವರ್ಷ ಕುಸ್ತಿಪಟುಗಳಿಗಾಗಿ ದುಡಿದಿದ್ದೇನೆ, ನ್ಯಾಯ ಕೊಡಿಸಿದ್ದೇನೆಯೇ ಎನ್ನುವುದನ್ನು ಕಾಲವೇ ಹೇಳುತ್ತದೆ. ನಾನು ಕುಸ್ತಿಯಿಂದ ಸಂಪೂರ್ಣ ನಿವೃತ್ತಿ ಹೊಂದಿದ್ದೇನೆ. ಕುಸ್ತಿಯಿಂದ ನಂಟು ಕಡಿದುಕೊಂಡಿದ್ದೇನೆ. ಈಗ ಸರ್ಕಾರದ ಜತೆಗಿನ ನಿರ್ಧಾರ ಹಾಗೂ ಮಾತುಕತೆಯನ್ನು ಒಕ್ಕೂಟದ ಚುನಾಯಿತ ಜನರೇ ಮಾಡುತ್ತಾರೆ” ಎಂದು ಬ್ರಿಜ್ ಭೂಷಣ್ ಸಿಂಗ್ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Exit mobile version