Site icon Vistara News

WFI Suspension: ನೂತನ ಆಡಳಿತ ಮಂಡಳಿ ಅಮಾನತು ಪ್ರಶ್ನಿಸಿ ಮುಂದಿನ ವಾರ ಕೋರ್ಟ್ ಮೆಟ್ಟಿಲೇರಲಿದೆ ಕುಸ್ತಿ ಒಕ್ಕೂಟ

Sanjay Singh

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಆಡಳಿತ ಮಂಡಳಿಯನ್ನು ಅಮಾನತು(WFI Suspension) ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ಮುಂದಿನ ವಾರ ನ್ಯಾಯಾಲಯದ ಮೊರೆ ಹೋಗಲು ಡಬ್ಲ್ಯುಎಫ್‌ಐ ನಿರ್ಧರಿಸಿದೆ. ಜತೆಗೆ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಜನವರಿ 16 ರಂದು ದೆಹಲಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ಕರೆದಿದೆ.

ರಾಷ್ಟ್ರೀಯ ಕ್ರೀಡಾ ಸಂಹಿತೆ ಉಲ್ಲಂಘನೆ ಮತ್ತು ಕುಸ್ತಿ ಒಕ್ಕೂಟದ ಆಡಳಿತ ಸಂವಿಧಾನ ಉಲ್ಲಂಘನೆ ಮಾಡಿದ ಕಾರಣದಿಂದ ಕೇಂದ್ರ ಸರ್ಕಾರ ಡಿಸೆಂಬರ್ 24 ರಂದು ಕುಸ್ತಿ ಫೆಡರೇಶನ್​ನ ನೂತನ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿದೆ. ಇದೇ ವಿಚಾರವಾಗಿ ನೂತನ ಅಧ್ಯಕ್ಷ ಸಂಜಯ್​ ಸಿಂಗ್​ ಸಚಿವಾಲಯದ ಕ್ರಮವನ್ನು ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಲಿದ್ದಾರೆ.

“ಇದೇ ವಿಚಾರವಾಗಿ ಮಾತನಾಡಿದ ಸಂಜಯ್ ಸಿಂಗ್, ನಮಗೆ ಸರಿಯಾಗಿ ಕಾರ್ಯನಿರ್ವಹಿಸುವ ಫೆಡರೇಶನ್ ಅಗತ್ಯವಿದೆ. ನಾವು ಮುಂದಿನ ವಾರ ಈ ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತೇವೆ. ನಾವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವುದರಿಂದ ಈ ಅಮಾನತು ಸ್ವೀಕಾರಾರ್ಹವಲ್ಲ” ಎಂದು ಮಾಧ್ಯಮದ ಮುಂದೆ ಹೇಳಿದರು.

ಇದನ್ನೂ ಓದಿ WFI Office: ಬ್ರಿಜ್​ ಭೂಷಣ್​ ಮನೆಯಿಂದ ಭಾರತೀಯ ಕುಸ್ತಿ ಒಕ್ಕೂಟದ ಕಚೇರಿ ಸ್ಥಳಾಂತರ

‘ಕೇಂದ್ರ ಕ್ರೀಡಾ ಸಚಿವಾಲಯ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ. ಸ್ವಾಯತ್ತ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಯನ್ನು ಸರ್ಕಾರವು ಈ ರೀತಿ ಏಕಾಏಕಿ ಅಮಾನತುಗೊಳಿಸಲು ಸಾಧ್ಯವಿಲ್ಲ. ಈ ನಿರ್ಧಾರವನ್ನು ಹಿಂಪಡೆಯದಿದ್ದರೆ ಕೋರ್ಟ್​ ಮೆಟ್ಟಿಲೇರಲಾಗುದು’ ಎಂದು ಕಳೆದ ವಾರ ಸಂಜಯ್​ ಸಿಂಗ್​ ಎಎನ್​ಐ ಜತೆ ಹೇಳಿದ್ದರು. ಇದೀಗ ಕೋರ್ಟ್​ಗೆ ಹೋಗಲು ಸಿದ್ದರಾಗಿದ್ದಾರೆ.

ಸಂಜಯ್​ ಸಿಂಗ್ ಅವರು ಮಾಜಿ ಅಧ್ಯಕ್ಷ ಮತ್ತು ಲೈಗಿಂಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್​ ಭೂಷನ್​ ಶರಣ್​ ಸಿಂಗ್​ ಆಪ್ತರಾಗಿರುವ ಕಾರಣ ಇದನ್ನು ವಿರೋಧಿಸಿ ಸಾಕ್ಷಿ ಸಿಂಗ್​ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಭಜರಂಗ್​ ಪೂನಿಯಾ ಪದ್ಮಶ್ರೀ ಪ್ರಶ್ತಿಯನ್ನು, ವಿನೇಶ್​ ಫೋಗಟ್​ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಿದ್ದರು.

ಅಮಾನತುಗೊಂಡಿರುವ ರಾಷ್ಟ್ರೀಯ ಕುಸ್ತಿ ಸಂಸ್ಥೆಯ(WFI) ದೈನಂದಿನ ವ್ಯವಹಾರಗಳನ್ನು ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ತ್ರಿಸದಸ್ಯರ ತಾತ್ಕಾಲಿಕ ಸಮಿತಿ ರಚಿಸಿದೆ. ವುಶು ಅಸೋಸಿಯೇಷನ್ ​​ಆಫ್ ಇಂಡಿಯಾ ಅಧ್ಯಕ್ಷ ಭೂಪಿಂದರ್ ಸಿಂಗ್ ಬಾಜ್ವಾ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಹಾಕಿ ಒಲಿಂಪಿಯನ್ ಎಂಎಂ ಸೋಮಯ್ಯ ಮತ್ತು ಮಾಜಿ ಅಂತಾರಾಷ್ಟ್ರೀಯ ಶಟ್ಲರ್ ಮಂಜುಷಾ ಕನ್ವರ್ ಈ ಸಮಿತಿಯ ಸದಸ್ಯರಾಗಿದ್ದಾರೆ.

Exit mobile version