Site icon Vistara News

ಸಂಘರ್ಷ ಬಯಸಲ್ಲ, ಅಮಾನತು ಹಿಂಪಡೆಯಿರಿ; ಕೇಂದ್ರಕ್ಕೆ ಭಾರತ ಕುಸ್ತಿ ಫೆಡರೇಷನ್ ಮನವಿ

sanjay singh wfi

ನವದೆಹಲಿ: ಅಮಾನತು(WFI Suspension) ಹಿಂಪಡೆಯಲು ಆಗ್ರಹಿಸಿ ಕ್ರೀಡಾ ಸಚಿವಾಲಯದ(Sports Ministry) ಜತೆ ಮಾತುಕತೆ ನಡೆಸಲು ಭಾರತ ಕುಸ್ತಿ ಫೆಡರೇಷನ್ (Wrestling Federation Of India) ನಿರ್ಧರಿಸಿದೆ. ಸರ್ಕಾರದ ಜತೆ ಸಂಘರ್ಷ ಬಯಸುವುದಿಲ್ಲ ನಾವು ಮಾತುಕತೆಗೆ ಸಿದ್ಧ ಎಂದು ತಿಳಿಸಿದೆ.

ಕೇಂದ್ರ ಕ್ರೀಡಾ ಸಚಿವಾಲಯ ಅಮಾನತು ಹಿಂಪಡೆಯದಿದ್ದರೆ ಕೋರ್ಟ್‌ ಮೆಟ್ಟಿಲೇರಿ ಕಾನುನು ಸಮರ ಸಾರುವುದಾಗಿ ಈ ಹಿಂದೆ ಡಬ್ಲ್ಯುಎಫ್‌ಐ ನೂತನ ಅಧ್ಯಕ್ಷ ಸಂಜಯ್​ ಸಿಂಗ್(WFI President Sanjay Singh)​ ಹೇಳಿದ್ದರು. ಆದರೆ ಇದೀಗ ಅಮಾನತಿನ ಕುರಿತು ಕ್ರೀಡಾ ಸಚಿವಾಲಯದ ಜತೆ ಮಹತ್ವದ ಮಾತುಕತೆ ನಡೆಸಲಿದ್ದೇವೆ ಎಂದು ಮಂಗಳವಾರ ಮಾಧ್ಯಮದ ಮುಂದೆ ಹೇಳಿದ್ದಾರೆ. ಒಂದೊಮ್ಮೆ ಮಾತುಕತೆ ಮಾತುಕತೆ ವಿಫಲವಾದರೆ ಕಾನೂನು ಮೊರೆ ಹೋಗುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಅಮಾನತುಗೊಂಡಿರುವ ಆಡಳಿತ ಮಂಡಳಿ ಅಧ್ಯಕ್ಷ ಸಂಜಯ್ ಸಿಂಗ್ ನೇತೃತ್ವದಲ್ಲಿ ಇಂದು ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತರ 12 ಚುನಾಯಿತ ಸದಸ್ಯರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್ ಲೋಚಬ್ ಮತ್ತು ಹಿರಿಯ ಉಪಾಧ್ಯಕ್ಷ ದೇವೇಂದರ್ ಕಡಿಯಾನ್ ಸಭೆಗೆ ಗೈರಾಗಿದ್ದರು.

ಸರ್ಕಾರದ ಜತೆ ಸಂಘರ್ಷವಿಲ್ಲ


ಈ ಹಿಂದೆ ಸರ್ಕಾದ ನಿರ್ಧಾರವನ್ನು ವಿರೋಧಿಸಿದ್ದ ಸಂಜಯ್​ ಸಿಂಗ್​ ಈಗ ಉಲ್ಟಾ ಹೊಡೆದಿದ್ದಾರೆ. ಸರ್ಕಾರದ ಜತೆ ಸಂಘರ್ಷ ಬಯಸುವುದಿಲ್ಲ. ಸಚಿವಾಲಯದ ಸಮಯ ಕೋರಿದ್ದೇವೆ. ನಿಯೋಗವು ಸರ್ಕಾರದೊಂದಿಗೆ ಚರ್ಚೆಗೆ ಪ್ರಯತ್ನಿಸಲಿದೆ ಎಂದು ಸಭೆಯ ಬಳಿಕ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

“ಡಬ್ಲ್ಯುಎಫ್‌ಐ ಅಮಾನತುಗೊಳಿಸುವ ವೇಳೆ ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ಕೆಲವು ಷರತ್ತುಗಳನ್ನು ವಿಧಿಸಿತ್ತು. ಸರ್ಕಾರ ಅಮಾನತು ಹೇಗೆ ತೆರವು ಮಾಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಹಿಂದೆಯೂ ಸಚಿವಾಲಯಕ್ಕೆ ಪತ್ರ ಬರೆದಿದ್ದೆವು. ಆದರೆ ಉತ್ತರ ಬಂದಿಲ್ಲ. ಅಮಾನತು ತೆರವು ಮಾಡಲು ಏನು ಮಾಡಬೇಕು ಎಂಬುದನ್ನು ತಿಳಿಯಲು ಬಯಸುತ್ತೇವೆ. ಹೀಗಾಗಿ 2-3 ದಿನಗಳಲ್ಲಿ ಸಚಿವಾಲಯವನ್ನು ಸಂಪರ್ಕಿ ಮಾತುಕತೆ ನಡೆಸಲಿದ್ದೆವೆ. ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೂ ಮುನ್ನ ಈ ಅಮಾನತು ತೆರವು ಮಾಡುವ ನಿರೀಕ್ಷೆ ನಮ್ಮದು ಎಂದು ಸಂಜಯ್​ ಸಿಂಗ್​ ಹೇಳಿದರು.

ಇದನ್ನೂ ಓದಿ WFI Office: ಬ್ರಿಜ್​ ಭೂಷಣ್​ ಮನೆಯಿಂದ ಭಾರತೀಯ ಕುಸ್ತಿ ಒಕ್ಕೂಟದ ಕಚೇರಿ ಸ್ಥಳಾಂತರ

ಅಮಾನತುಗೊಂಡಿರುವ ರಾಷ್ಟ್ರೀಯ ಕುಸ್ತಿ ಸಂಸ್ಥೆಯ(WFI) ದೈನಂದಿನ ವ್ಯವಹಾರಗಳನ್ನು ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ತ್ರಿಸದಸ್ಯರ ತಾತ್ಕಾಲಿಕ ಸಮಿತಿ ರಚಿಸಿದೆ. ವುಶು ಅಸೋಸಿಯೇಷನ್ ​​ಆಫ್ ಇಂಡಿಯಾ ಅಧ್ಯಕ್ಷ ಭೂಪಿಂದರ್ ಸಿಂಗ್ ಬಾಜ್ವಾ ಅವರು ಸಮಿತಿಯ ಅಧ್ಯಕ್ಷರಾಗಿದ್ದು, ಹಾಕಿ ಒಲಿಂಪಿಯನ್ ಎಂಎಂ ಸೋಮಯ್ಯ ಮತ್ತು ಮಾಜಿ ಅಂತಾರಾಷ್ಟ್ರೀಯ ಶಟ್ಲರ್ ಮಂಜುಷಾ ಕನ್ವರ್ ಈ ಸಮಿತಿಯ ಸದಸ್ಯರಾಗಿದ್ದಾರೆ.

ಸಂಜಯ್​ ಸಿಂಗ್ ಅವರು ಮಾಜಿ ಅಧ್ಯಕ್ಷ ಮತ್ತು ಲೈಗಿಂಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್​ ಭೂಷನ್​ ಶರಣ್​ ಸಿಂಗ್​ ಆಪ್ತರಾಗಿರುವ ಕಾರಣ ಇದನ್ನು ವಿರೋಧಿಸಿ ಸಾಕ್ಷಿ ಸಿಂಗ್​ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಭಜರಂಗ್​ ಪೂನಿಯಾ ಪದ್ಮಶ್ರೀ ಪ್ರಶ್ತಿಯನ್ನು, ವಿನೇಶ್​ ಫೋಗಟ್​ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಿದ್ದರು.

Exit mobile version