ನವ ದೆಹಲಿ : ಭಾರತ ತಂಡ ಮಾಜಿ ಆರಂಭಿಕ ಬ್ಯಾಟರ್ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ (Gautham Gambhir) ಅವರಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಹಾಗೂ ವಿರಾಟ್ ಕೊಹ್ಲಿಯ (Virat Kohli) ಬಗ್ಗೆ ಸಲ್ಲದ ಅಸಹನೆ. ಅವಕಾಶ ಸಿಕ್ಕಾಗೆಲ್ಲ ಅವರಿಬ್ಬರನ್ನು ಟೀಕಿಸುತ್ತಾರೆ ರಾಜಕಾರಣಿ ಕಂ ಕಾಮೆಂಟೇಟರ್. ಆದರೆ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಗೌತಮ್ ಗಂಭೀರ್ ಧೋನಿಯನ್ನು ಪ್ರಶಂಸಿಸಿದ್ದಾರೆ. ಅವರು ಸಿಕ್ಕಾಪಟ್ಟೆ ತ್ಯಾಗ ಮಾಡಿದ್ದಾರೆ ಎಂದು ಹೇಳುವ ಮೂಲಕ ಅವರನ್ನು ತ್ಯಾಗಮಯಿ ಎಂದು ಬಿಂಬಿಸಲು ಹೊರಟಿದ್ದಾರೆ. ಅದ್ಯಾಕೆ ಎಂಬುದು ಗೊತ್ತಿಲ್ಲ. ಆದರೆ ಅವರ ಪ್ರಶಂಸೆಯಲ್ಲಿ ಬೆರೆಯವರನ್ನು ಟೀಕಿಸುವ ಉದ್ದೇಶವೂ ಇರಬಹುದು ಎಂದು ಅಭಿಮಾನಿಗಳು ಅಂದಾಜು ಮಾಡಿದ್ದಾರೆ.
ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಎಂಎಸ್ ಧೋನಿ ಅವರನ್ನು ಗಂಭೀರ್ ಶ್ಲಾಘಿಸಿದ್ದು. ವೈಯಕ್ತಿಕ ವೈಭವಕ್ಕಿಂತ ತಂಡಗಳ ಯಶಸ್ಸಿಗೆ ಆದ್ಯತೆ ನೀಡಿದ ನಿಸ್ವಾರ್ಥ ನಾಯಕ ಎಂದು ಹೇಳಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ಧೋನಿಯನ್ನು ಅವಕಾಶ ಸಿಕ್ಕಾಗೆಲ್ಲ ಗಂಭೀರ್ ಟೀಕಿಸಿದ್ದರು. ವಿಶೇಷವಾಗಿ 2011 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಎಲ್ಲರಿಗೂ ಸಿಗಬೇಕಾದ ಪ್ರಶಂಸೆಯನ್ನು ಧೋನಿ ತಾವೊಬ್ಬರೇ ತೆಗೆದುಕೊಂಡಿದ್ದಾರೆ ಎಂದು ತೆಗಳುತ್ತಿದ್ದರು. ಆ ಪಂದ್ಯದಲ್ಲಿ ಧೋನಿ ಅಜೇಯ 91 ರನ್ ಬಾರಿಸುವ ಜತೆಗೆ ವಿನ್ನಿಂಗ್ ಸಿಕ್ಸರ್ ಸಿಡಿಸಿದ್ದರು. ಜನಮಾನಸದಲ್ಲಿ ಅದು ಅಚ್ಚಳಿಯದೇ ಉಳಿದ ಕಾರಣ ಗೆಲುವಿನ ಪ್ರಶಂಸೆ ಧೋನಿಗೆ ಹೆಚ್ಚಾಗಿ ಸಿಕ್ಕಿತ್ತು. ಅದೇ ಪಂದ್ಯದಲ್ಲಿ 97 ರನ್ ಬಾರಿಸಿದ ತಮಗೆ ಆ ಕ್ರೆಡಿಟ್ ಸಿಗಲಿಲ್ಲ ಎಂಬ ಕೊರಗು ಗಂಭೀರ್ ಅವರದ್ದು. ಅದಕ್ಕಾಗಿ ಅವರು ಧೋನಿ ವಿರುದ್ಧ ಆಗಾಗ ತಿರುಗಿ ಬೀಳುತ್ತಿದ್ದು. ಇದೀಗ ಅಚ್ಚರಿ ಎಂಬಂತೆ ಹೊಗಳಿದ್ದಾರೆ.
ಇದನ್ನೂ ಓದಿ : ICC ODI Ranking : ಒಂದೇ ವಾರದೊಳಗೆ ಪಾಕಿಸ್ತಾನ ತಂಡವನ್ನು ಕೆಳಕ್ಕೆ ತಳ್ಳಿದ ಆಸ್ಟ್ರೇಲಿಯಾ!
ಧೋನಿಯ ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಳ್ಳದೇ ಹೋಗಿದ್ದರೆ ಹಲವಾರು ವೈಯಕ್ತಿಕ ದಾಖಲೆ ಮಾಡಬಹುದಾಗಿತ್ತು. ಅವರ ಜವಾಬ್ದಾರಿಗಳು ವೈಯಕ್ತಿಕ ಬ್ಯಾಟಿಂಗ್ ಸಾಧನೆಗಳನ್ನು ಮರೆ ಮಾಡಿವೆ ಎಂದು ಗಂಭೀರ್ ಇದೀಗ ಹೇಳಿದ್ದಾರೆ. ಧೋನಿ ನಾಯಕತ್ವದಲ್ಲಿರದಿದ್ದರೆ ಅವರು ಹಲವಾರು ಏಕದಿನ ದಾಖಲೆಗಳನ್ನು ಸೃಷ್ಟಿಸಬಹುದಾಗಿತ್ತು ಎಂದು ಗಂಭೀರ್ ನುಡಿದಿದ್ದಾರೆ.
“ನಾಯಕತ್ವದ ಜವಾಬ್ದಾರಿಯಿಂದಾಇ ಧೋನಿಗೆ ಬ್ಯಾಟರ್ ಆಗಿ ಸಾಧಿಸಬಹುದಾದದ್ದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಬಹಳಷ್ಟು ಬಾರಿ ನಾಯಕನಾಗಿ ನೀವು ತಂಡವನ್ನು ಮೊದಲ ಸ್ಥಾನದಲ್ಲಿರಿಸಬೇಕಾಗುತ್ತದೆ. ಎಂಎಸ್ ಧೋನಿ ನಾಯಕನಾಗದಿದ್ದರೆ ಅವರು 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದಿತ್ತು. ಅವರು ಹಲವಾರು ಏಕದಿನ ದಾಖಲೆಗಳನ್ನು ಮುರಿಯಬಹುದಾಗಿತ್ತು ಎಂಬುದು ನನಗೆ ಖಾತ್ರಿಯಿದೆ. ಅವರು ಸಾಕಷ್ಟು ಟ್ರೋಫಿಗಳನ್ನು ಗೆದ್ದಿದ್ದಾರೆ ಆದರೆ ವೈಯಕ್ತಿಕವಾಗಿ ಅವರು ಟ್ರೋಫಿಗಳಿಗಾಗಿ ತಮ್ಮ ಅಂತಾರಾಷ್ಟ್ರೀಯ ರನ್ಗಳನ್ನು ತ್ಯಾಗ ಮಾಡಿದ್ದಾರೆ ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಹೇಳಿದ್ದಾರೆ.
ಧೋನಿ ಭಾರತೀಯ ಕ್ರಿಕೆಟ್ಗೆ ವರದಾನ: ಗಂಭೀರ್
ಸಾಂಪ್ರದಾಯಿಕ ಕ್ರಿಕಟಿಗರನ್ನು ಮೀರುವ ಅವರ ವಿಶಿಷ್ಟ ಸಾಮರ್ಥ್ಯವನ್ನು ಧೋನಿಗೆ ಇತ್ತು. ಮಾಜಿ ನಾಯಕ ಭಾರತೀಯ ಕ್ರಿಕೆಟ್ನಲ್ಲಿ ಪರಿವರ್ತಕ ವ್ಯಕ್ತಿ ಎಂದು ಗಂಭೀರ್ ಹೇಳಿದರು. ವಿಕೆಟ್ ಕೀಪರ್ಗಳು ಐತಿಹಾಸಿಕವಾಗಿ ಸ್ಪಂಪ್ಗಳ ಹಿಂದಿನ ಪರಾಕ್ರಮ ಮತ್ತು ನಂತರ ಅವರ ಬ್ಯಾಟಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾಗಿರುತ್ತಾರೆ. ಆದರೆ ಧೋನಿ ಮೊದಲು ಬ್ಯಾಟರ್ ಮತ್ತು ಎರಡನೆಯದಾಗಿ ವಿಕೆಟ್ ಕೀಪರ್ ಆಗಿ ಎಂದು ಗಂಭೀರ್ ಹೇಳಿದ್ದಾರೆ.
ಹೆಚ್ಚಿನ ವಿಕೆಟ್ಕೀಪರ್ಗಳು ಮೊದಲು ಕೀಪರ್ ಮತ್ತು ನಂತರ ಬ್ಯಾಟರ್ ಆಗಿರುತ್ತಾರೆ. ಎಂಎಸ್ ಧೋನಿ ಮೊದಲು ಬ್ಯಾಟರ್ ಆಗಿದ್ದರು ನಂತರ ವಿಕೆಟ್ ಕೀಪರ್ ಆಗಿದ್ದರು. ಎಂಎಸ್ ಧೋನಿಯಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದರು. ಆ ಕ್ರಮಾಂಕದಲ್ಲಿ ಪಂದ್ಯಗಳನ್ನು ಗೆಲ್ಲಿಸಬಲ್ಲ ವಿಕೆಟ್ ಕೀಪರ್- ಸಿಕ್ಕಿದ್ದು ಭಾರತೀಯ ಕ್ರಿಕೆಟ್ಗೆ ಒಂದು ಆಶೀರ್ವಾದ ಎಂದು ಗಂಭೀರ್ ಹೇಳಿದ್ದಾರೆ.