ನಾಗ್ಪುರ: ಟೀಮ್ ಇಂಡಿಯಾ ಸ್ಪಿನ್ನರ್ ರವೀಂದ್ರ ಜಡೇಜಾ (Ravindra jadeja) ಅದ್ಭುತ ಸ್ಪೆಲ್ ಮೂಲಕ ಭಾರತ ತಂಡಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅವರು 47 ರನ್ಗಳಿಗೆ 5 ವಿಕೆಟ್ ಪಡೆದುಕೊಂಡಿದ್ದಾರೆ. ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಎದುರಾಳಿ ತಂಡವನ್ನು ಆತಿಥೇಯ ತಂಡ 177 ರನ್ಗಳಿಗೆ ಕಟ್ಟಿ ಹಾಕಿದೆ ಹಾಗೂ ಪ್ರತಿಯಾಗಿ ಬ್ಯಾಟ್ ಮಾಡಿದ 1 ವಿಕೆಟ್ ನಷ್ಟಕ್ಕೆ 77 ರನ್ ಬಾರಿಸಿದೆ. ಈ ಮೂಲಕ ಮೊದಲ ಟೆಸ್ಟ್ ಪಂದ್ಯದಲ್ಲಿ ಮುನ್ನಡೆ ಗಳಿಸುವ ಸೂಚನೆ ನೀಡಿದೆ. ಏತನ್ಮಧ್ಯೆ, ಪಂದ್ಯದ ನಡುವೆ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ಬೆರಳಿಗೆ ಏನೂ ಹಚ್ಚಿಕೊಂಡಿದ್ದರು ಎಂಬ ವಿಷಯ ಚರ್ಚೆಗೆ ಕಾರಣವಾಗಿದೆ.
ಆಸ್ಟ್ರೇಲಿಯಾದ ಮಾಧ್ಯಮವೊಂದು ಜಡೇಜಾ ಅವರು ಚೆಂಡನ್ನು ಸ್ಪಿನ್ ಮಾಡುವ ಬೆರಳಿಗೆ ಏನು ಹಚ್ಚಿಕೊಂಡು ಬೌಲಿಂಗ್ ಮಾಡಿದ್ದರು ಎಂದು ಹುಯಿಲೆಬ್ಬಿಸಿದೆ. ಇದು ಮೋಸದಾಟ ಎಂಬರ್ಥದಲ್ಲಿ ವರದಿ ಮಾಡಿದೆ. ಪಾಕ್ಸ್ ಕ್ರಿಕೆಟ್ ಪ್ರಕಾರ ಜಡೇಜಾ ಅವರು ತಮ್ಮ ಬೆರಳಿಗೆ ಆಸಕ್ತಿಕಾರಕ ವಸ್ತುವೊಂದನ್ನು ಹಚ್ಚಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅ
ಇದನ್ನೂ ಓದಿ: Ravindra Jadeja : ನಾಗ್ಪುರ ಪಿಚ್ ಹೆಚ್ಚು ತಿರುವು ಪಡೆಯುತ್ತಿರಲಿಲ್ಲ ಎಂದ ರವೀಂದ್ರ ಜಡೇಜಾ
ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮೈಕೆಲ್ ವಾನ್ ಕೂಡ ಇದನ್ನು ಪ್ರಶ್ನಿಸಿದ್ದಾರೆ. ರವೀಂದ್ರ ಜಡೇಜಾ ಅವರು ಕೈಗೆ ಹಚ್ಚಿಕೊಂಡಿದ್ದು ಏನು ಇರಬಹುದು. ಇದಕ್ಕಿಂತ ಮೊದಲು ನಾನು ಎಲ್ಲೂ ನೋಡಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಅವರೆಲ್ಲರೂ ಜಡೇಜಾ ಚೆಂಡನ್ನು ಹೆಚ್ಚು ಸ್ಪಿನ್ ಮಾಡುವುದಕ್ಕೆ ಅಂಟು ಹಾಕಿಕೊಂಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಮೂಲಗಳ ಪ್ರಕಾರ ರವೀಂದ್ರ ಜಡೇಜಾ ಅವರ ಕೈಗೆ ನೋವಾಗಿದ್ದು, ಅವರು ಅದಕ್ಕೆ ಮುಲಾಮು ಹಚ್ಚಿಕೊಂಡಿದ್ದಾರೆ. ಅದರಲ್ಲಿ ಮೋಸದಾಟ ಏನೂ ಇಲ್ಲ ಎಂಬುದಾಗಿ ಹೇಳಲಾಗಿದೆ.