ನವದೆಹಲಿ: ಏಷ್ಯಾ ಕಪ್ 2023 ರ ಸೂಪರ್ ಫೋರ್ ಹಂತದಲ್ಲಿ ಪಾಕಿಸ್ತಾನ ಮತ್ತು ಭಾರತ (ind vs pak) ನಡುವಿನ ಥ್ರಿಲ್ಲಿಂಗ್ ಪಂದ್ಯವನ್ನು ಮಳೆಯಿಂದಾಗಿ ಸೆಪ್ಟೆಂಬರ್ 11 ರ ಸೋಮವಾರಕ್ಕೆ ಮುಂದೂಡಲಾಗಿದೆ. ಈ ಪಂದ್ಯಕ್ಕೆ ಆಯೋಜಕರು ಮೀಸಲು ದಿನವನ್ನು ನಿಗದಿ ಮಾಡಿದ್ದಾರೆ. ಹೀಗಾಗಿ ಪಂದ್ಯ ನಿಂತಲ್ಲಿಂದಲೇ ಮೀಸಲು ದಿನ ಆಟ ಮುಂದುವರಿಯಲಿದೆ. ಜೋರು ಮಳೆಯಿಂದಾಗಿ ಭಾರತದ ಇನಿಂಗ್ಸ್ನ 24.1 ಓವರ್ಗಳಲ್ಲಿ ಆಟವನ್ನು ನಿಲ್ಲಿಸಲಾಯಿತು. ಒಂದು ಗಂಟೆಯ ನಂತರ ಮಳೆ ನಿಂತರೂ, ಮೈದಾನವು ಆಟದಕ್ಕೆ ಸಿದ್ಧವಾಗದ ಕಾರಣ ಮುಂದೂಡಿಕೆ ಅನಿವಾರ್ಯವಾಯಿತು.
ಮೈದಾನದ ಸಿಬ್ಬಂದಿ ಸಾಧ್ಯವಾದಷ್ಟು ಬೇಗ ಆಟವನ್ನು ಪ್ರಾರಂಭಿಸಲು ದಣಿವರಿಯದೆ ಕೆಲಸ ಮಾಡಿದರು. ಗುರಿ ಮೀರುವ ಹುಮ್ಮಸ್ಸಿನಲ್ಲಿದ್ದರು. ದುರದೃಷ್ಟವಶಾತ್ಮ ಳೆ ಮತ್ತೆ ಸುರಿಯಿತು, ಮತ್ತು ಅಂಪೈರ್ಗಳು ದಿನದಾಟ ರದ್ದುಗೊಳಿಸಬೇಕಾಯಿತು. ನಾಳೆ ಮಧ್ಯಾಹ್ನ 3 ಗಂಟೆಗೆ ಪಂದ್ಯ ಪುನರಾರಂಭಗೊಳ್ಳಲಿದ್ದು, ಭಾರತವು ಸಂಪೂರ್ಣ 50 ಓವರ್ಗಳನ್ನು ಆಡಲಿದೆ.
ಮುಂದೇನಾಗುವುದು?
ಮೀಸಲು ದಿನದ ಪಂದ್ಯವೂ ರದ್ದಾದರೆ ಎರಡೂ ತಂಡಗಳ ನಡುವೆ ಅಂಕಗಳನ್ನು ವಿಂಗಡಿಸಲಾಗುತ್ತದೆ. ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಗೆದ್ದ ನಂತರ ಪಾಕಿಸ್ತಾನ ಈಗಾಗಲೇ ಎರಡು ಅಂಕಗಳನ್ನು ಹೊಂದಿದೆ. ಈ ಪಂದ್ಯವು ಸಮಬಲದಲ್ಲಿ ಕೊನೆಗೊಂಡರೆ ಅವರು ಇನ್ನೂ ಒಂದು ಅಂಕ ಪಡೆಯುತ್ತಾರೆ . ಸೂಪರ್ ಫೋರ್ ನ ಮೊದಲ ಪಂದ್ಯವನ್ನು ಆಡುತ್ತಿರುವ ಭಾರತ ಕೂಡ ಒಂದು ಅಂಕವನ್ನು ಗಳಿಸಲಿದೆ.
ಒಂದು ವೇಳೆ ಮಳೆ ಬಂದು ಬಿಟ್ಟರೆ ಓವರ್ಗಳ ಕಡಿತ ಮಾಡುವ ಮೂಲಕ ಫಲಿತಾಂಶಕ್ಕಾಗಿ ಪ್ರಯತ್ನ ಮಾಡಬಹುದು. ಹಾಗಾದರೆ ಮೀಸಲು ದಿನದ ನೆರವ ಎರಡೂ ತಂಡಗಳಿಗೆ ಸಿಗಬಹುದು.
ಭಾನುವಾರದ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಯುವ ಆಟಗಾರ ಶುಭ್ಮನ್ ಗಿಲ್ ಇಬ್ಬರೂ ಆರಂಭಿಕರು ತಮ್ಮ ಅರ್ಧಶತಕಗಳನ್ನು ಬಾರಿಸಿ ಭಾರತಕ್ಕೆ ಪರಿಪೂರ್ಣ ಆರಂಭವನ್ನು ನೀಡಿದರು. ಆದಾಗ್ಯೂ, ಶದಾಬ್ ಖಾನ್ ಮತ್ತು ಶಾಹೀನ್ ಶಾ ಅಫ್ರಿದಿ ಬ್ಯಾಕ್ ಟು ಬ್ಯಾಕ್ ಓವರ್ಗಳಲ್ಲಿ ವಿಕೆಟ್ಗಳನ್ನು ಉರುಳಿಸಿದ್ದರಿಂದ ಭಾರತಕ್ಕೆ ಆರಂಭಿಕ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ ಹಲವು ತಿಂಗಳುಗಳ ಬಳಿಕ ತಂಡಕ್ಕೆ ಹಿಂದಿರುಗಿದ ಕೆಎಲ್ ರಾಹುಲ್ ಭಾರತದ ರನ್ಗಳಿಕೆಯನ್ನು ಮುಂದುವರಿಸಲು ಯತ್ನಿಸಿದರು. ವಿರಾಟ್ ಕೊಹ್ಲಿಯೂ ಉತ್ತಮ ನೆರವು ಕೊಟ್ಟರು.
ಇದನ್ನೂ ಓದಿ : ind vs pak : ಏನ್ ಐಡಿಯಾ; ಪಿಚ್ ಒಣಗಿಸಲು ಎಲೆಕ್ಟ್ರಿಕ್ ಫ್ಯಾನ್ ಸ್ಟೇಡಿಯಮ್ಗೆ ತಂದ ಗ್ರೌಂಡ್ ಸಿಬ್ಬಂದಿ
ಸೋಮವಾರ ಭಾರತ ತಂಡವು ಸಾಧ್ಯವಾದಷ್ಟು ಸ್ಕೋರ್ ಮಾಡುವುದು ಮತ್ತು ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಸವಾಲು ಒಡ್ಡಬೇಕಾಗುತ್ತದೆ. ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಈ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹವಾಮಾನದ ವಿಷಯಕ್ಕೆ ಬಂದಾಗ, ಮತ್ತೊಮ್ಮೆ ಮಳೆಯಾಗುವ ಭಾರಿ ಅವಕಾಶವಿದೆ. ಆದ್ದರಿಂದ, ಅಭಿಮಾನಿಗಳಿಗೆ ಮತ್ತೊಂದು ಬಾರಿ ನಿರಾಸೆ ಉಂಟಾಗಬಹುದು.