Site icon Vistara News

World Test Championship : ಆಸ್ಟ್ರೇಲಿಯಾ ವಿರುದ್ಧದ ಮೊದಲ ಗೆಲುವಿನ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಭಾರತದ ಸ್ಥಾನವೇನು?

Team India

#image_title

ದುಬೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್​ ಹಾಗೂ 132 ರನ್​ಗಳ ಬೃಹತ್​ ಜಯ ದಾಖಲಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಭಾರತ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಅಬ್ಬರಿಸುವ ಮೂಲಕ ನೈಜ ಟೆಸ್ಟ್​ ಕ್ರಿಕೆಟ್​ನ ಜಯ ತನ್ನದಾಗಿಸಿಕೊಂಡಿದೆ. ಈ ಟೆಸ್ಟ್​ ಸರಣಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ (World Test Championship) ಭಾಗವಾಗಿರುವ ಕಾರಣ ಸರಣಿಯಲ್ಲಿ ಸಾಧನೆ ಆ ಪಟ್ಟಿಯಲ್ಲಿನ ಸ್ಥಾನಕ್ಕೂ ನೆರವಾಗಲಿದೆ.

ಮೊದಲ ಪಂದ್ಯದ ಬೃಹತ್​ ಜಯದ ಬಳಿಕ ಭಾರತ ತಂಡ ಶೇಕಡಾ 111 ಅಂಕಗಳನ್ನು ಗಳಿಸಿಕೊಂಡಿದೆ. ಆದಾಗ್ಯೂ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 136 ಅಂಕಗಳನ್ನು ಪಡೆದುಕೊಂಡಿರುವ ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ. ಶ್ರೀಲಂಕಾ ತಂಡ ಶೇಕಡಾ 64 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಶೇಕಡಾವಾರು ಅಂಕಗಳ ವಿಚಾರಕ್ಕೆ ಬಂದಾಗಲೂ ಆಸ್ಟ್ರೇಲಿಯಾ (70.83) ಅಂಕ ಸಂಪಾದಿಸಿದೆ ಭಾರತಕ್ಕೆ 61.67 ಅಂಕಗಳಿವೆ.

ಇದನ್ನೂ ಓದಿ : Ravindra Jadeja : ಅಂಪೈರ್​ಗೆ ಮಾಹಿತಿ ಕೊಡದೇ ಕೈಗೆ ಮುಲಾಮು ಹಚ್ಚಿಕೊಂಡ ಜಡೇಜಾಗೆ ಶೇ.25 ದಂಡ, ಒಂದು ಡಿಮೆರಿಟ್​ ಅಂಕ

ಆಸ್ಟ್ರೇಲಿಯಾ ಹಾಗೂ ಭಾರತ ಈಗ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿರುವ ತಂಡಗಳಾಗಿವೆ. ಫೈನಲ್​ ಪಂದ್ಯದಲ್ಲಿ ಆಡುವ ಅವಕಾಶ ಪಡೆಯಬೇಕಿದ್ದರೆ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆಯಬೇಕಾಗುತ್ತದೆ. ಆಸ್ಟ್ರೇಲಿಯಾ ತಂಡಕ್ಕೆ ಇನ್ನೊಂದು ಜಯ ಲಭಿಸಿದರೆ ಫೈನಲ್​ ಹಂತಕ್ಕೆ ತೇರ್ಗಡೆಯಾಗಲಿದೆ. ಈ ಗೆಲುವಿನ ಹೊರತಾಗಿಯೂ ಭಾರತ ಸರಣಿಯನ್ನು ವಶಪಡಿಸಿಕೊಳ್ಳುವ ಮೂಲಕ ಫೈನಲ್​ಗೆ ಅವಕಾಶ ಪಡೆಯಬೇಕಾಗಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಪಂದ್ಯ ಫೆಬ್ರವರಿ 17ರಂದು ನಡೆಯಲಿದೆ.

Exit mobile version