ಪುಣೆ : ಭಾರತ ಟಿ20 ಕ್ರಿಕೆಟ್ ತಂಡಕ್ಕೆ ಜನವರಿ 5ರಂದು ಮತ್ತೊಬ್ಬ ಆಟಗಾರ ಪದಾರ್ಪಣೆ ಮಾಡಿದ್ದಾರೆ. ರಾಂಚಿ ಮೂಲದ ಆಟಗಾರನಿಗೆ ಹಲವು ದಿನಗಳ ಕಾಯುವಿಕೆಯ ಬಳಿಕ ದೊರಕಿದ ಯಶಸ್ಸು ಇದು. ಈ ಮೂಲಕ ಪ್ರವಾಸಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮೂವರು ಆಟಗಾರರು ತಂಡಕ್ಕೆ ಪದಾರ್ಪಣೆ ಮಾಡಿದಂತಾಗಿದೆ. ಮೊದಲ ಪಂದ್ಯದಲ್ಲಿ ಶುಬ್ಮನ್ ಗಿಲ್ ಹಾಗೂ ಶಿವಂ ಮಾವಿ ಅವಕಾಶ ಪಡೆದುಕೊಂಡಿದ್ದರೆ, ಎರಡನೇ ಹಣಾಹಣಿಯಲ್ಲಿ ತ್ರಿಪಾಠಿ ಕಣಕ್ಕೆ ಅಡಿಯಟ್ಟಿದ್ದಾರೆ.
ರಾಂಚಿ ಮೂಲದ ಈ ಸ್ಫೋಟಕ ಬ್ಯಾಟರ್ಗೆ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಕ್ಯಾಪ್ ನೀಡಿದರು. ತ್ರಿಪಾಠಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಬೇಕು ಎಂಬ ಕೂಗು ಎರಡು ವರ್ಷದಿಂದ ಕೇಳಿ ಬಂದಿತ್ತು. ಇದೀಗ ಅವರಿಗೆ ಅವಕಾಶ ಲಭಿಸಿದೆ.
ಪದಾರ್ಪಣೆ ಮಾಡಿದ ತ್ರಿಪಾಠಿಗೆ 102ನೇ ಸಂಖ್ಯೆಯ ಕ್ಯಾಪ್ ನೀಡಲಾಯಿತು. ಅವರೀಗ ಭಾರತ ಟಿ20 ತಂಡದ ಪರವಾಗಿ ಅಡುತ್ತಿರುವ 102ನೇ ಆಟಗಾರ. ಮೊದಲ ಪಂದ್ಯದಲ್ಲಿ ಶಿವಂ ಮಾವಿ ಹಾಗೂ ಶುಬ್ಮನ್ ಗಿಲ್ ಪದಾರ್ಪಣೆ ಅವಕಾಶ ಪಡೆದುಕೊಂಡಿದ್ದರು. ಅವರಿಗೆ ಕ್ರಮವಾಗಿ 100 ಹಾಗಊ 101ನೇ ಸಂಖ್ಯೆಯ ಕ್ಯಾಪ್ ನೀಡಲಾಗಿತ್ತು.
ರಾಹುಲ್ ತ್ರಿಪಾಠಿ 74 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದು, 1798 ರನ್ ಬಾರಿಸಿದ್ದಾರೆ. ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಅತಿ ವೇಗದಲ್ಲಿ ರನ್ ಗಳಿಸುವ ಸಾಮರ್ಥ್ಯದ ಮೂಲಕ ಅವರು ಹಿರಿಯ ಆಟಗಾರರ ಗಮನ ಸೆಳೆದಿದ್ದರು.
ಇದನ್ನೂ ಓದಿ | IndvsSL | ಲಂಕಾ ವಿರುದ್ಧ ಆಡಿದ ಶಿವಂ ಮಾವಿಗೆ ಯಾಕೆ 100ನೇ ಸಂಖ್ಯೆಯ ಕ್ಯಾಪ್, ಗಿಲ್ಗೆ ಯಾಕೆ 101?