ದುಬೈ: ಇಂಗ್ಲೆಂಡ್ ಪ್ರವಾಸದ ಏಕದಿನ ಸರಣಿಯಲ್ಲಿ ಸ್ಫೋಟಕ ಶತಕ (೧೪೩*) ಬಾರಿಸಿದ್ದ ಭಾರತ ಮಹಿಳೆಯರ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಹೊಸದಾಗಿ ಬಿಡುಗಡೆಯಾಗಿರುವ ಐಸಿಸಿ ಏಕ ದಿನ ಪಂದ್ಯಗಳ Rank ಪಟ್ಟಿಯಲ್ಲಿ ನಾಲ್ಕು ಸ್ಥಾನ ಬಡ್ತಿ ಪಡೆದುಕೊಂಡು ಐದನೇ ಸ್ಥಾನಕ್ಕೇರಿದ್ದಾರೆ.
ಹರ್ಮನ್ ಅವರು ಎರಡನೇ ಪಂದ್ಯದಲ್ಲಿ ೧೧೧ ಎಸೆತಗಳಲ್ಲಿ ೧೪೩ ರನ್ ಬಾರಿಸುವ ಮೂಲಕ ಆ ಪಂದ್ಯದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಅಂತೆಯೇ ಮೂರು ಪಂದ್ಯಗಳ ಸರಣಿಯನ್ನ ಭಾರತ ತಂಡ ೩-೦ ಅಂತರದಿಂದ ವಶಪಡಿಸಿಕೊಂಡಿತ್ತು. ಈ ಸಾಧನೆಯ ಹಿನ್ನೆಲೆಯಲ್ಲಿ ಅವರು ನಾಲ್ಕು ಸ್ಥಾನ ಜಿಗಿತ ಕಂಡಿದ್ದಾರೆ.
ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ ಹಾಗೂ ಆಲ್‌ರೌಂಡರ್ ದೀಪ್ತಿ ಶರ್ಮ ಕೂಡ ನೂತನ ಪಟ್ಟಿಯಲ್ಲಿ ಬಡ್ತಿ ಪಡೆದುಕೊಂಡಿದ್ದಾರೆ. ಸ್ಮೃತಿ ಒಂದು ಸ್ಥಾನ ಏರಿಕೆಯೊಂದಿಗೆ ಆರನೇ ಸ್ಥಾನ ಪಡೆದುಕೊಂಡರೆ, ದೀಪ್ತಿ ಶರ್ಮ ಕೊನೇ ಪಂದ್ಯದಲ್ಲಿ ಅಜೇಯ ೬೮ ರನ್ ಬಾರಿಸಿ ಸಾಧನೆ ಮಾಡಿದ್ದರಲ್ಲದೆ, ಎಂಟು ಸ್ಥಾನ ಬಡ್ತಿ ಗಿಟ್ಟಿಸಿ ೨೪ನೇ ಸ್ಥಾನಕ್ಕೇರಿದ್ದಾರೆ.
ಪೂಜಾ ವಸ್ತ್ರಕಾರ್ ನಾಲ್ಕು ಸ್ಥಾನ ಬಡ್ತಿ ಪಡೆದು ೪೯ಕ್ಕೆ ಏರಿದರೆ, ಹರ್ಲಿನ್ ದೇವಲ್ ೪೬ ಸ್ಥಾನ ಜಿಗಿತ ಕಂಡು ೮೧ರಲ್ಲಿ ಸ್ಥಾಪಿತರಾಗಿದ್ದಾರೆ. ಇದೇ ವೇಳೆ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ವೇಗಿ ರೇಣುಕಾ ಸಿಂಗ್ ೩೫ ಸ್ಥಾನ ಬಡ್ತಿ ಪಡೆದುಕೊಂಡು ೩೫ನೇ ಸ್ಥಾನಕ್ಕೇರಿದ್ದಾರೆ.
ಇದನ್ನೂ ಓದಿ | Team India | ಟೀಮ್ ಇಂಡಿಯಾ ಬಸ್‌ಗೆ ಮುತ್ತಿಗೆ ಹಾಕಿದ ಅಭಿಮಾನಿಗಳ ಗುಂಪು, ಅವರ ಆಗ್ರಹವೇನು?