Site icon Vistara News

WTC Points Table: ಪಾಕ್​ಗೆ ಹೀನಾಯ ಸೋಲು; ಅಗ್ರಸ್ಥಾನಕ್ಕೇರಿದ ಭಾರತ

team india test

ದುಬೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ತಂಡ 360 ರನ್​ಗಳ ಹೀನಾಯ ಸೋಲು ಕಂಡಿದೆ. ಪಾಕ್​ನ ಈ ಸೋಲು ಟೀಮ್​ ಇಂಡಿಯಾಕ್ಕೆ(team india) ಪ್ಲಸ್​ ಆಗಿದೆ. ಹೌದು, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ(WTC Points Table) ಭಾರತ ತಂಡಕ್ಕೆ ಇದು ವರದಾನವಾಗಿದ್ದು ಅಗ್ರಸ್ಥಾನಕ್ಕೇರುವಂತೆ ಮಾಡಿದೆ.

ಪರ್ತ್​ನಲ್ಲಿ ಭಾನುವಾರ ಮುಕ್ತಾಯ ಕಂಡ ಟೆಸ್ಟ್​ ಪಂದ್ಯದಲ್ಲಿ ಪಾಕಿಸ್ತಾನ ತಂಡ ಎರಡೂ ಇನಿಂಗ್ಸ್​ನಲ್ಲಿಯೂ ಕಳಪೆ ಬ್ಯಾಟಿಂಗ್​ ಪ್ರದರ್ಶಿಸುವ ಮೂಲಕ ಹೀನಾಯ ಸೋಲಿಗೆ ತುತ್ತಾಯಿತು. ಪಾಕ್​ ಸೋಲುತ್ತಿದ್ದಂತೆ ಇದರ ಲಾಭ ಭಾರತ ತಂಡಕ್ಕೆ ಲಭಿಸಿದೆ. ಸದ್ಯ ಭಾರತ ಮತ್ತು ಪಾಕ್​ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಪಾಯಿಂಟ್ಸ್​ ಟೇಬಲ್​ನಲ್ಲಿ 66.67 ಗೆಲುವಿನ ಶೇಕಡಾವಾರು ಅಂಕ ಹೊಂದಿದೆ. ಪಂದ್ಯಗಳ ಲೆಕ್ಕಾಚಾರದಲ್ಲಿ ಭಾರತಕ್ಕೆ ಅಗ್ರಸ್ಥಾನ ಸಿಕ್ಕಿದೆ.

ಭಾರತ ತಂಡ ಇದೇ ತಿಂಗಳಾಂತ್ಯಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲಿದೆ ಈ ಸರಣಿಯನ್ನು ಭಾರತ ಗೆದ್ದರೆ ಅಂಕಗಳ ಏರಿಕೆಯೊಂದಿಗೆ ಅಗ್ರಸ್ಥಾನ ಮತ್ತಷ್ಟು ಗಟ್ಟಿಗೊಳ್ಳಲಿದೆ. ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಆಡುವ ಮೊದಲು ಅಗ್ರಸ್ಥಾನ ಪಡೆದಿತ್ತು. ಭಾರತ 2ನೇ ಸ್ಥಾನದಲ್ಲಿತ್ತು. ಒಂದೊಮ್ಮೆ ಪಾಕಿಸ್ತಾನ ಮುಂದಿನ ಪಂದ್ಯದಲ್ಲಿ ಆಸೀಸ್​ ವಿರುದ್ಧ ಗೆದ್ದರೆ ಮತ್ತ ಅಗ್ರಸ್ಥಾನಕ್ಕೇರುವ ಅವಕಾಶವಿದೆ.

ಅಂಕಪಟ್ಟಿ ಹೀಗಿದೆ

ICC World Test Championship Points Table

ಆಸ್ಟ್ರೇಲಿಯಾ ಗೆದ್ದರೆ?

ಸದ್ಯ 41.67 ಗೆಲುವಿನ ಶೇಕಡಾವಾರು ಅಂಕದೊಂದಿಗೆ 5ನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧ ಎಲ್ಲ ಟೆಸ್ಟ್​ ಗೆದ್ದು ಸರಣಿ ಗೆದ್ದರೆ, ಕಮಿನ್ಸ್​ ಪಡೆಯೂ ಈ ಪಟ್ಟಿಯಲ್ಲಿ ಮೇಲೇರಬಹುದು. ಅಗ್ರಸ್ಥಾನಕ್ಕೇರದಿದ್ದರೂ ಕನಿಷ್ಠ 2ನೇ ಸ್ಥಾನಕ್ಕಾದರೂ ಬರಬಹುದು. ಆದರೆ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋತರೆ ಆಗ ಆಸೀಸ್​ಗೆ ಅಗ್ರಸ್ಥಾನ ಪಡೆಯುವ ಅವಕಾಶವಿದೆ. ಸೋಲಿನಿಂದಾಗಿ ಭಾರತದ ಗೆಲುವಿನ ಶೇಕಡಾವಾರು ಅಂಕ ಕುಸಿಯುತ್ತದೆ.

ಇದನ್ನೂ ಓದಿ IPL Auction 2024: ಐಪಿಎಲ್​ ಹರಾಜಿನಲ್ಲಿರುವ ಕರ್ನಾಟಕದ ಕಲಿಗಳು ಇವರು…

ದಾಖಲೆ ಬರೆದ ನಾಥನ್ ಲಿಯಾನ್

ಪಾಕ್​ ವಿರುದ್ಧದ ಈ ಪಂದ್ಯದಲ್ಲಿ ದೀರ್ಘಕಾಲ ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ನಾಥನ್ ಲಿಯಾನ್ ಅವರು ಮತ್ತೆ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡುವ ಜತೆಗೆ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಫಹೀಮ್ ಅಶ್ರಫ್ ಅವರನ್ನು ಔಟ್ ಮಾಡುವ ಮೂಲಕ ಲಿಯಾನ್ ತಮ್ಮ ವೃತ್ತಿಜೀವನದ 500 ನೇ ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 36 ವರ್ಷದ ಅನುಭವಿ ಬೌಲರ್​ ಲಿಯಾನ್ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಮೂರನೇ ಬೌಲರ್​ ಎನಿಸಿಕೊಂಡರು. ಉಳಿದ ಇಬ್ಬರೆಂದರೆ ಶೇನ್ ವಾರ್ನ್ (708) ಮತ್ತು ಗ್ಲೆನ್ ಮೆಕ್‌ಗ್ರಾತ್ (563).

Exit mobile version