Site icon Vistara News

Chetan Sharma: ಗಂಗೂಲಿ ಬಗ್ಗೆ ವಿರಾಟ್​ ಕೊಹ್ಲಿ ಹೇಳಿದ್ದು ಸುಳ್ಳು; ಚೇತನ್​ ಶರ್ಮಾ

Chetan Sharma

#image_title

ಮುಂಬಯಿ: ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ (Chetan Sharma) ನೀಡಿರುವ ಹೇಳಿಕೆಗಳು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ವಿರಾಟ್​ ಕೊಹ್ಲಿ(virat kohli) ನಾಯಕತ್ವವನ್ನು ತೊರೆದ ಸಂದರ್ಭದಲ್ಲಿ ಆಗಿನ ಬಿಸಿಸಿಐ(BCCI) ಅಧ್ಯಕ್ಷ ಸೌರವ್​ ಗಂಗೂಲಿ(sourav ganguly) ವಿರುದ್ಧ ಸುಳ್ಳು ಹೇಳಿದ ಆರೋಪ ಮಾಡಿದ್ದರು ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ಕುಟುಕು ಕಾರ್ಯಾಚರಣೆಯಲ್ಲಿ ಚೇತನ್​ ಶರ್ಮ ಹಲವು ಸ್ಫೋಟಕ ಮಾಹಿತಿ ಹೊರಹಾಕಿದ್ದು ಇದರಲ್ಲಿ ಗಂಗೂಲಿ ಮತ್ತು ವಿರಾಟ್​ ಕೊಹ್ಲಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

2021ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್​ಗೆ ಮುನ್ನವೇ ಕೊಹ್ಲಿ ಟೂರ್ನಿಯ ಬಳಿಕ ಟಿ20 ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದರು. ಆ ಸಂದರ್ಭದಲ್ಲಿ ‘ನಾಯಕತ್ವ ತೊರೆಯಬೇಡಿ, ಇನ್ನೊಮ್ಮೆ ಯೋಚಿಸಿ’ ಎಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್​ ಗಂಗೂಲಿ ಕೊಹ್ಲಿಗೆ ಸೂಚಿಸಿದ್ದರು ಎಂದು ಚೇತನ್​ ಶರ್ಮ ಹೇಳಿದ್ದಾರೆ.

ಟೀಮ್​ ಇಂಡಿಯಾದ ಏಕ ದಿನ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸುವ ನಿರ್ಧಾರವನ್ನು ಮುಖ್ಯ ಆಯ್ಕೆಗಾರನಾಗಿ ನಾನು ತೆಗೆದುಕೊಂಡಿದ್ದೇನೆ. ಟೆಸ್ಟ್​ ಮತ್ತು ಏಕ ದಿನ ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಿಸಬೇಕು ಎಂಬ ಉದ್ದೇಶವೇ ಕಾರಣ. ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ಗಂಗೂಲಿ ಕಾರಣರಲ್ಲ, ಅವರು ಯಾವತ್ತೂ ಅದನ್ನು ಬಯಸಿರಲಿಲ್ಲ ಎಂದು ಚೇತನ್​ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ Chetan Sharma: ಫಿಟ್​ನೆಸ್​ಗಾಗಿ ಟೀಮ್​ ಇಂಡಿಯಾ ಆಟಗಾರರು ಇಂಜೆಕ್ಷನ್ ಬಳಸುತ್ತಾರೆ; ಚೇತನ್​ ಶರ್ಮಾ

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ, ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ಮುಂಚಿತವಾಗಿ ತಿಳಿಸದೆ ಬಿಸಿಸಿಐ ಸುಳ್ಳು ಹೇಳಿದೆ ಎಂದು ಆರೋಪಿಸಿದ್ದರು. ಅಂದು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಸೌರವ್ ಗಂಗೂಲಿ ಸ್ಪಷ್ಟವಾಗಿ ಹೇಳಿದ್ದರು. ಆದರೆ ಅದು ವಿರಾಟ್ ಕೊಹ್ಲಿಗೆ ಕೇಳಿಸಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅಲ್ಲಿ ಒಬ್ಬರಲ್ಲ ಒಂಬತ್ತು ಜನರು ಕುಳಿತಿದ್ದರು. ಎಲ್ಲ ಆಯ್ಕೆದಾರರು ಮತ್ತು ಮಂಡಳಿಯ ಸದಸ್ಯರು ಚರ್ಚೆ ನಡೆಸುತ್ತಿದ್ದರು. ಹೀಗಾಗಿ ಈ ವಿಚಾರ ಒಂದೊಮ್ಮೆ ವಿರಾಟ್​ಗೆ ಕೇಳಿಸಿರುವ ಸಾಧ್ಯತೆ ಕಡಿಮೆ, ಇಲ್ಲವಾದರೆ ಕೊಹ್ಲಿ ಕೇಳುವ ಗೋಜಿಗೆ ಹೋಗಿರಲ್ಲ. ಆದರೆ ಕೊಹ್ಲಿಗೆ ಈ ವಿಚಾರವನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅವರು ಗಂಗೂಲಿ ವಿರುದ್ಧ ಮಾಡಿದ ಆರೋಪ ಮಾತ್ರ ಸುಳ್ಳು ಎಂದು ಚೇತನ್ ಶರ್ಮ​ ಸ್ಪಷ್ಟಪಡಿಸಿದ್ದಾರೆ.

Exit mobile version