ಮುಂಬಯಿ: ಭಾರತದ ಕ್ರಿಕೆಟ್ ತಂಡದ (Team India) ಮಾಜಿ ವೇಗಿ ಅಜಿತ್ ಅಗರ್ಕರ್ (Ajit Agarkar) ಅವರು ಬಿಸಿಸಿಐನ ಪುರುಷರ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಂಗಳವಾರ ನೇಮಕಗೊಂಡಿದ್ದಾರೆ. ಆದರೆ ಇದೀಗ ಅವರ ವಾರ್ಷಿಕ ಸಂಬಳ(ajit agarkar salary) ಕೇಳಿ ಕೆಲವರಿಗೆ ಅಚ್ಚರಿ ಉಂಟಾಗಿದೆ.
ಅಗರ್ಕರ್ಗೆ ವಾರ್ಷಿಕವಾಗಿ 3 ಕೋಟಿ ರೂ. ವೇತನವನ್ನ ನೀಡಲು ಬಿಸಿಸಿಐ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಆಯ್ಕೆ ಸಮಿತಿ ಮುಖ್ಯಸ್ಥರಿಗೆ ವಾರ್ಷಿಕವಾಗಿ 1 ಕೋಟಿ ರೂ. ವೇತನವನ್ನು ನೀಡಲಾಗ್ತಿತ್ತು. ಆದರೀಗ ಇದನ್ನು ಹೆಚ್ಚಿಸಿಲಾಗಿದ್ದು ಅಗರ್ಕರ್ ಅವರಿಗೆ 3 ಕೋಟಿ ಸಂಬಳ ನೀಡಲು ಮುಂದಾಗಿದೆ. ಅಂದರೆ ಅವರ ತಿಂಗಳ ಸಂಬಳ 25 ಲಕ್ಷ ರೂ. ಆಗಿದೆ.
ಟಿವಿ ಚಾನೆಲ್ ಒಂದರ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತ ಕ್ರಿಕೆಟ್ ತಂಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಚೇತನ್ ಶರ್ಮಾ (Chetan Sharma) ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಹೀಗಾಗಿ ಕಳೆದ 5 ತಿಂಗಳಿನಿಂದ ಈ ಹುದ್ದೆ ಖಾಲಿ ಇತ್ತು. ಇದೀಗ ಈ ಹುದ್ದೆಗೆ ಅಗರ್ಕರ್ ಅವರು ನೇಮಕಗೊಂಡಿದ್ದಾರೆ. ಆದರೆ ಅವರ ಮುಂದೆ ಸಾಲು ಸಾಲು ಸವಾಲುಗಳಿವೆ. ಏಷ್ಯಾಕಪ್, ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ರೋಹಿತ್ ಬಳಿಕ ತಂಡಕ್ಕೆ ಸೂಕ್ತ ನಾಯಕನ ಆಯ್ಕೆ ಹೀಗೆ ಹಲವು ಸವಾಲಿನ ಪಟ್ಟಿಯೇ ಇವೆ. ವೆಸ್ಟ್ ಇಂಡೀಸ್ ವಿರುದ್ಧದ ಐದು ಟಿ 20 ಪಂದ್ಯಗಳಿಗೆ ಭಾರತದ ತಂಡವನ್ನು ಘೋಷಿಸುವುದು ಅವರ ಮೊದಲ ಕಾರ್ಯವಾಗಲಿದೆ.
ಇದನ್ನೂ ಓದಿ IND vs WI: ದಿಗ್ಗಜ ಸರ್ ಗ್ಯಾರಿ ಸೋಬರ್ಸ್ ಭೇಟಿಯಾದ ಟೀಮ್ ಇಂಡಿಯಾ ಆಟಗಾರರು
🚨 NEWS 🚨: Ajit Agarkar appointed Chairman of Senior Men’s Selection Committee.
— BCCI (@BCCI) July 4, 2023
Details 🔽https://t.co/paprb6eyJC
ಒಂಬತ್ತು ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ 349 ಅಂತರರಾಷ್ಟ್ರೀಯ ವಿಕೆಟ್ ಪಡೆದಿರುವ ಅಗರ್ಕರ್, ಈ ಹಿಂದೆ ಸೀಮಿತ ಅವಧಿಯ ಕ್ರಿಕೆಟ್ ಆಡಳಿತ ಹುದ್ದೆಯ ಅನುಭವ ಹೊಂದಿದ್ದಾರೆ.. 2017 ರಿಂದ 2019 ರವರೆಗೆ, ಅಗರ್ಕರ್ ಮುಂಬೈ ತಂಡದ ಆಯ್ಕೆದಾರರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅದೇ ರೀತಿ ಕೋಚ್ ರಿಕಿ ಪಾಂಟಿಂಗ್ ಮತ್ತು ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಅವರೊಂದಿಗೆ ಡೆಲ್ಲಿ ಕ್ಯಾಪಿಟಲ್ಟ್ನ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡಿದ್ದರು. ಭಾರತ ತಂಡದ ಪರ 191 ಏಕದಿನ ಮತ್ತು 26 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2003 ರಲ್ಲಿ ಅಡಿಲೇಡ್ನಲ್ಲಿ ಆಸೀಸ್ ವಿರುದ್ಧ ಭಾರತದ ಪ್ರಸಿದ್ಧ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಅವರು 41 ರನ್ಗಳಿಗೆ 6 ವಿಕೆಟ್ ಉರುಳಿಸಿದ್ದರು.