ಹೊವೆ (ಲಂಡನ್) : ಭಾರತ ಮಹಿಳೆಯರ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನಾ ಅವರು ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಏಕ ದಿನ ಪಂದ್ಯದಲ್ಲಿ ಪಡೆದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಆಟಗಾರ್ತಿ ಜೂಲಾನ್ ಗೋಸ್ವಾಮಿ ಅವರಿಗೆ ಅರ್ಪಿಸಿದ್ದಾರೆ. ಯಾಕೆಂದರೆ ಹಿರಿಯ ವೇಗದ ಬೌಲರ್‌ಗೆ ವೃತ್ತಿ ಕ್ರಿಕೆಟ್‌ನ ಕೊನೆ ಸರಣಿಯ ಇದಾಗಿದ್ದು ಅದಕ್ಕಾಗಿ ತಮ್ಮ ಸಾಧನೆಯನ್ನೂ ಅವರಿಗೆ ಆಟಗಾರ್ತಿಗೆ ಅರ್ಪಿಸಿದ್ದಾರೆ ಎಡಗೈ ಬ್ಯಾಟರ್.
ಪ್ರವಾಸಿ ಭಾರತ ತಂಡ ಹಾಗೂ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕ ದಿನ ಸರಣಿಯ ಮೊದಲ ಪಂದ್ಯ ಭಾನುವಾರ ನಡೆದಿದೆ. ಅದರಲ್ಲಿ ಭಾರತದ ಮಹಿಳೆಯರು ಏಳು ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ್ದಾರೆ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ ೫೦ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ೨೨೭ ರನ್ ಬಾರಿಸಿತು. ಗುರಿ ಬೆನ್ನಟ್ಟಿದ್ದ ಭಾರತ ಪರ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನಾ ೯೧ ರನ್ ಬಾರಿಸಿದ್ದರು. ಅವರ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ತಮಗೆ ಸಿಕ್ಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯಲು ಹೋದ ಸ್ಮೃತಿ ಅವರು ಅದನ್ನು ಜೂಲಾನ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ. ಅಂತೆಯೇ ಈ ಸರಣಿಯಲ್ಲಿ ಏನೇ ಸಾಧನೆ ಮಾಡಿದ್ದರೂ ಅದು ಗೋಸ್ವಾಮಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
೩೯ ವರ್ಷದ ಜೂಲಾನ್ ಗೋಸ್ವಾಮಿ ಅವರು ವೃತ್ತಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿ ಅವರ ಕೊನೇ ಹಣಾಹಣಿಯಾಗಿದೆ. ಹೀಗಾಗಿ ಅವರು ಮಹಿಳೆಯರ ತಂಡದ ಸದಸ್ಯರು ಅವರ ಸಾಧನೆಯನ್ನು ಸ್ಮರಿಸುತ್ತಿದ್ದಾರೆ.
ಇದನ್ನೂ ಓದಿ | Team India | ಇಂಗ್ಲೆಂಡ್ ತಂಡದ ವಿರುದ್ಧ ಭಾರತೀಯ ಮಹಿಳೆಯರಿಗೆ 7 ವಿಕೆಟ್ ಜಯ