ಲಂಡನ್: ಓವಲ್ನಲ್ಲಿ ಭಾನುವಾರ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ (WTC Final 2023) ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾವನ್ನು 209 ರನ್ಗಳಿಂದ ಸೋಲಿಸುವ ಮೂಲಕ ಭಾರತ ತಂಡದ ಅಭಿಮಾನಿಗಳ ನಿರೀಕ್ಷೆಗಳನ್ನು ಭಗ್ನಗೊಳಿಸಿದೆ. ಕೊನೇ ದಿನದ ಆಟದಲ್ಲಿ ಏಳು ವಿಕೆಟ್ಗಳಿದ್ದು. ಗೆಲ್ಲಲು 280 ರನ್ಗಳ ಅಗತ್ಯವಿದ್ದ್ ಸಂದರ್ಭದಲ್ಲಿ ಒತ್ತಡಕ್ಕೆ ಬಿದ್ದ ಭಾರತ ತಂಡದ ಆಟಗಾರರು ಸತತವಾಗಿ ವಿಕೆಟ್ ಒಪ್ಪಿಸಿ 234 ರನ್ಗಳಿಗೆ ಆಲ್ಔಟ್ ಆಯಿತು. ಈ ಸೋಲಿನ ಮೂಲಕ ಭಾರತ ತಂಡ ಸತತವಾಗಿ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೇರಿ ರನ್ನರ್ ಅಪ್ ಪ್ರಶಸ್ತಿಗೆ ಮೀಸಲಾಯಿತು. ಅತ್ತ ಆಸ್ಟ್ರೇಲಿಯಾ ತಂಡ ಚೊಚ್ಚಲ ಪ್ರವೇಶದಲ್ಲಿಯೇ ಪ್ರಶಸ್ತಿ ಗೆದ್ದಿತು.
#Yellove seems to be the order of the Summer! Congratulations Australia! 💛#WTCFinal #Whistle4Blue
— Chennai Super Kings (@ChennaiIPL) June 11, 2023
📸: Getty pic.twitter.com/xuUs3NFgFw
ಈ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾ ತಂಡ 1.6 ಮಿಲಿಯನ್ ಡಾಲರ್ (13.2 ಕೋಟಿ ರೂಪಾಯಿ) ಬಹುಮಾನದ ಮೊತ್ತವನ್ನು ಪಡೆದುಕೊಂಡಿತು ರನ್ನರ್ ಅಪ್ ಭಾರತ 800,000 ಡಾಲರ್ (6.5 ಕೋಟಿ ರೂ.) ಬಹುಮಾನದ ಮೊತ್ತವನ್ನು ಪಡೆಯಿತು. ಈ ಮೂಲಕ ರೋಹಿತ್ ಬಳಗ ಸೋಲಿನ ಬಳಿಕವೂ ದೊಡ್ಡ ಮೊತ್ತವನ್ನು ಜೇಬಿಗಿಳಿಸಿತು. ಮೂರನೇ ಸ್ಥಾನ ಪಡೆದ ದಕ್ಷಿಣ ಆಫ್ರಿಕಾ 450,000 ಡಾಲರ್ (3.72 ಕೋಟಿ ರೂ.) ಬಹುಮಾನದ ಮೊತ್ತವನ್ನು ಗೆದ್ದುಕೊಂಡಿತು.
ಎಲ್ಲಾ ಒಂಬತ್ತು ಟೆಸ್ಟ್ ಆಡುವ ತಂಡಗಳು 3.8 ಮಿಲಿಯನ್ ಡಾಲರ್ (31 ಕೋಟಿ ರೂಪಾಯಿ) ಮೊತ್ತದಲ್ಲಿ ಪಾಲನ್ನು ಪಡೆದುಕೊಂಡಿತು. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಇಂಗ್ಲೆಂಡ್ 350,000 ಡಾಲರ್ (2.89 ಕೋಟಿ ರೂ.) ಬಹುಮಾನ ಮೊತ್ತವನ್ನು ಗೆದ್ದರೆ, ಐದನೇ ಸ್ಥಾನದಲ್ಲಿದ್ದ ಶ್ರೀಲಂಕಾ 200,000 ಡಾಲರ್ (1.65 ಕೋಟಿ ರೂ.) ಗೆದ್ದಿತು. ನ್ಯೂಜಿಲೆಂಡ್ (ಆರನೇ ಸ್ಥಾನ), ಪಾಕಿಸ್ತಾನ (ಏಳನೇ ಸ್ಥಾನ), ವೆಸ್ಟ್ ಇಂಡೀಸ್ (ಎಂಟನೇ ಸ್ಥಾನ) ಮತ್ತು ಬಾಂಗ್ಲಾದೇಶ (ಒಂಬತ್ತನೇ ಸ್ಥಾನ) ತಲಾ 100,000 ಡಾಲರ್ (82 ಲಕ್ಷ ರೂಪಾಯಿ) ಬಹುಮಾನ ಮೊತ್ತವನ್ನು ಪಡೆದುಕೊಂಡಿತು.
ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಇದು 2019 ರಿಂದ 2021 ರವರೆಗೆ ನಡೆಯಿತು) ಟ್ರೋಫಿ ಗೆದ್ದ ನ್ಯೂಜಿಲೆಂಡ್ ಹಾಲಿ ಆವೃತ್ತಿಯಷ್ಟೇ ಮೊತ್ತವನ್ನು ಪಡೆದುಕೊಂಡಿತ್ತು. ಹೀಗಾಗಿ ಬಹುಮಾನ ಮೊತ್ತದಲ್ಲಿ ಐಸಿಸಿ ಯಾವುದೇ ಬದಲಾವಣೆ ಮಾಡಿಲ್ಲ. ಆ ಆವೃತ್ತಿಯಲ್ಲೂ ಭಾರತ ತಂಡದ ರನ್ನರ್ಅಪ್ ಪ್ರಶಸ್ತಿ ಪಡೆದುಕೊಂಡಿತ್ತು.
ಏತನ್ಮಧ್ಯೆ, ಚಾಂಪಿಯನ್ಷಿಪ್ ಟ್ರೋಫಿ ಗೆಲ್ಲುವುದಕ್ಕೆ ಭಾರತಕ್ಕೆ 444 ರನ್ಗಳ ಬೃಹತ್ ಗುರಿ ಎದುರಾಗಿತ್ತು. ಭಾನುವಾರ 5ನೇ ದಿನವನ್ನು 3 ವಿಕೆಟ್ ನಷ್ಟಕ್ಕೆ 164 ರನ್ಗಳೊಂದಿಗೆ ಆರಂಭಿಸಿತ್ತು. ಆದರೆ, ಯಾವುದೇ ಬ್ಯಾಟ್ಸ್ಮನ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದ ಕಾರಣ 234 ರನ್ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ನೇಥನ್ ಲಿಯಾನ್ 41 ರನ್ ನೀಡಿ 4 ವಿಕೆಟ್ ಪಡೆದರೆ, ಸ್ಕಾಟ್ ಬೋಲ್ಯಾಂಡ್ 46 ರನ್ ನೀಡಿ 3 ವಿಕೆಟ್ ಪಡೆದರು.