Site icon Vistara News

Virat kohli : ಶೋಯೆಬ್​ ಅಖ್ತರ್ ಅಂದ್ರೆ ಕೊಹ್ಲಿಗೂ ಭಯವಿತ್ತಾ? ವಿರಾಟ್​ ಮಾತಿನ ಅರ್ಥವೇನು?

Virat kohli

ವಿಸ್ತಾರನ್ಯೂಸ್ ಬೆಂಗಳೂರು: ವಿಶ್ವದ ಅತ್ಯಂತ ವೇಗದ ಬೌಲರ್​ ಶೋಯೆಬ್​ ಅಖ್ತರ್ ಆಡುತ್ತಿದ್ದ ಕಾಲದಲ್ಲಿ ಬ್ಯಾಟರ್​ಗಳ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು. ಅವರ ಬೌಲಿಂಗ್ ವೇಗಕ್ಕೆ ಪ್ರತ್ಯುತ್ತರ ಕೊಡುತ್ತಿದ್ದದ್ದು ಸಚಿನ್ ಮತ್ತು ದ್ರಾವಿಡ್​ ಮಾತ್ರ. ಆದಾಗ್ಯೂ ನಾನಾ ದೇಶಗಳ ಬ್ಯಾಟರ್​ಗಳು ಅಖ್ತರ್​ ಎದುರಿಸಲು ಆಗುತ್ತಿದ್ದ ಕಷ್ಟವನ್ನು ಅಗಾಗ್ಗೆ ಹೇಳುತ್ತಿದ್ದಾರೆ. ಅಂತೆಯೇ ಈಗ ಬ್ಯಾಟಿಂಗ್ ದಂತಕತೆ ಎನಿಸಿಕೊಂಡಿರುವ ವಿರಾಟ್​ ಕೊಹ್ಲಿಯೂ ಅಖ್ತರ್ ಎದುರಿಸಲು ತಮಗಿದ್ದ ಕಷ್ಟವನ್ನು ಹೇಳಿಕೊಂಡಿದ್ದಾರೆ.

‘ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್’ ಕಾರ್ಯಕ್ರಮದಲ್ಲಿ ನಿರೂಪಕ ಗೌರವ್ ಕಪೂರ್ ಅವರೊಂದಿಗಿನ ಈ ಹಿಂದಿನ ಮಾತುಕತೆ ವೇಳೆ ವಿರಾಟ್ ಕೊಹ್ಲಿ ಈ ಮಾತನ್ನು ಹೇಳಿಕೊಂಡಿದ್ದರು. ಅದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮಾತುಕತೆಯ ತೆಳು ಹಾಸ್ಯ ಹಾಗೂ ವೈಫಲ್ಯದ ಕಡೆಗೆ ಹೆಚ್ಚು ಸಾಗಿತ್ತು. ಮೈದಾನದಲ್ಲಿ ಆಕ್ರಮಣಕಾರಿಯಾಗಿ ಕಾಣಿಸುತ್ತಿದ್ದ ವಿರಾಟ್​ ಕೊಹ್ಲಿಯು ಈ ಮಾತುಕತೆಯ ವೇಳೆ ಹೆಚ್ಚು ಸೌಮ್ಯವಾಗಿ ಕಾಣುತ್ತಿದ್ದರು. ಒಂದು ಹಂತದಲ್ಲಿ ಕೊಹ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದುರಿಸಿದ ಇಬ್ಬರು ಕಠಿಣ ವೇಗದ ಬೌಲರ್​ಗಳ ಬಗ್ಗೆಯೂ ಮಾತನಾಡಿದ್ದಾರೆ. ಅವರೇ ಪಾಕಿಸ್ತಾನದ ಇಬ್ಬರು ಬೌಲರ್​ಗಳು. ಅಸಾಧಾರಣ ಎತ್ತರವಾದ ಎತ್ತರದ ಮೊಹಮ್ಮದ್ ಇರ್ಫಾನ್ ಹಾಗೂ ‘ರಾವಲ್ಪಿಂಡಿ ಎಕ್ಸ್​ಪ್ರೆಸ್​ ಶೋಯೆಬ್ ಅಖ್ತರ್..

ಪಾಕಿಸ್ತಾನದ ಮಾಜಿ ವೇಗದ ಬೌಲರ್​​ ಅಖ್ತರ್ ಬಗ್ಗೆ ಮಾತನಾಡಿದ ಕೊಹ್ಲಿ, ಶ್ರೀಲಂಕಾದಲ್ಲಿ ನಡೆದ 2010ರ ಏಷ್ಯಾ ಕಪ್​ನ ತಮ್ಮ ವೃತ್ತಿಜೀವನದ ಕೊನೆಯಲ್ಲಿ ಎಕ್ಸ್​ಪ್ರೆಸ್​ ವೇಗಿಯನ್ನು ನೋಡಿದ್ದರು. ಈ ವೇಳೆ ಅಖ್ತರ್​​ ನಿವೃತ್ತಿಯ ಅಂಚಿನಲ್ಲಿದ್ದರು. ಆದಾಗ್ಯೂ ಅವರ ಬೌಲಿಂಗ್ ಎದುರಿಸುವುದು ಸುಲಭವಾಗಿರಲಿಲ್ಲ ಎಂದು ಹೇಳಿದ್ದಾರೆ.

ಡಂಬುಲ್ಲಾದಲ್ಲಿ ನಡೆದ ಗ್ರೂಪ್ ಹಂತದ ಮುಖಾಮುಖಿಯಲ್ಲಿ ಬೇಗನೆ ಔಟ್ ಆದ ಕೊಹ್ಲಿ ಭಾರತೀಯ ಡ್ರೆಸ್ಸಿಂಗ್ ರೂಮ್​ನಿಂದ ಅಖ್ತರ್ ಬೌಲಿಂಗ್ ಮಾಡುವುದನ್ನು ನೋಡಿದ್ದರು. ಈ ವೇಳೆ ಅವರು ಅವರ ಬೌಲಿಂಗ್ ನ ವೇಗದ ಬಗ್ಗೆ ತಿಳಿದುಕೊಂಡಿದ್ದರು. ಅಲ್ಲದೆ ಅದು ಅಸಾಮಾನ್ಯ ಬೌಲಿಂಗ್ ಎಂದುಕೊಂಡಿದ್ದರು.

ಏನಂದರು ಕೊಹ್ಲಿ

ನಾನು ಶೋಯೆಬ್ ಅಖ್ತರ್ ಅವರನ್ನು ಎದುರಿಸಲಿಲ್ಲ. ಪಾಕಿಸ್ತಾನ ವಿರುದ್ಧ ಡಂಬುಲ್ಲಾದಲ್ಲಿ ನಡೆದ ಪಂದ್ಯದಲ್ಲಿ ನಾನು ಅವರನ್ನು ನೋಡಿದ್ದೇನೆ ಎಂದು ಕೊಹ್ಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. “ನಾನು ಬೇಗನೆ ಔಟಾದೆ. ಹೀಗಾಗಿ ಅವರನ್ನು ಎದುರಿಸಲು ಸಾಧ್ಯವಾಗಲಿಲ್ಲ. ಆದರೆ ಅವರು ಬೌಲಿಂಗ್ ಮಾಡುವುದನ್ನು ನಾನು ನೋಡಿದೆ. ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದರು. ಆದರೂ ಅವರು ಮಾರಕವಾಗಿ ಕಾಣುತ್ತಿದ್ದರು ಎಂದು ಹೇಳಿದ್ದಾರೆ.

ದಾಖಲೆಗಳ ಹೊಸ್ತಿಲಿನಲ್ಲಿ ಕೊಹ್ಲಿ

ಇಂದೋರ್​: ಮೊದಲ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್‌ ಕೊಹ್ಲಿ(Virat Kohli) ಇಂದು ಇಂದೋರ್‌ನಲ್ಲಿ ಆಡಲಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿಗೆ ಹಲವು ದಾಖಲೆ ಬರೆಯುವ ಅವಕಾಶವಿದೆ. ವಿಶೇಷ ಎಂದರೆ ವಿರಾಟ್​ ಕೊಹ್ಲಿ 14 ತಿಂಗಳ ಬಳಿಕ ಭಾರತ ಪರ ಆಡುತ್ತಿರುವ ಟಿ20 ಪಂದ್ಯ(India vs Afghanistan, 2nd T20I) ಇದಾಗಿದೆ. ಅವರ ಮುಂದಿರುವ ದಾಖಲೆಯ ಪಟ್ಟಿ ಇಂತಿದೆ.

ಇದನ್ನೂ ಓದಿ : Sachin Tendulkar : ಮುದ್ದೇನಹಳ್ಳಿಯಲ್ಲಿ ಕ್ರಿಕೆಟ್​ ಆಡಲಿದ್ದಾರೆ ಸಚಿನ್​, ಯುವರಾಜ್​ ಸಿಂಗ್​

ರನ್​ ದಾಖಲೆ: ವಿರಾಟ್​ ಕೊಹ್ಲಿ ದ್ವಿತೀಯ ಟಿ20 ಪಂದ್ಯದಲ್ಲಿ ಕೇವಲ 35 ರನ್​ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಹಾಗೂ ವಿಶ್ವದ 4ನೇ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 11965* ರನ್​ ಗಳಿಸಿದ್ದಾರೆ. ಇದರಲ್ಲಿ 4008 ರನ್​ ಅಂತಾರಾಷ್ಟ್ರೀಯ ಟಿ20ಯಲ್ಲಿ ದಾಖಲಾಗಿದೆ. ಉಳಿದ ರನ್​ ಐಪಿಎಲ್​ನಲ್ಲಿ ಗಳಿಸಿದ್ದಾಗಿದೆ.

ಆಫ್ಘನ್​ ಎದುರು ಕೊಹ್ಲಿ ಅರ್ಧಶತಕ ಬಾರಿಸಿದರೆ ಟಿ20 ಕ್ರಿಕೆಟ್​ನಲ್ಲಿ ಟಿ20 ಕ್ರಿಕೆಟ್​ನಲ್ಲಿ 100 ಬಾರಿ 50+ ಸ್ಕೋರ್​ಗಳಿಸಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ದಾಖಲೆ ವೆಸ್ಟ್​ ಇಂಡೀಸ್​ ತಂಡದ ಮಾಜಿ ಆಟಗಾರ, ಯುನಿವರ್ಸ್​ ಬಾಸ್​ ಖ್ಯಾತಿಯ ಕ್ರಿಸ್​ ಗೇಲ್​ ಹೆಸರಿನಲ್ಲಿದೆ. ಗೇಲ್​ 110 ಬಾರಿ ಈ ಸಾಧನೆ ಮಾಡಿದ್ದಾರೆ. ಗೇಲ್​ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಕಾಣಿಸಿಕೊಂಡಿದ್ದಾರೆ. ವಾರ್ನರ್​ 107 ಬಾರಿ 50+ ಸ್ಕೋರ್​ಗಳಿದ್ದಾರೆ.

9 ಸಾವಿರ ಎಸೆತಗಳ ದಾಖಲೆ: ಎಸೆತಗಳನ್ನು ಎದುರಿಸುವ ಮೂಲಕವೂ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ. ಇಂದೋರ್​ನಲ್ಲಿ ನಡೆಯುವ ದ್ವಿತೀಯ ಟಿ20 ಪಂದ್ಯದಲ್ಲಿ ಕೊಹ್ಲಿ 28 ಎಸೆತಗಳನ್ನು ಎದುರಿಸಿದರೆ ಟಿ20ಯಲ್ಲಿ 9 ಸಾವಿರ ಎಸೆತಗಳನ್ನು ಎದುರಿಸಿದ ವಿಶ್ವದ 3ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. 14 ತಿಂಗಳ ಬಳಿಕ ಟಿ20 ಆಡುವ ಕೊಹ್ಲಿಗೆ ಮೂರು ದಾಖಲೆ ನಿರ್ಮಿಸುವ ಅವಕಾಶವಿದೆ.

Exit mobile version