ಪರ್ತ್ : ಟಿ೨೦ ವಿಶ್ವ ಕಪ್‌ಗೆ ಸಿದ್ದತೆ ನಡೆಸುತ್ತಿರುವ ಟೀಮ್ ಇಂಡಿಯಾ ಪರ್ತ್‌ನ ಕ್ರೀಡಾಂಗಣದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ತಂಡದ ವಿರುದ್ಧ ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಿದೆ. ಗುರುವಾರ ಎರಡನೇ ಪಂದ್ಯ ನಡೆದಿದ್ದು ಅದರಲ್ಲಿ ಭಾರತ ತಂಡ ೩೬ ರನ್‌ಗಳಿಂದ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಎದುರಾಳಿ ತಂಡದ ಪೇರಿಸಿದ್ದ ೧೬೯ ರನ್‌ಗಳಿಗೆ ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೧೩೩ ರನ್ ಬಾರಿಸಿತ್ತು. ಈ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಹೊರತಾಗಿಯೂ ರೋಹಿತ್ ಶರ್ಮ ಬ್ಯಾಟಿಂಗ್‌ಗೆ ಇಳಿದಿರಲಿಲ್ಲ. ಇದನ್ನು ಪ್ರಶ್ನಿಸಿ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಎಲ್ಲಿದ್ದಿಯಪ್ಪ ರೋಹಿತ್ ಶರ್ಮ ಎಂಬ ಅಭಿಯಾನ ನಡೆಸಿದ್ದರು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಅಂತೆಯೇ ಸೂರ್ಯಕುಮಾರ್ ಯಾದವ್ ಹಾಗೂ ಯಜ್ವೇಂದ್ರ ಚಹಲ್‌ಗೂ ವಿಶ್ರಾಂತಿ ನೀಡಲಾಗಿತ್ತು. ಅದರೆ ನಾಯಕ ರೋಹಿತ್ ಶರ್ಮ ಅವರು ತಂಡದಲ್ಲಿದ್ದರೂ, ಬ್ಯಾಟ್ ಮತ್ತು ಫೀಲ್ಡಿಂಗ್‌ಗೆ ಇಳಿದಿರಲಿಲ್ಲ.
ಆಡುವ ಬಳಗದಲ್ಲಿ ರೋಹಿತ್ ಶರ್ಮ ಅವರ ಹೆಸರಿತ್ತು. ಆದರೆ ಅವರು ಫೀಲ್ಡಿಂಗ್ ಮಾಡಲಿಲ್ಲ. ಬ್ಯಾಟ್ ಮಾಡಲೂ ಬರಲಿಲ್ಲ. ರಾಹುಲ್ ಬ್ಯಾಟ್ ಮಾಡಿದ್ದಾರೆ. ೧೬೯ ರನ್ ಚೇಸ್ ವೇಳೆ ೧೦೦ಕ್ಕಿಂತ ಕಡಿಮೆ ಸ್ಟ್ರೈಕ್‌ರೇಟ್‌ನಂತೆ ಬ್ಯಾಟ್ ಮಾಡಿದ್ದಾರೆ. ರಿಷಭ್ ಪಂತ್ ಮತ್ತೊಂದು ಬಾರಿ ಫೇಲ್ ಆಗಿದ್ದಾರೆ ಎಂದು ಅರಿತ್ರಾ ಮುಖರ್ಜಿ ಎಂಬುವರು ಬರೆದುಕೊಂಡಿದ್ದಾರೆ.
ಮಧ್ಯಮ ವೇಗಿ ಹರ್ಷಲ್ ಪಟೇಲ್ ೨೭ ರನ್‌ಗಳಿಗೆ ೨ ವಿಕೆಟ್ ಕಬಳಿಸಿರುವುದು ಟೀಮ್ ಇಂಡಿಯಾ ಪಾಲಿಗೆ ಶುಭ ಸುದ್ದಿಯಾಗಿದೆ. ಕಳೆದ ಹಲವು ಪಂದ್ಯಗಳಿಂದ ಅವರು ವಿಕೆಟ್ ಉರುಳಿಸುವಲ್ಲಿ ವೈಫಲ್ಯ ಕಂಡಿದ್ದರು. ಅಶ್ವಿನ್ ಕೂಡ ೩೨ ರನ್‌ಗಳಿಗೆ ೩ ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ | T20 World Cup | ಬ್ಯಾಟಿಂಗ್ ವೈಫಲ್ಯ; ಅಭ್ಯಾಸ ಪಂದ್ಯದಲ್ಲಿ ಭಾರತ ತಂಡಕ್ಕೆ ಹೀನಾಯ ಸೋಲು