Site icon Vistara News

INDvsSL | ಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಎಲ್ಲಿ ನಡೆಯುತ್ತದೆ? ಪಿಚ್​ ಹೇಗಿದೆ?

INDvsSL

ಮುಂಬಯಿ : ಶ್ರೀಲಂಕಾ ಮತ್ತು ಭಾರತ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಮುಂಬಯಿಯ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆಯಲಿದೆ. 2023ರಲ್ಲಿ ಟೀಮ್ ಇಂಡಿಯಾಗೆ ಇದು ಮೊದಲ ಕ್ರಿಕೆಟ್​ ಪಂದ್ಯವಾಗಿದ್ದು ಗೆಲುವಿನ ಮೂಲಕ ಅಭಿಯಾನ ಆರಂಭಿಸಲಿದೆ. ಅತ್ತ ಲಂಕಾ ಪ್ರೀಮಿಯರ್​ ಲೀಗ್ ಮುಗಿಸಿಕೊಂಡು ಬಂದಿರುವ ಶ್ರೀಲಂಕಾ ತಂಡವೂ ಬಲಿಷ್ಠ ಭಾರತದ ಸವಾಲನ್ನು ಎದುರಿಸಲು ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ. ಆದರೂ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತಕ್ಕೆ 2024ರ ವಿಶ್ವ ಕಪ್​ ಹಿನ್ನೆಲೆಯಲ್ಲಿ ಸವಾಲಿನ ಸರಣಿಯೇ ಆಗಲಿದೆ.

ಪಿಚ್ ರಿಪೋರ್ಟ್​​

ಭಾರತ ಹಾಗೂ ಶ್ರೀಲಂಕಾ ನಡುವಿನ ಈ ಹಣಾಹಣಿ ಮಂಬಯಿಯ ಪ್ರಸಿದ್ಧ ವಾಂಖೆಡೆ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡಿದೆ. ಇದು ಬ್ಯಾಟಿಂಗ್​ಗೆ ಅನುಕೂಲಕರ ಪಿಚ್​ ಎಂಬುದು ಈ ಹಿಂದೆ ಹಲವು ಬಾರಿ ಸಾಬೀತಾಗಿತ್ತು. ಸಣ್ಣ ಬೌಂಡರಿಗಳಿಂದಾಗಿ ದೊಡ್ಡ ಮೊತ್ತ ಸಂಗ್ರಹ ಖಾತರಿ. ಪಂದ್ಯದ ಆರಂಭಿಕ ಹಂತದಲ್ಲಿ ಬೌಲರ್​ಗಳು ಕೂಡ ಪಿಚ್​ನ ನೆರವು ಪಡೆಯಬಲ್ಲರು. ಸಮುದ್ರ ತಟದಲ್ಲಿರುವ ಮುಂಬಯಿಯಲ್ಲಿ ರಾತ್ರಿ ವೇಳೆ ಇಬ್ಬನಿ ಪರಿಣಾಮ ಎದುರಾಗಲಿದೆ. ಈ ವೇಳೆ ಬೌಲರ್​ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಗುತ್ತದೆ. ಇದುವರಗೆ ಈ ಸ್ಟೇಡಿಯಮ್​ನಲ್ಲಿ ನಡೆದಿರುವ 41 ಪಂದ್ಯಗಳಲ್ಲಿ 24 ಹಣಾಹಣಿಗಳಲ್ಲಿ ಚೇಸಿಂಗ್​ ಮಾಡಿದ ತಂಡ ಜಯ ಸಾಧಿಸಿದೆ.

ಹವಾಮಾನ ಹೇಗಿರಲಿದೆ?

ಮುಂಬಯಿಯಲ್ಲಿ ಚಳಿಗಾಲ ಕೊನೇ ಹಂತದಲ್ಲಿದೆ. ಮಳೆಯ ಸೂಚನೆ ಇಲ್ಲ. ಪಂದ್ಯ ನಡೆಯುವ ವೇಳೆ ಸುಮಾರು 20 ಡಿಗ್ರಿ ಸೆಲ್ಸಿಯಸ್​ ತಾಪಮಾನವಿರಲಿದೆ.

ಪಂದ್ಯದ ವಿವರ

ಎಲ್ಲಿ ನಡೆಯುತ್ತದೆ ಪಂದ್ಯ

ಮುಂಬಯಿಯ ವಾಂಖೆಡೆ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯಲಿದೆ.

ಎಷ್ಟು ಹೊತ್ತಿಗೆ ಪಂದ್ಯ ಆರಂಭ

ಪಂದ್ಯ ಸಂಜೆ 7 ಗಂಟೆಗೆ ಅರಂಭವಾಗಲಿದೆ.

ನೇರ ಪ್ರಸಾರ ಎಲ್ಲಿ

ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್​ ನೆಟ್ವರ್ಕ್​ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಡಿಸ್ನಿ ಹಾಟ್​ ಸ್ಟಾರ್​ನಲ್ಲಿ ಲೈವ್ ಸ್ಟ್ರೀಮಿಂಗ್​ ಆಗಿದೆ.

ಸಂಭಾವ್ಯ ತಂಡಗಳು

ಭಾರತ

ಇಶಾನ್ ಕಿಶನ್, ಶುಬ್ಮನ್ ಗಿಲ್/ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ಅಕ್ಷರ್ ಪಟೇಲ್, ಅರ್ಶ್​ದೀಪ್​ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಯಜ್ವೇಂದ್ರ ಚಹಲ್​.

ಶ್ರೀಲಂಕಾ

ಪಾಥುಮ್ ನಿಸಾಂಕ, ಕುಸಾಲ್‌ ಮೆಂಡಿಸ್ (ವಿ.ಕೀ), ಆವಿಷ್ಕಾ ಫೆರ್ನಾಂಡೊ, ಚರಿತ ಅಸಲಂಕ, ಭಾನುಕಾ ರಾಜಪಕ್ಷ, ದಸುನ್‌ ಶನಕ(ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್‌ ತೀಕ್ಷಣ, ಲಾಹಿರು ಕುಮಾರ, ದಿಲ್ಷಾನ್‌ ಮದುಸೂದನ್‌

ಇದನ್ನೂ ಓದಿ | INDvsSL | ಲಂಕಾ ಸರಣಿಯಲ್ಲಿ ಯುವ ಆಟಗಾರರಿಗೆ ಭರಪೂರ ಅವಕಾಶ; ಗಿಲ್​, ಗಾಯಕ್ವಾಡ್​ ನಡುವೆ ಪೈಪೋಟಿ

Exit mobile version