Site icon Vistara News

INDvsSL | ಲಂಕಾ ವಿರುದ್ಧ ಏಕ ದಿನ ಪಂದ್ಯ ನಡೆಯುವುದು ಎಲ್ಲಿ? ಎಷ್ಟು ಗಂಟೆಗೆ ಆರಂಭ, ಪಿಚ್​ ಹೇಗಿದೆ?

barsapara

ಗುವಾಹಟಿ : ಭಾರತ ಹಾಗೂ ಪ್ರವಾಸಿ ಶ್ರೀಲಂಕಾ (INDvsSL) ನಡುವಿನ ಟಿ20 ಸರಣಿಯ ಶನಿವಾರ (ಜನವರಿ 7ರಂದು) ಮುಕ್ತಾಯಗೊಂಡಿದ್ದು, 2-1 ಅಂತರದಿಂದ ಟೀಮ್​ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಇದೀಗ ಏಕ ದಿನಗಳ ಪಂದ್ಯಕ್ಕೆ ಭಾರತ ಸಜ್ಜಾಗಿದ್ದು, ಮೊದಲ ಪಂದ್ಯ ಮಂಗಳವಾರ (ಜನವರಿ 10) ನಡೆಯಲಿದೆ. ಮೊದಲ ಪಂದ್ಯದಲ್ಲಿ ವಿಜಯ ಸಾಧಿಸಿ ಸರಣಿಯನ್ನೂ ವಶಪಡಿಸಿಕೊಳ್ಳುವುದು ಭಾರತ ತಂಡದ ಇರಾದೆಯಾಗಿದೆ.

ಲಂಕಾ ಮತ್ತು ಭಾರತ ನಡುವಿನ ಮೊದಲ ಪಂದ್ಯ ಅಸ್ಸಾಮ್​ ರಾಜ್ಯದ ರಾಜಧಾನಿ ಗುವಾಹಟಿಯಲ್ಲಿ ನಡೆಯಿದೆ. ಇಲ್ಲಿನ ಬರ್ಸಾಪಾರ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಈ ಪಂದ್ಯ ಆಯೋಜನೆಗೊಂಡಿದೆ. 50 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಈ ಗ್ರೌಂಡ್​ನಲ್ಲಿ ಜಿದ್ದಾಜಿದ್ದಿ ಹೋರಾಟ ನಡೆಯುವು ನಿಶ್ಚಿತ.

ಬರ್ಸಾಪಾರ ಕ್ರಿಕೆಟ್​ ಸ್ಟೇಡಿಯಮ್​ ಬ್ಯಾಟ್ಸ್​ಮನ್​ಗಳ ಸ್ವರ್ಗ. ಇಲ್ಲಿ ದೊಡ್ಡ ಮೊತ್ತದ ಸ್ಕೋರ್​ ದಾಖಲಾಗುತ್ತದೆ. 2018ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧದ ಏಕ ದಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ವಿಂಡೀಸ್ ಬಳಗ 8 ವಿಕೆಟ್​ಗೆ 322 ರನ್ ಬಾರಿಸಿತ್ತು. 43 ಓವರ್​ಗಳಲ್ಲಿಯೇ ಭಾರತ ತಂಡ ಈ ಗುರಿಯನ್ನು ಭೇದಿಸಿತ್ತು. ಈ ಸ್ಟೇಡಿಯಮ್​ನಲ್ಲಿ ಚೇಸಿಂಗ್​ ಮಾಡುವುದು ಸುಲಭ. ಹೀಗಾಗಿ ಟಾಸ್​ ಗೆದ್ದವರು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಗುವಾಹಟಿಯಲ್ಲಿ ತಿಳಿಯಾದ ವಾತಾವರಣವಿದೆ. ಮಳೆಯ ನಿರೀಕ್ಷೆಯಿಲ್ಲ. ಹೀಗಾಗಿ ಪಂದ್ಯ ಸಾಂಗವಾಗಿ ನಡೆಯಲಿದೆ. ಕಳೆದ ವರ್ಷ ಇಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯ ನಡೆದಾಗ ಮೈದಾನಕ್ಕೆ ಹಾವು ಬಂದಿತ್ತು. ಅದಕ್ಕೆ ಅಲ್ಲಿನ ಕ್ರಿಕೆಟ್​ ಅಸೋಸಿಯೇಶನ್​ ಪರಿಹಾರ ಕಂಡುಕೊಳ್ಳಲಿದೆ.

ಪಂದ್ಯ ಎಷ್ಟು ಗಂಟೆಗೆ ಆರಂಭ: ಮಧ್ಯಾಹ್ನ 1.30 ಕ್ಕೆ ಹಣಾಹಣಿ ಆರಂಭವಾಗಲಿದೆ. 1 ಗಂಟೆಗೆ ಟಾಸ್​ ಪ್ರಕ್ರಿಯೆ ನಡೆಯಲಿದೆ.

ನೇರ ಪ್ರಸಾರ ಎಲ್ಲಿ: ಸ್ಟಾರ್​ ಸ್ಪೋರ್ಟ್ಸ್​​ ನೆಟ್ವರ್ಕ್​ ಚಾನೆಲ್​ಗಳಲ್ಲಿ ಪಂದ್ಯದ ನೇರ ಪ್ರಸಾರವಾಗಲಿದೆ. ಡಿಸ್ನಿ ಹಾಟ್​ಸ್ಟಾರ್​ ಚಾನೆಲ್​ಗಳಲ್ಲಿ ನೇರ ಪ್ರಸಾರವಾಗಲಿದೆ.

ಸಂಭಾವ್ಯ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಶುಬ್ಮನ್​ ಗಿಲ್​, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್​ಕೀಪರ್​) ಸೂರ್ಯಕುಮಾರ್ ಯಾದವ್/ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಅಕ್ಷರ್​ ಪಟೇಲ್​ , ಯಜ್ವೇಂದ್ರ ಚಹಲ್/ಕುಲ್ದೀಪ್​ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಅರ್ಶ್​ದೀಪ್​ ಸಿಂಗ್, ಉಮ್ರಾನ್​ ಮಲಿಕ್​.

ಶ್ರೀಲಂಕಾ: ದಾಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್ (ವಿಕೆಟ್​ಕೀಫರ್​), ಪಾಥುಮ್ ನಿಸ್ಸಂಕ, ಅವಿಷ್ಕ ಫರ್ನಾಂಡೋ, ಧನಂಜಯ ಡಿ ಸಿಲ್ವ, ಚರಿತ್ ಅಸಲಂಕ, ವನಿಂದು ಹಸರಂಗ, ಚಾಮಿಕ ಕರುಣಾರತ್ನ, ಮಹೀಶ್ ತೀಕ್ಷಣ, ಕಸುನ್​ ರಜಿತ, ದಿಲ್ಶನ್​ ಮದುಶಂಕ/ಲಾಹಿರು ಕುಮಾರ.

ಇದನ್ನೂ ಓದಿ | INDvsSL | ಘಟಾನುಘಟಿಗಳಿರುವ ಟೀಮ್​ ಇಂಡಿಯಾಗೆ ಆಯ್ಕೆ ಸಮಸ್ಯೆ; ಮೊದಲ ಏಕ ದಿನ ಪಂದ್ಯದಲ್ಲಿ ಯಾರಿಗೆಲ್ಲ ಅವಕಾಶ?

Exit mobile version