ಜೊಹಾನ್ಸ್ಬರ್ಗ್ : ಹಿರಿಯರ ಕ್ರಿಕೆಟ್ ತಂಡಗಳಿಗೆ ಇದ್ದಂತೆ ಪುರುಷರ 19 ವರ್ಷದೊಳಗಿನ ತಂಡಕ್ಕೂ ವಿಶ್ವ ಕಪ್ ಆಯೋಜನೆಗೊಳ್ಳುತ್ತದೆ. ಆದರೆ 19 ವರ್ಷದೊಳಗಿನ ಮಹಿಳೆಯರಿಗೆ ವಿಶ್ವ ಕಪ್ ಇರಲಿಲ್ಲ. ಆದರೆ, ಈಬಾರಿ ಐಸಿಸಿ ಅವರಿಗೂ ವಿಶ್ವ ಕಪ್ ಆಯೋಜನೆ ಮಾಡಿದೆ. ಜನವರಿ 14ರಂದು ಮೊಟ್ಟ ಮೊದಲ ಆವೃತ್ತಿಯ ಮಹಿಳೆಯರ 19 ವರ್ಷದೊಳಗಿನವರ ವಿಶ್ವ ಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.
ಉದ್ಘಾಟನಾ ಆವೃತ್ತಿಯ ವಿಶ್ವ ಕಪ್ ಆಯೋಜನೆಯ ಆತಿಥ್ಯ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಗೆ ಲಭಿಸಿದೆ. ಒಟ್ಟು 16 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಜನವರಿ 29ರಂದು ಪೊಚೆಫ್ಸ್ಟ್ರೂಮ್ನಲ್ಲಿ ಫೈನಲ್ ಪಂದ್ಯ ಆಯೋಜನೆಗೊಂಡಿದೆ.
ವಿಶ್ವ ಕಪ್ನಲ್ಲಿ ಪಾಲ್ಗೊಳ್ಳುವ ಒಟ್ಟು 16 ತಂಡಗಳನ್ನು ತಲಾ ನಾಲ್ಕು ತಂಡಗಳಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಮೂರು ತಂಡಗಳಂತೆ ಒಟ್ಟು 12 ತಂಡಗಳು ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲಿದೆ. 12 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಆ ಗುಂಪುಗಳ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಪ್ರವೇಶ ಪಡೆಯಲಿವೆ. ಅಲ್ಲಿಂದ ಎರಡು ತಂಡಗಳು ಫೈನಲ್ಗೆ ಎಂಟ್ರಿ ಗಿಟ್ಟಿಸಲಿವೆ.
ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಯುಎಸ್ಎ ಇದ್ದರೆ, ಬಿ ಗುಂಪಿನಲ್ಲಿ ಇಂಗ್ಲೆಂಡ್, ಪಾಕಿಸ್ತಾನ, ರುವಾಂಡಾ ಮತ್ತು ಜಿಂಬಾಬ್ವೆ ತಂಡಗಳಿವೆ. ಇಂಡೋನೇಷ್ಯಾ, ಐರ್ಲೆಂಡ್, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸಿ ಗುಂಪಿನಲ್ಲಿದ್ದರೆ, ಭಾರತ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಯುಎಇ ಡಿ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ.
ನೇರ ಪ್ರಸಾರ ಎಲ್ಲಿ?
ಭಾರತದಲ್ಲಿ ವಿಶ್ವ ಕಪ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ಗಳಲ್ಲಿ ಪ್ರಸಾರವಾಗಲಿವೆ. ಈ ಪಂದ್ಯಗಳು ಡಿಸ್ನಿ ಹಾಟ್ ಸ್ಟಾರ್ನಲ್ಲೂ ಲೈವ್ ಸ್ಟ್ರೀಮ್ ಆಗಲಿವೆ.
ಭಾರತ ತಂಡ:
ಭಾರತ: ಶಫಾಲಿ ವರ್ಮಾ (ಸಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ರಿಚಾ ಘೋಷ್ (ವಾಕ್), ಜಿ ತ್ರಿಶಾ, ಸೌಮ್ಯ ತಿವಾರಿ, ಸೋನಿಯಾ ಮೆಹದಿಯಾ, ಹರ್ಲಿ ಗಾಲಾ, ಹೃಷಿತಾ ಬಸು (ವಿಕೆಟ್ಕೀಪಟ್), ಸೋನಮ್ ಯಾದವ್, ಮನ್ನತ್ ಕಶ್ಯಪ್, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ಟಿಟಾಸ್ ಸಾಧು, ಫಲಕ್ ನಾಜ್, ಶಬನಮ್
ಇದನ್ನೂ ಓದಿ | Hockey World Cup | ಈ ಬಾರಿ ಭಾರತ ಹಾಕಿ ವಿಶ್ವ ಕಪ್ ಗೆಲ್ಲಲಿದೆ; ಪಿ.ಆರ್.ಶ್ರೀಜೇಶ್ ವಿಶ್ವಾಸ